PHOTOS

ಈ ತಿಂಗಳಲ್ಲಿ ನಾಲ್ಕು ರಾಶಿಯವರು ಏನೇ ಕೆಲಸ ಮಾಡಿದರೂ ಯಶ ಖಂಡಿತಾ

ತಿಂಗಳಲ್ಲಿ ಗ್ರಹಗಳ ಈ ಚಲನೆಯು 4 ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.  
 

...
Advertisement
1/4
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿಯವರಿಗೆ ಮಾರ್ಚ್ ತಿಂಗಳು ತುಂಬಾ ಅದ್ಭುತವಾಗಿರುತ್ತದೆ. ವಿಶೇಷವಾಗಿ ಮಾರ್ಚ್ 15 ರ ನಂತರದ ಸಮಯವು ತುಂಬಾ ಫಲಪ್ರದವಾಗಿರುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವಿರಿ. ಇದರೊಂದಿಗೆ ಆರ್ಥಿಕ ಲಾಭ ಮತ್ತು ಆರೋಗ್ಯ ಸುಧಾರಿಸುತ್ತದೆ. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ. 

2/4
ಮಿಥುನ ರಾಶಿ
ಮಿಥುನ ರಾಶಿ

ತಿಂಗಳ ಎರಡನೇ ಭಾಗದಲ್ಲಿ, ಮಿಥುನ ರಾಶಿಯ ಉದ್ಯಮಿಗಳು ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕುಟುಂಬದೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಗುರು 10ನೇ ಮನೆಯಲ್ಲಿ ಕುಳಿತಿರುವುದರಿಂದ ಕೌಟುಂಬಿಕ ಸಮಸ್ಯೆಗಳು ಕಡಿಮೆಯಾಗಿ ನಿಮ್ಮ ನೀರಿಕ್ಷೆಯ ಫಲ ಸಿಗುತ್ತದೆ. ನೀವು ಯಾರಿಗಾದರೂ ಸಾಲ ನೀಡಿದ್ದರೆ, ಅದನ್ನು ಮರಳಿ ಪಡೆಯಬಹುದು. ಆದಾಯದ ಮೂಲಗಳು ಹೆಚ್ಚಾಗಬಹುದು. 

3/4
ಕನ್ಯಾರಾಶಿ
ಕನ್ಯಾರಾಶಿ

ಕನ್ಯಾ ರಾಶಿಯ ಜನರು ಪ್ರಯಾಣದಿಂದ ಲಾಭವನ್ನು ಪಡೆಯುತ್ತಾರೆ. ಇದರೊಂದಿಗೆ ಉದ್ಯೋಗದಲ್ಲೂ ಉತ್ತಮ ಅವಕಾಶಗಳು ಸಿಗಬಹುದು. ಈ ತಿಂಗಳಿನಲ್ಲಿ ವೃತ್ತಿಜೀವನದಲ್ಲಿ ಯಶಸ್ಸನ್ನು ಕಾಣಬಹುದು. ಈ ರಾಶಿಯ ಜನರು ಶಿಕ್ಷಣ ಮತ್ತು ಉದ್ಯೋಗ ಎರಡರಲ್ಲೂ ಉತ್ತಮ ಕಾರ್ಯನಿರ್ವಹಿಸುತ್ತಾರೆ. ಬಡ್ತಿ ಮತ್ತು ಇನ್‌ಕ್ರಿಮೆಂಟ್ ಪಡೆಯುವ ಸಾಧ್ಯತೆಯೂ ಇದೆ. 

4/4
ಧನು ರಾಶಿ
ಧನು ರಾಶಿ

ಧನು ರಾಶಿಯವರು ತಮ್ಮ ಸಂಗಾತಿಯೊಂದಿಗೆ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆಯಬಹುದು. ಈ ತಿಂಗಳು ವ್ಯಾಪಾರವೂ ಪ್ರಗತಿ ಕಾಣಲಿದೆ. ಯಶಸ್ಸಿನ ಹೊಸ ಉತ್ತುಂಗಕ್ಕೆ ಏರುವುದು ಸಾಧ್ಯವಾಗುತ್ತದೆ. 

(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More