PHOTOS

Weight Loss: ಹೊಟ್ಟೆ ಸುತ್ತಲಿನ ಫ್ಯಾಟ್ ಕರಗಿಸಲು ಸಂಜೀವಿನಿ ಇದ್ದಂತೆ ಈ ಹಣ್ಣು

Fruits For Weight Loss: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಒಂದೇ ಒಂದು ಹಣ್ಣು ತುಂಬಾ ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದೆ. ಯಾವುದೀ ಹಣ್ಣು,...

Advertisement
1/6
ತೂಕ ಇಳಿಕೆಗಾಗಿ ಹಣ್ಣು
ತೂಕ ಇಳಿಕೆಗಾಗಿ ಹಣ್ಣು

ತೂಕ ಇಳಿಕೆಗಾಗಿ ಅದರಲ್ಲೂ ಹೊಟ್ಟೆಯ ಸುತ್ತಲೂ ಶೇಖರಣೆಯಾಗಿರುವ ಫ್ಯಾಟ್ ಅನ್ನು ಕರಗಿಸಲು ಪ್ರಯತ್ನಿಸುವವರಿಗೆ ಒಂದೇ ಒಂದು ಹಣ್ಣು ಸಂಜೀವಿನಿಯಂತೆ ಕಾರ್ಯನಿರ್ವಹಿಸಲಿದೆ. ಅದುವೇ 'ಅಂಜೂರ'ದ ಹಣ್ಣು. 

2/6
ಅಂಜೂರ
ಅಂಜೂರ

ಹೌದು, ಅಂಜೂರದ ಹಣ್ಣು ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಫೈಬರ್ ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿಯೇ ಇದನ್ನು ತೂಕ ಇಳಿಸಿಯ ಸಂಜೀವಿನಿ ಎಂದು ಕರೆಯಲಾಗುತ್ತದೆ. ಆದರೆ, ತೂಕ ಇಳಿಕೆಗಾಗಿ ಅಂಜೂರದ ಹಣ್ಣನ್ನು ಯಾವಾಗ, ಹೇಗೆ ತಿನ್ನಬೇಕು ಎಂಬುದನ್ನು ತಿಳಿದಿರಬೇಕು. 

3/6
ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣು
ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣು

ಆಹಾರ ತಜ್ಞರ ಪ್ರಕಾರ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ. 

4/6
ವೇಗವಾಗಿ ತೂಕ ಇಳಿಕೆ
ವೇಗವಾಗಿ ತೂಕ ಇಳಿಕೆ

ಅಂಜೂರದ ಹಣ್ಣಿನಲ್ಲಿ ಫಿಸಿನ್ ಎಂಬ ಜೀರ್ಣಕಾರಿ ಕಿಣ್ವ ಕಂಡುಬರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ ಆಗಿರುವುದರಿಂದ ವೇಗವಾಗಿ ತೂಕ ಇಳಿಕೆ ಸಾಧ್ಯವಾಗುತ್ತದೆ. 

5/6
ಅಂಜೂರದ ಹಣ್ಣನ್ನು ಹೇಗೆ ತಿನ್ನಬೇಕು?
ಅಂಜೂರದ ಹಣ್ಣನ್ನು ಹೇಗೆ ತಿನ್ನಬೇಕು?

ಆರೋಗ್ಯ ತಜ್ಞರ ಪ್ರಕಾರ, ಅಂಜೂರದ ಹಣ್ಣನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದರಿಂದ ಅಂಜೂರದಲ್ಲಿರುವ  ಒಮೆಗಾ -3 ಕೊಬ್ಬಿನಾಮ್ಲಗಳು ಹೊಟ್ಟೆ ಸುತ್ತಲಿನ ಫ್ಯಾಟ್ ಅನ್ನು ಕರಗಿಸಲು ಪ್ರಮುಖ ಪಾತ್ರ ವಹಿಸುತ್ತವೆ ಎನ್ನಲಾಗಿದೆ. 

6/6
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More