PHOTOS

Post Office Schemes: ಅಂಚೆ ಕಚೇರಿಯ ಈ ಯೋಜನೆಗಳಲ್ಲಿ ಸಣ್ಣ ಉಳಿತಾಯದ ಮೂಲಕ ಲಕ್ಷಾಂತರ ರೂ. ಗಳಿಸಿ

Post Office Scheme: ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಬಹುದು. ಅಂತ...

Advertisement
1/6
ಉಳಿತಾಯ ಯೋಜನೆಗಳು
ಉಳಿತಾಯ ಯೋಜನೆಗಳು

ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಮೆಚ್ಯೂರಿಟಿಯ ಮೇಲೆ ಹೆಚ್ಚಿನ ಆದಾಯವನ್ನು ಪಡೆಯಬಹುದು. ಇದಕ್ಕಾಗಿ ಸರ್ಕಾರವು ಹಲವು ಯೋಜನೆಗಳನ್ನು ನಡೆಸುತ್ತಿದೆ. ಅಂಚೆ ಕಚೇರಿ ನಡೆಸುತ್ತಿರುವ ಅಂತಹ ಸಣ್ಣ ಉಳಿತಾಯ ಯೋಜನೆಗಳ ಬಗ್ಗೆ ಇಲ್ಲಿದೆ ಮಾಹಿತಿ. 

2/6
ಪಿ‌ಪಿ‌ಎಫ್
ಪಿ‌ಪಿ‌ಎಫ್

ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.5ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. ಪ್ರಸ್ತುತ ಸರ್ಕಾರವು ಈ ಯೋಜನೆಯಲ್ಲಿ 7.1% ಬಡ್ಡಿಯನ್ನು ನೀಡುತ್ತಿದೆ. 

3/6
ಪಿಪಿಎಫ್‌ನಲ್ಲಿ 500 ರೂ. ಹೂಡಿಕೆ ಮಾಡಿ ಲಕ್ಷಾಂತರ ರೂ. ಗಳಿಸಿ
ಪಿಪಿಎಫ್‌ನಲ್ಲಿ 500 ರೂ. ಹೂಡಿಕೆ ಮಾಡಿ ಲಕ್ಷಾಂತರ ರೂ. ಗಳಿಸಿ

ಪಿಪಿಎಫ್‌ನಲ್ಲಿ ಪ್ರತಿ ತಿಂಗಳು  500 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ ನೀವು 7.1 ಬಡ್ಡಿ ದರದಲ್ಲಿ 15 ವರ್ಷಗಳಲ್ಲಿ 1,62,728 ರೂಪಾಯಿಗಳನ್ನು ಪಡೆಯುತ್ತೀರಿ. ಒಂದೊಮ್ಮೆ ನೀವು ನಿಮ್ಮ ಹೂಡಿಕೆಯನ್ನು 5-5 ವರ್ಷಗಳವರೆಗೆ ವಿಸ್ತರಿಸಿದರೆ 20 ವರ್ಷಗಳಲ್ಲಿ 2,66,332 ಮತ್ತು 25 ವರ್ಷಗಳಲ್ಲಿ 4,12,321 ರೂ.ಗಳನ್ನು ಸಂಗ್ರಹಿಸಬಹುದು.   

4/6
ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆ

ನಿಮ್ಮ ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಎಸ್‌ಎಸ್‌ವೈ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ 250ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದು. 

5/6
ಎಸ್‌ಎಸ್‌ವೈ ಹೂಡಿಕೆಯ ಮೇಲೆ ಸಿಗುವ ಲಾಭ
ಎಸ್‌ಎಸ್‌ವೈ ಹೂಡಿಕೆಯ ಮೇಲೆ ಸಿಗುವ ಲಾಭ

ಪ್ರಸ್ತುತ ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)ಯಲ್ಲಿ ಶೇ.8.2ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀವು ತಿಂಗಳಿಗೆ 500 ರೂ.ಗಳನ್ನು ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ ಒಟ್ಟು 90,000 ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ. ಇದಕ್ಕೆ 8.2% ಬಡ್ಡಿದರದಂತೆ 21 ವರ್ಷಗಳಲ್ಲಿ  2,77,103 ರೂಪಾಯಿಗಳನ್ನು ಕಲೆ ಹಾಕಬಹುದು. 

6/6
ಪೋಸ್ಟ್ ಆಫೀಸ್ ಆರ್‌ಡಿ
ಪೋಸ್ಟ್ ಆಫೀಸ್ ಆರ್‌ಡಿ

ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಪೋಸ್ಟ್ ಆಫೀಸ್ ಆರ್‌ಡಿ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಪ್ರಸ್ತುತ, ಅಂಚೆ ಕಚೇರಿಯ ಆರ್‌ಡಿಯಲ್ಲಿ ಹೂಡಿ,ಎ ಮೇಲೆ 6.7%ಬಡ್ಡಿ ಲಭ್ಯವಿದೆ. ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ತಿಂಗಳಿಗೆ 500 ರೂ. ಹೂಡಿಕೆ ಮಾಡುವುದರಿಂದ 5 ವರ್ಷಗಳಲ್ಲಿ ಆರ್‌ಡಿ ಮೆಚ್ಯೂರಿಟಿಯ ವೇಳೆಗೆ 35,681 ರೂಪಾಯಿಗಳನ್ನು ಪಡೆಯಬಹುದಾಗಿದೆ. 





Read More