PHOTOS

Calcium Rich Food: ಈ ಆಹಾರವನ್ನು ಸೇವಿಸುತ್ತಾ ಬಂದರೆ ನೀಗುವುದು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ

್ಲಿ ಕ್ಯಾಲ್ಸಿಯಂ ಕೊರತೆ ಕಾಣಿಸಿಕೊಂಡರೆ ಮೂಳೆಗಳು ದುರ್ಬಲವಾಗುತ್ತವೆ. ಸರಿಯಾದ ಆಹಾರ ಸೇವನೆ ಮೂಲಕ ದೇಹದಲ್ಲಿನ ...

Advertisement
1/5
ಹಾಲು
ಹಾಲು

ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು, ಪ್ರತಿದಿನ ಹಾಲನ್ನು ಸೇವಿಸಬೇಕು. ಬೆಳಿಗ್ಗೆ ಹಾಲು ಸೇವಿಸುವುದರಿಂದ ದೇಹವು ಬಲಗೊಳ್ಳುತ್ತದೆ.ದೇಹದ ಎಲ್ಲಾ ಆಯಾಸವೂ ದೂರವಾಗುತ್ತದೆ. ರಾತ್ರಿ ಮಲಗುವ ಮುನ್ನವೂ ಹಾಲು ಕುಡಿಯಬೇಕು.

2/5
ಪಾಲಕ್ ಸೊಪ್ಪು
ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ. ದೇಹದಲ್ಲಿ  ಕ್ಯಾಲ್ಸಿಯಂ ಸರಿ ಪ್ರಮಾಣದಲ್ಲಿ ಇರಬೇಕಾದರೆ ವಾರಕ್ಕೆ 3-4 ಬಾರಿಯಾದರೂ  ಪಾಲಕ್  ಸೇವಿಸಬೇಕು. ಪಾಲಕ್ ಸೊಪ್ಪಿನಲ್ಲಿ 99 ಮಿಲಿ ಕ್ಯಾಲ್ಸಿಯಂ ಅಡಗಿರುತ್ತದೆ. 

3/5
ಕಿವಿ ಹಣ್ಣು :
ಕಿವಿ ಹಣ್ಣು :

ಕಿವಿ ಹಣ್ಣನ್ನು ಜನರು ತುಂಬಾ ಇಷ್ಟಪಡುತ್ತಾರೆ.ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಪ್ರತಿದಿನ ಎರಡು-ಮೂರು ಕಿವಿ ಹಣ್ಣಿನ ಜ್ಯೂಸ್ ಅನ್ನು ಕುಡಿಯಬೇಕು. ಇದು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು  ನೀಗಿಸುತ್ತದೆ.   

4/5
ಕಿತ್ತಳೆ ಹಣ್ಣು :
ಕಿತ್ತಳೆ ಹಣ್ಣು :

ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ, ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ.ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದಾದರೆ ಕ್ಯಾಲ್ಸಿಯಂ ಹೇರಳವಾಗಿರುವ ಆಹಾರಗಳನ್ನು ಸೇವಿಸಬೇಕು. ಇಂಥಹ ಆಹಾರಗಳಲ್ಲಿ ಕಿತ್ತಳೆ ಹಣ್ಣು ಕೂಡಾ ಒಂದು. ಕಿತ್ತಳೆ ರಸವನ್ನು ಕುಡಿದರೂ ಪ್ರಯೋಜನವಾಗುವುದು.    

5/5
ಬಾದಾಮಿ
ಬಾದಾಮಿ

ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ, ಸ್ನಾಯುಗಳಲ್ಲಿ ನೋವು, ಮಲಬದ್ಧತೆ ಮತ್ತು ನರಗಳ ಹಿಗ್ಗುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪ್ರತಿದಿನ ಬಾದಾಮಿ ತಿನ್ನಬೇಕು. ದಿನಕ್ಕೆ ಎರಡು ಬಾದಾಮಿ ತಿನ್ನುವುದರಿಂದ  ಮೆದುಳು ಕೂಡಾ ಚುರುಕಾಗುತ್ತದೆ. ಇದು ಮೂಳೆಗಳ ಆರೋಗ್ಯಕ್ಕೂ ಪ್ರಯೋಜನಕಾರಿ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)





Read More