PHOTOS

ಇಂದಿನಿಂದ ಈ ರಾಶಿಯವರ ಭಾಗ್ಯೋದಯ ! ಇಡೀ ತಿಂಗಳು ಹಣಕ್ಕಿರುವುದಿಲ್ಲ ಕೊರತೆ

ಮೇ ತಿಂಗಳ ಆರಂಭದಲ್ಲಿಯೇ ಅಂದರೆ ಮೇ 5 ರಂದು , ಚಂದ್ರಗ್ರಹಣ ಗೋಚರಿಸುತ್ತಿದೆ. ಇದಲ್ಲದೇ ಈ ತಿಂಗಳಲ್ಲಿ 4 ಗ್ರಹ ಸಂಕ್ರಮಣ ಕೂಡಾ ನಡೆಯುತ್ತಿದೆ.  ...
Advertisement
1/6
ಮೇ ರಾಶಿ ಫಲ
ಮೇ ರಾಶಿ ಫಲ

ಮೇ ತಿಂಗಳಲ್ಲಿ ನಾಲ್ಕು ಗ್ರಹಗಳ ಸಂಕ್ರಮಣ ನಡೆಯಲಿದೆ. ಶುಕ್ರನು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಮಂಗಳ ಗ್ರಹವು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ವೃಷಭ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಇದರ ಹೊರತಾಗಿ ಅಸ್ತವಾಗಿರುವ ಬುಧನ ಉದಯದ ಜೊತೆಗೆ ಬುಧ ಸಂಕ್ರಮಣವು ಜನರ ಜೀವನದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಈ ಎಲ್ಲಾ ಗ್ರಹಗಳ ಸಂಕ್ರಮಣದಿಂದ ಕೆಲವು ರಾಶಿಯವರ ಭಾಗ್ಯೋದಯವಾಗಲಿದೆ.   

2/6
ಮೇಷ ರಾಶಿ :
ಮೇಷ ರಾಶಿ :

ಮೇಷ ರಾಶಿ : ಮಾಸಿಕ ಜಾತಕ ಫಲದ ಪ್ರಕಾರ, ಮೇ ತಿಂಗಳು ಮೇಷ ರಾಶಿಯವರಿಗೆ ಅನೇಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಕೆಲಸ ಚೆನ್ನಾಗಿ ನಡೆಯಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ  ತೀರ್ಪು ನಿಮ್ಮ ಪರವಾಗಿ ಬರಲಿದೆ.   

3/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ : ಈ ತಿಂಗಳು ವೃಷಭ ರಾಶಿಯವರಿಗೆ ಪ್ರತಿಯೊಂದು ವಿಷಯದಲ್ಲೂ ಯಶಸ್ಸು ಸಿಗಲಿದೆ. ಉದ್ಯೋಗಸ್ಥರು ತಮ್ಮ ಎದುರಾಳಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಹೂಡಿಕೆಯಿಂದ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಸಿಗಲಿದೆ. ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭವಾಗಲಿದೆ.   ಆದಾಯದ ಮೂಲಗಳು ಹೆಚ್ಚಾಗುತ್ತವೆ. 

4/6
ಕರ್ಕ ರಾಶಿ
ಕರ್ಕ ರಾಶಿ

ಕರ್ಕ ರಾಶಿ : ಈ ತಿಂಗಳು ಕರ್ಕ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ. ನ್ಯಾಯಾಲಯದ ಪ್ರಕರಣಗಳನ್ನು ಕೋರ್ಟ್ ಹೊರಗೆ ಇತ್ಯರ್ಥಪಡಿಸಿಕೊಳ್ಳಿ. ಸಮಸ್ಯೆಗಳು ಕಡಿಮೆಯಾಗಲಿವೆ. ವಿದೇಶಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಲಾಭವಾಗಲಿದೆ. ಹಿರಿಯರ ಆಶೀರ್ವಾದ,  ದಯೆ ನಿಮ್ಮ ಮೇಲೆ ಇರಲಿದೆ. ಪ್ರವಾಸಕ್ಕೆ ತೆರಳಬಹುದು. 

5/6
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ : ಈ ತಿಂಗಳು ಕನ್ಯಾ ರಾಶಿಯವರಿಗೆ ಅನೇಕ ಹೊಸ ವೃತ್ತಿ ಅವಕಾಶಗಳು ದೊರೆಯುತ್ತದೆ. ಎಲ್ಲಾ ಕೆಲಸಗಳಲ್ಲಿಯೂ ಪ್ರಗತಿ ಸಾಧಿಸುವಿರಿ. ಸ್ಥಾನ ಮಾನ, ಹಣ, ಗೌರವ ಸಿಗುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಕುಟುಂಬ ಸದಸ್ಯರ ಬೆಂಬಲ, ಸಹಕಾರ ಮತ್ತು ಪ್ರೀತಿ ಸಿಗುತ್ತದೆ. ಅವಿವಾಹಿತರ ವಿವಾಹ ನಿಶ್ಚಯವಾಗಬಹುದು. 

6/6
ಮೀನ ರಾಶಿ
ಮೀನ ರಾಶಿ

ಮೀನ ರಾಶಿ : ಮಾಸಿಕ ಜಾತಕದ ಪ್ರಕಾರ, ಈ ತಿಂಗಳು ಮೀನ ರಾಶಿಯವರಿಗೆ ಉತ್ತಮ ಯಶಸ್ಸು ಸಿಗಲಿದೆ. ಉನ್ನತ ಶ್ರೇಣಿಯ ಜನರೊಂದಿಗೆ ಸಂಬಂಧ ಏರ್ಪದಲಿದೆ. ಭವಿಷ್ಯದಲ್ಲಿ ಅವರಿಂದ ಹೆಚ್ಚು ಪ್ರಯೋಜನವಾಗುವುದು. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವುದು ಸಾಧ್ಯವಾಗುತ್ತದೆ.

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More