PHOTOS

ಉತ್ತರಪ್ರದೇಶ ರಾಜಕೀಯದಲ್ಲಿ ಬಹು ಚರ್ಚೆಯಲ್ಲಿರುವ ಈ ಮಹಿಳಾಮಣಿಗಳ ವಿದ್ಯಾರ್ಹತೆ ಎಷ್ಟು ಗೊತ್ತಾ ?

ಲ್ಲಿರುವ ಮಹಿಳಾ ರಾಜಕಾರಣಿಗಳಾದ ಸ್ಮೃತಿ ಇರಾನಿ, ಡಿಂಪಲ್ ಯಾದವ್, ಮಾಯಾವತಿ ಸೇರಿದಂತೆ ಉತ್ತರಪ್ರದೇಶದ ಪ್ರಸಿದ್ಧ ಮಹಿಳಾ ನಾಯಕಿಯರ ವಿದ...

Advertisement
1/7
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ ವಾದ್ರಾ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ. ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳುತ್ತಾರೆ. ಗಾಂಧಿ ಕುಟುಂಬದ ಸಂಪ್ರದಾಯವನ್ನು ಮುಂದಿಟ್ಟುಕೊಂಡು ಈಗ ಸಂಪೂರ್ಣವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ವಿದ್ಯಾಭ್ಯಾಸದ ಬಗ್ಗೆ ಮಾತನಾಡುವುದಾದರೆ, ಅವರು ದೆಹಲಿಯ ಮಾಡರ್ನ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಸೈಕಾಳಜಿಯಲ್ಲಿ ಪದವಿ ಪಡೆದಿದ್ದಾರೆ. ಇದಲ್ಲದೆ ಬುದ್ದೀಸಂ ಸ್ಟಡೀಸ್ ನಲ್ಲಿ ಎಂಎ ಕೂಡ ಮಾಡಿದ್ದಾರೆ. 

2/7
ಮಾಯಾವತಿ
ಮಾಯಾವತಿ

ಬಿಎಸ್‌ಪಿ ಮುಖ್ಯಸ್ಥೆ ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಮಾಯಾವತಿ, ದೆಹಲಿಯ ಕಾಳಿಂದಿ ಕಾಲೇಜಿನಲ್ಲಿ ಪದವಿ, ಗಾಜಿಯಾಬಾದ್‌ನ ಕಾಲೇಜಿನಲ್ಲಿ ಬಿಎಡ್ ಮತ್ತು ದೆಹಲಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ.

3/7
ಡಿಂಪಲ್ ಯಾದವ್
ಡಿಂಪಲ್ ಯಾದವ್

ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ತಮ್ಮ ಆರಂಭಿಕ ಶಿಕ್ಷಣವನ್ನು ಲಕ್ನೋದ ಆರ್ಮಿ ಸ್ಕೂಲ್‌ನಲ್ಲಿ ಮಾಡಿದ್ದಾರೆ.  ನಂತರ, ಡಿಂಪಲ್ ಯಾದವ್ ಆರ್ಮಿ ಶಾಲೆಯಿಂದಲೇ 12 ನೇ ತರಗತಿಯನ್ನು ಪೂರ್ಣಗೊಳಿಸದ್ದಾರೆ. 2019 ರಲ್ಲಿ ನೀಡಿದ ಅಫಿಡವಿಟ್ ಪ್ರಕಾರ, ಡಿಂಪಲ್ ಯಾದವ್ ಪದವಿ ಓದಿದ್ದಾರೆ. ಅವರು 1998 ರಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಬಿಕಾಂ ಪದವಿಯನ್ನು ಪಡೆದಿದ್ದಾರೆ. 

4/7
ಸ್ಮೃತಿ ಇರಾನಿ
 ಸ್ಮೃತಿ ಇರಾನಿ

ಸ್ಮೃತಿ ಸ್ಮೃತಿ ಇರಾನಿ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿದ್ದಾರೆ. ರಾಜಕೀಯಕ್ಕೆ ಸೇರುವ ಮುನ್ನ ಮಾಡೆಲಿಂಗ್ ಲೋಕದಲ್ಲಿ ಸಕ್ರಿಯರಾಗಿದ್ದರು. ಇರಾನಿ ತನ್ನ ಶಾಲಾ ಶಿಕ್ಷಣವನ್ನು ದೆಹಲಿಯ ಚೈಲ್ಡ್ ಆಕ್ಸಿಲಿಯಮ್‌ನಲ್ಲಿ ಮಾಡಿದ್ದಾರೆ. ಇದರ ನಂತರ, ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ SOL (ಸ್ಕೂಲ್ ಆಫ್ ಓಪನ್ ಲರ್ನಿಂಗ್) ಅಡಿಯಲ್ಲಿ B.Com ಗೆ ಪ್ರವೇಶ ಪಡೆದರು. ಆದರೆ ತಮ್ಮ ಅಧ್ಯಯನವನ್ನು ಅರ್ಧದಲ್ಲಿಯೇ ನಿಲ್ಲಿಸಿದರು. 

5/7
ಅದಿತಿ ಸಿಂಗ್
ಅದಿತಿ ಸಿಂಗ್

ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅದಿತಿ ಸಿಂಗ್ ಹೆಸರು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇಂದಿನ ಕಾಲದಲ್ಲಿ, ಉತ್ತರ ಪ್ರದೇಶದ ರಾಜಕೀಯದಲ್ಲಿ ವಿಶೇಷ ಗುರುತನ್ನು ಹೊಂದಿರುವ ಆದಿತಿ ಸಿಂಗ್  ಅವರನ್ನು ದಿಟ್ಟ ಮತ್ತು ಶಕ್ತಿಯುತ ಮಹಿಳಾ ರಾಜಕಾರಣಿ ಎಂದು ಕರೆಯುತ್ತಾರೆ. ಅದಿತಿಯ ತಂದೆ ಅಖಿಲೇಶ್ ಸಿಂಗ್ ಉತ್ತರ ಪ್ರದೇಶದ ಪ್ರಬಲ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು. ಅದಿತಿಯ ಶಿಕ್ಷಣದ ಬಗ್ಗೆ ಹೇಳುವುದಾದರೆ, ಅಮೇರಿಕಾ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್‌ಮೆಂಟ್ ಓದಿದ್ದಾರೆ.

6/7
ಅನುಪ್ರಿಯಾ ಪಟೇಲ್
ಅನುಪ್ರಿಯಾ ಪಟೇಲ್

ಅಪ್ನಾ ದಳದ ನಾಯಕಿ ಅನುಪ್ರಿಯಾ ಪಟೇಲ್ ರಾಜಕೀಯದಲ್ಲಿ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ. ಅವರ ಪ್ರಭಾವದಿಂದಾಗಿ ಬಿಜೆಪಿ ಸರ್ಕಾರ ಈ ಹಿಂದೆ ಕೇಂದ್ರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವರನ್ನಾಗಿ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಅನುಪ್ರಿಯಾ ಪಟೇಲ್ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅನುಪ್ರಿಯಾ ಪಟೇಲ್  ಕಾನ್ಪುರದ ಸಿಎಸ್‌ಜೆಎಂ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮಾಡಿದ್ದಾರೆ.

7/7
ಅಪರ್ಣಾ ಯಾದವ್
ಅಪರ್ಣಾ ಯಾದವ್

ಯಾದವ್ ಅವರ ಎರಡನೇ ಮಗ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಯಾದವ್ ಅವರು ರಾಜಕೀಯದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಅಪರ್ಣಾ ಯಾದವ್ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಅಪರ್ಣಾ ಅವರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಅಂತರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 





Read More