PHOTOS

ಈ ಒಂದು ಪದಾರ್ಥದಿಂದ ಮುಖವನ್ನು ಮಸಾಜ್‌ ಮಾಡಿ..ನಿಮ್ಮ ತ್ವಚೆ ಚಿನ್ನದಂತೆ ಕಂಗೊಳಿಸುತ್ತದೆ

ಮಸಾಜ್ ಮಾಡುವುದರಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ ಯೌವನದಿಂದ ಕೂಡಿರುತ್ತದೆ.  ಹಾಗಾದರೆ ಈ ಮಸಾಜ್ ಅನ್ನು ಹೇಗೆ ಮಾಡಬೇಕು ಎಂಬ...

Advertisement
1/9

ತುಪ್ಪದಿಂದ ಮಸಾಜ್ ಮಾಡುವುದರಿಂದ ನಮ್ಮ ತ್ವಚೆಯು ಹೊಳೆಯುವುದಲ್ಲದೆ ಯೌವನದಿಂದ ಕೂಡಿರುತ್ತದೆ.  ಹಾಗಾದರೆ ಈ ಮಸಾಜ್ ಅನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ...

2/9

ತುಪ್ಪದಲ್ಲಿ ವಿಟಮಿನ್ ಮತ್ತು ಕೊಬ್ಬಿನಾಮ್ಲಗಳಿವೆ, ಇದರ ಕಾರನ ತುಪ್ಪ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ತುಪ್ಪ ನಮ್ಮ ದೇಹದಲ್ಲಿ ಕೊಲಾಜೆನ್ ಉತ್ಪಾದನೆಯನ್ನು ಹೆಚ್ಚಿಸುವುದು ಅಷ್ಟೆ ಅಲ್ಲದೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.  

3/9

ಯಾವಾಗಲೂ ಉತ್ತಮ ಗುಣಮಟ್ಟದ ನೈಸರ್ಗಿಕ ತುಪ್ಪವನ್ನು ಬಳಸಿ ನಿಮ್ಮ ಮುಖವನ್ನು ಮಸಾಜ್‌ ಮಾಡಿ, ಇದರಿಂದ ನಿಮ್ಮ ಚರ್ಮ ಕಾಂತಿಯುತವಾಗುತ್ತದೆ.  

4/9

ತುಪ್ಪವನ್ನು ಮುಖಕ್ಕೆ ಹಚ್ಚುವ ಮುನ್ನ ಸೋಪ್‌ ಹಾಕಿ ಮುಕವನ್ನು ಸ್ವಚ್ಛಗೊಳಿಸಿ ನಂತರ ತೇವವಿಲ್ಲದೆ ಒರೆಸಿ, ಮಸಾಜ್‌ ಮಾಡಿ.  

5/9

ಸ್ವಲ್ಪ ಪ್ರಮಾಣದಲ್ಲಿ ತುಪ್ಪವನ್ನು ತೆಗೆದುಕೊಂಡು ಬಾನಲೆಗೆ ಹಾಕಿ ಬಿಸಿ ಮಾಡಿ. ಬಸಿ ಮಾಡಿದ ತುಪ್ಪವನ್ನು ಆರಲು ಬಿಡಿ, ಸ್ವಲ್ಪ ಸಮಯದ ನಂತರ ತುಪ್ಪವನ್ನು ಬೆರಳಿನಲ್ಲಿ ತೆಗೆದುಕೊಂಡು ಮುಕದ ಮೇಲೆ ಹಚ್ಚಿ ಮಸಾಜ್‌ ಮಾಡಿ.  

6/9

ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಮುಖದ ಮೇಲೆ ನಿಧಾನವಾಗಿ ಮಸಾಜ್‌ ಮಾಡುತ್ತಾ ಹೋಗಿ, ಮುಖದ ಮೇಲೆ ಗೆರೆಗಳು ಮತ್ತು ಕಲೆಗಳಿರುವ ಜಾಗಗಳ ಮೇಲೆ ಸ್ವಲ್ಪ ಹೆಚ್ಚು ಒತ್ತಡವನ್ನು ನೀಡಿ ನಿಧಾನವಾಗಿ ನಿಮ್ಮ ಚರ್ಮವನ್ನು ಮಸಾಜ್‌ ಮಾಡಿ.  

7/9

ಹೆಚ್ಚು ಸುಕ್ಕುಗಳು ಹಾಗೂ ಕಣ್ಣು ಮತ್ತು ಬಾಯಿಯ ಸುತ್ತಲೂ ತುಪ್ಪವನ್ನು ಚೆನ್ನಾಗಿ ಹಚ್ಚಿ ಮಸಾಜ್‌ ಮಾಡಿ.  

8/9

ನಿಮ್ಮ ಚರ್ಮದ ಮೇಲೆ ಚೆನ್ನಾಗಿ ಮಸಾಜ್‌ ಮಾಡಿದ ನಂತರ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಇರಿಸಿ, ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ಚೆನ್ನಾಗಿ ತೊಳೆಯಿರಿ.  

9/9

ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.





Read More