PHOTOS

Gemology: ಜಾತಕದಲ್ಲಿ ಶನಿ ದುರ್ಲಬನಾಗಿದ್ದರೆ ಇಂದೇ ಈ ರತ್ನವನ್ನು ಧರಿಸಿ, ಆರ್ಥಿಕ ಸಮಸ್ಯೆಗಳಿಂದಲೂ ಸಿಗುತ್ತೆ ಪರಿಹಾರ

Gemology: ಶನಿ ದೋಷದಿಂದ ಆರ್ಥಿಕ ಸಮಸ್ಯೆಗಳವರೆಗೆ ಜಾತಕದಲ್ಲಿ ನೀಲಿ ನೀಲಮಣಿ ರತ್ನವನ್ನು ಧರಿಸುವುದರಿಂದ ಆಗುವ ...

Advertisement
1/8
ರತ್ನ ಶಾಸ್ತ್ರ
 ರತ್ನ ಶಾಸ್ತ್ರ

ಜ್ಯೋತಿಷ್ಯ ಶಾಸ್ತ್ರದಂತೆ ರತ್ನ ಶಾಸ್ತ್ರಕ್ಕೂ ಅದರದೇ ಆದ ಪ್ರಾಮುಖ್ಯತೆ ಇದೆ. ರತ್ನ ಧಾರಣೆಯಿಂದ ನಿರ್ದಿಷ್ಟ ಗ್ರಹ ದೋಷಗಳನ್ನು ನಿವಾರಿಸಬಹುದು. 

2/8
ರತ್ನ ಧಾರಣೆ
ರತ್ನ ಧಾರಣೆ

ರತ್ನ ಶಾಸ್ತ್ರದ ಪ್ರಕಾರ, ನಿಮ್ಮ ಜಾತಕದಲ್ಲಿ ಯಾವ ಗ್ರಹಗಳ ದೋಷ ಇದೆಯೋ ಆ ಗ್ರಹಗಳ ದೋಷ ನಿವಾರಿಸಲು ವ್ಯಕ್ತಿಯು ನಿಯಮಿತವಾಗಿ ರತ್ನ ಧಾರಣೆ ಮಾಡುವುದು ಲಾಭದಾಯಕ ಮತ್ತು ಆ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂಬ ನಂಬಿಕೆಯಿದೆ. 

3/8
ನೀಲಮಣಿ
 ನೀಲಮಣಿ

ರತ್ನಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಕರ್ಮಫಲದಾತ ಶನಿ ದುರ್ಬಲನಾಗಿದ್ದಾಗ ಅಂತಹವರು ಜ್ಯೋತಿಷಿಗಳ ಸಲಹೆ ಪಡೆದು ನೀಲಮಣಿ ಧರಿಸುವುದು ತುಂಬಾ ಶುಭ. 

4/8
ನೀಲಮಣಿಯಿಂದ ಅದೃಷ್ಟ
ನೀಲಮಣಿಯಿಂದ ಅದೃಷ್ಟ

ಜಾತಕದಲ್ಲಿ ಶನಿ ದೋಷ ಇದ್ದವರು ನೀಲಮಣಿ ರತ್ನವನ್ನು ಧರಿಸುವುದರಿಂದ ಅವರ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ. 

5/8
ನೀಲಮಣಿ ಧಾರಣೆ ಪ್ರಯೋಜನಗಳು
ನೀಲಮಣಿ ಧಾರಣೆ ಪ್ರಯೋಜನಗಳು

ನೀಲಮಣಿ ಧಾರಣೆಯಿಂದ ಆರ್ಥಿಕ ಸಂಕಷ್ಟಗಳು ದೂರವಾಗಿ, ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ ವ್ಯಕ್ತಿಯ ಕೋಪ ಕಡಿಮೆಯಾಗಿ ತಾಳ್ಮೆ ಬರುತ್ತದೆ.  ಆದಾಗ್ಯೂ, ಈ ರತ್ನವನ್ನು ಧರಿಸುವ ಮೊದಲು ಕೆಲವು ನಿಯಮಗಳನ್ನು ತಿಳಿಯುವುದು ಅಗತ್ಯ. 

6/8
ನೀಲಮಣಿ ಧರಿಸುವ ಸರಿಯಾದ ವಿಧಾನ
 ನೀಲಮಣಿ ಧರಿಸುವ ಸರಿಯಾದ ವಿಧಾನ

ಜಾತಕದಲ್ಲಿ ಶನಿ ದೋಷ ಇದ್ದವರಷ್ಟೇ ಜ್ಯೋತಿಷಿಗಳ ಸಲಹೆ ಪಡೆದು ನೀಲಮಣಿ ರತ್ನ ಧರಿಸಬೇಕು. ಉತ್ತಮ ಫಲಿತಾಂಶಕ್ಕಾಗಿ ನೀಲಮಣಿಯನ್ನು ಪಂಚಧಾತುಗಳಲ್ಲಿ ಹೊಂದಿಸಿ ಉಂಗುರ ಮಾಡಿಸಿ ಅದನ್ನು ಎಡಗೈನಲ್ಲೇ ಧರಿಸಬೇಕು. ಶನಿವಾರ ಮಧ್ಯರಾತ್ರಿ ಈ ಉಂಗುರ ಧಾರಣೆ ಮಾಡುವುದು ಹೆಚ್ಚು ಲಾಭದಾಯಕ. 

7/8
ದಾನ
ದಾನ

ನೀಲಮಣಿ ಧರಿಸಿದ ಬಳಿಕ ಶನಿ ಗ್ರಹಕ್ಕೆ ಸಂಬಂಧಿಸಿದ ಕಪ್ಪು ಬಟ್ಟೆ, ಸಾಸಿವೆ ಎಣ್ಣೆ, ಕಬ್ಬಿಣ, ಕಪ್ಪೆಳ್ಳು, ಕಪ್ಪು ಕಂಬಳಿಯಂತಹ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಅಗತ್ಯವಿದ್ದವರಿಗೆ ದಾನ ಮಾಡಿದರೆ ಒಳ್ಳೆಯದು. 

8/8
ಸೂಚನೆ
ಸೂಚನೆ

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More