PHOTOS

ಸೆಪ್ಟೆಂಬರ್ ನಿಂದ ಸರ್ಕಾರಿ ನೌಕರರ ವೇತನ ಹೆಚ್ಚಳ ಪಕ್ಕಾ !ಖಾತೆ ಸೇರುವುದು ಬಹು ದೊಡ್ಡ ಮೊತ್ತ !

ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯಲ್ಲಿ ಮುಂದಿನ ಹೆಚ್ಚಳವನ್ನು ಕೇಂ...

Advertisement
1/7
ಮಹತ್ವದ ಸುದ್ದಿ
ಮಹತ್ವದ ಸುದ್ದಿ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇಲ್ಲಿದೆ ಹೊಸ ಅಪ್ಡೇಟ್. ಬಹಳ ದಿನಗಳಿಂದ ಕಾಯುತ್ತಿದ್ದ ಮಹತ್ವದ ಸುದ್ದಿ ಇದೀಗ ಬಂದೊದಗಿದೆ.ಇನ್ನೇನು ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಘೋಷಣೆ ಹೊರಬೀಳಲಿದೆ.  

2/7
ಹೆಚ್ಚಳ ಹೇಗೆ
ಹೆಚ್ಚಳ ಹೇಗೆ

​ಸೆಪ್ಟೆಂಬರ್ 2024ರಲ್ಲಿ,ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು  ತುಟ್ಟಿಪರಿಹಾರದ ಮುಂದಿನ ಹೆಚ್ಚಳವನ್ನು ಘೋಷಿಸಲಿದೆ. ಇದು ಜುಲೈ 2024 ರಿಂದ ಜಾರಿಗೆ ಬರಲಿದೆ.

3/7
ಇಷ್ಟು ಹೆಚ್ಚಾಗಲಿದೆ ವೇತನ
ಇಷ್ಟು ಹೆಚ್ಚಾಗಲಿದೆ ವೇತನ

ವರದಿಗಳ ಪ್ರಕಾರ,ಕೇಂದ್ರ ಸರ್ಕಾರವು ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆಯನ್ನು 3% ದಷ್ಟು ಹೆಚ್ಚಿಸಬಹುದು.ಪ್ರಸ್ತುತ,ತುಟ್ಟಿಭತ್ಯೆ 50% ಆಗಿದೆ.ಇದೀಗ  ತುಟ್ಟಿಭತ್ಯೆ 3% ಹೆಚ್ಚಳವಾಗಲಿದೆ. ಹೀಗಾದಾಗ ತುಟ್ಟಿಭತ್ಯೆ 53%ಕ್ಕೆ ಏರಿಕೆಯಾಗಲಿದೆ.ಅಂದರೆ ಮೂಲ ವೇತನದಲ್ಲಿ ದೊಡ್ಡ ಮಟ್ಟದ ಜಂಪ್ ಸಿಗಲಿದೆ.   

4/7
ಎಷ್ಟು ಬಾರಿ ವೇತನ ಹೆಚ್ಚಳ
ಎಷ್ಟು ಬಾರಿ ವೇತನ ಹೆಚ್ಚಳ

7ನೇ ವೇತನ ಆಯೋಗದ ಅಡಿಯಲ್ಲಿ, ಕಾರ್ಮಿಕ ಸಚಿವಾಲಯವು ಪ್ರಕಟಿಸಿದ AICPI ಸೂಚ್ಯಂಕ ಸಂಖ್ಯೆಗಳ ಆಧಾರದ ಮೇಲೆ ಭತ್ಯೆಯನ್ನು ನಿರ್ಧರಿಸಲಾಗುತ್ತದೆ.ಪ್ರತಿ ವರ್ಷ ಎರಡು ಬಾರಿ ಅಂದರೆ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ.

5/7
ಭಾರೀ ಹೆಚ್ಚಳ
ಭಾರೀ ಹೆಚ್ಚಳ

ಜೂನ್ 2024 ರ AICPI ಸೂಚ್ಯಂಕ ಸಂಖ್ಯೆಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಇದರ ಆಧಾರದಲ್ಲಿ ಡಿಎ ಹೆಚ್ಚಳದ ಬಗ್ಗೆ ಸ್ಪಷ್ಟತೆ ಸಿಕ್ಕಿದೆ.ಡಿಸೆಂಬರ್ 2023 ರಿಂದ ಜೂನ್ 2024 ರವರೆಗೆ, CPI-IW 2.6 ಅಂಕಗಳಿಂದ ಏರಿದ್ದು, ಈ ಮೂಲಕ 138.8 ರಿಂದ 141.4 ಕ್ಕೆ ಏರಿಕೆ ಕಂಡಿದೆ. ಅಂದರೆ ಈ ಬಾರಿ ತುಟ್ಟಿಭತ್ಯೆ ಹೆಚ್ಚಳ 50.28% ರಿಂದ 53.36% ಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. 

6/7
ವೇತನ ಹೆಚ್ಚಳದ ಲೆಕ್ಕಾಚಾರ
ವೇತನ ಹೆಚ್ಚಳದ ಲೆಕ್ಕಾಚಾರ

ಜುಲೈ 2024ರಲ್ಲಿ ತುಟ್ಟಿಭತ್ಯೆ ದರವನ್ನು 3% ಹೆಚ್ಚಿಸಿದರೆ ಎಲ್ಲಾ ಉದ್ಯೋಗಿಗಳು ಭಾರೀ  ವೇತನ ಹೆಚ್ಚಳವನ್ನು ನಿರೀಕ್ಷಿಸಬಹುದು.ಈ ಡಿಎ ಹೆಚ್ಚಳದ ನಂತರ,7 ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸಂಬಳ ಪಡೆಯುತ್ತಿರುವ ಸಾವಿರಾರು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯುತ್ತಾರೆ.

7/7
ಸೂಚನೆ :
ಸೂಚನೆ :

ಸೂಚನೆ : ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಆ ಮೂಲಕ ರಿಯಾಯಿತಿ ದರದಲ್ಲಿ ಹೆಚ್ಚಳದ ಗ್ಯಾರಂಟಿ ನೀಡುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ. 





Read More