PHOTOS

Diabetes Fruits: ತ್ವರಿತ ಬ್ಲಡ್ ಶುಗರ್ ನಿಯಂತ್ರಣಕ್ಕೆ ತಿನ್ನಲೇಬೇಕಾದ 5 ಹಣ್ಣುಗಳಿವು

Diabetes Fruits: ತಜ್ಞರ ಪ್ರಕಾರ, ಡಯಾಬಿಟಿಸ್ ರೋಗಿಗಳು ಪ್ರತಿದಿನ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರ ಪ್ರಮಾಣ ಸದಾ ನಿಯಂತ್ರಣದಲ್ಲಿರುತ್...

Advertisement
1/8
ಡಯಾಬಿಟಿಸ್
ಡಯಾಬಿಟಿಸ್

ಡಯಾಬಿಟಿಸ್ ಸಮಸ್ಯೆ ಇರುವವರು ತಮ್ಮ ಆಹಾರ-ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಸಾಮಾನ್ಯವಾಗಿ ಮಧುಮೇಹಿಗಳಿಗೆ ಹಣ್ಣುಗಳ ಸೇವನೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಆದರೆ, ಮಧುಮೇಹಿಗಳಿಗೆ ಕೆಲವು ಹಣ್ಣುಗಳು ವರದಾನಕ್ಕಿಂತ ಕಡಿಮೆ ಇಲ್ಲ.   

2/8
ಮಧುಮೇಹಿಗಳಿಗೆ ವರದಾನ ಈ ಹಣ್ಣುಗಳು
ಮಧುಮೇಹಿಗಳಿಗೆ ವರದಾನ ಈ ಹಣ್ಣುಗಳು

ಆರೋಗ್ಯ ತಜ್ಞರ ಪ್ರಕಾರ, ನಿತ್ಯ ಈ 5 ಬಗೆಯ ಹಣ್ಣುಗಳಲ್ಲಿ ಯಾವುದಾದರೂ ಒಂದು ಹಣ್ಣನ್ನು ತಿನ್ನುವುದರಿಂದ ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಎಂದಿಗೂ ಹೆಚ್ಚಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆ ಹಣ್ಣುಗಳು ಯಾವುವೆಂದರೆ... 

3/8
ಸ್ಟ್ರಾಬೆರಿ
ಸ್ಟ್ರಾಬೆರಿ

ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಸ್ಟ್ರಾಬೆರಿ ಹಣ್ಣುಗಳನ್ನು ಮಧುಮೆಹಿಗಳು ತಿನ್ನುವುದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಎನ್ನಲಾಗುತ್ತದೆ. 

4/8
ರಸ್ಬೆರ್ರಿಸ್
ರಸ್ಬೆರ್ರಿಸ್

ಸ್ಟ್ರಾಬೆರಿಗಳಂತೆ  ರಸ್ಬೆರ್ರಿಸ್ ಹಣ್ಣುಗಳಲ್ಲಿಯೂ ಫೈಬರ್, ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಮಾತ್ರವಲ್ಲ, ಇದರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಅಂಶವೂ ಕಂಡು ಬರುತ್ತದೆ. 

5/8
ಚೆರ್ರಿಗಳು
ಚೆರ್ರಿಗಳು

ಚೆರ್ರಿ ಹಣ್ಣುಗಳಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡು ಬರುತ್ತದೆ. ಇದರ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. 

6/8
ದ್ರಾಕ್ಷಿ
ದ್ರಾಕ್ಷಿ

ದ್ರಾಕ್ಷಿ ರುಚಿಕರವಷ್ಟೆ ಅಲ್ಲ ಇದರಲ್ಲಿ ಕಂಡು ಬರುವ ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಮಧುಮೇಹಿಗಳಲ್ಲಿ ಬ್ಲಡ್ ಶುಗರ್ ಅನ್ನು ನಿಯಂತ್ರಿಸುತ್ತವೆ ಎನ್ನಲಾಗುತ್ತದೆ. 

7/8
ಕ್ರ್ಯಾನ್ಬೆರಿ
ಕ್ರ್ಯಾನ್ಬೆರಿ

ಕ್ರ್ಯಾನ್ಬೆರಿ ಹಣ್ಣುಗಳಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ಮಧುಮೇಹಿಗಳು ನಿತ್ಯ ಬೆಳಿಗ್ಗೆ ಈ ಹಣ್ಣನ್ನು ತಿನ್ನುವುದರಿಂದ ಎಂದಿಗೂ ಕೂಡ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗುವುದಿಲ್ಲ ಎನ್ನಲಾಗುತ್ತದೆ. 

8/8
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More