PHOTOS

SuryaKumar Yadav Love Story: ಕ್ರಿಕೆಟ್ ಕ್ಷೇತ್ರದಿಂದ ಲವ್ ಪಿಚ್ ನವರೆಗೆ ಟೀಂ ಇಂಡಿಯಾದ ‘Mister 360’ಯ ಸಕ್ಸಸ್ ಫುಲ್ ಜೀವನ

ಾಶಿಂಗ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಈ ಸಮಯದಲ್ಲಿ ತಂಡದ ಪ್ರಮುಖ ಭಾಗವಾಗಿದ್ದಾರೆ. ಅವರ ಬ್ಯಾಟಿಂಗ್ ಮುಂದೆ ದೊಡ್ಡ ಬೌಲರ್‌ಗಳು ಉಳಿಯುವುದು ಕೂಡ ಕಷ್ಟಕರವಾಗ...

Advertisement
1/5
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಅವರು ದಕ್ಷಿಣ ಭಾರತಕ್ಕೆ ಸೇರಿದ ದೇವಿಶಾ ಶೆಟ್ಟಿ ಅವರನ್ನು 2016 ರಲ್ಲಿ ವಿವಾಹವಾದರು. ದೇವಿಶಾ ಶೆಟ್ಟಿ 1993 ರಲ್ಲಿ ಮುಂಬೈನಲ್ಲಿ ಜನಿಸಿದರು.

2/5
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಅವರ ಮೊದಲ ಭೇಟಿಯು ಮುಂಬೈನ ಪೊದ್ದಾರ್ ಕಾಲೇಜ್ ಆಫ್ ಆರ್ಟ್ಸ್ ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ದೇವಿಶಾ ಅವರ ನೃತ್ಯ ಕಂಡು ಸೂರ್ಯಕುಮಾರ್ ಮನಸೋತಿದ್ದರು.

3/5
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ದೇವಿಶಾ ಶೆಟ್ಟಿ ಕಾಲೇಜು ಜೀವನದಿಂದಲೂ ನೃತ್ಯವನ್ನು ತುಂಬಾ ಇಷ್ಟಪಡುತ್ತಿದ್ದರು. ಡ್ಯಾನ್ಸ್ ಕಾರ್ಯಕ್ರಮದಿಂದಲೇ ಇಬ್ಬರ ಪ್ರೇಮಕಥೆ ಶುರುವಾಗಿದೆ. ಮದುವೆಗೂ ಮುನ್ನ ಇಬ್ಬರೂ 5 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ನಡೆಸಿದ್ದರು. ದೇವಿಶಾ 2013 ರಿಂದ 2015 ರವರೆಗೆ 'ದಿ ಲೈಟ್‌ಹೌಸ್ ಪ್ರಾಜೆಕ್ಟ್' ಎಂಬ ಎನ್‌ಜಿಒಗೆ ಸ್ವಯಂಸೇವಕರಾಗಿ ಕೆಲಸ ಮಾಡಿದ್ದಾರೆ. ಈಗಲೂ  ಸಮಾಜಸೇವೆಯಲ್ಲೂ ಸಕ್ರಿಯವಾಗಿದ್ದಾರೆ.

4/5
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ದೇವಿಶಾ ಶೆಟ್ಟಿ ಹಲವು ಬಾರಿ ಸ್ಟೇಡಿಯಂನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಬೆಂಬಲಿಸುತ್ತಿರುವುದು ಕಂಡುಬಂದಿದೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಇಬ್ಬರೂ Instagram ನಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಅವರು ಹಂಚಿಕೊಂಡ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ.

5/5
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್

ಸೂರ್ಯಕುಮಾರ್ ಯಾದವ್ ಪ್ರಸ್ತುತ ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟ್ಸ್‌ಮನ್. ಅವರು ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ತಮ್ಮ ವೃತ್ತಿಜೀವನದ ಎರಡನೇ ಶತಕವನ್ನು ಗಳಿಸಿದರು. ಈ ಪಂದ್ಯದಲ್ಲಿ ಅವರು 51 ಎಸೆತಗಳಲ್ಲಿ 111 ರನ್‌ಗಳ ಅಜೇಯ ಇನ್ನಿಂಗ್ಸ್‌ ಆಡಿದರು.





Read More