PHOTOS

ಟೊಮೆಟೊ ಅಂದ್ರೆ ಇಷ್ಟಾನಾ...? ಹುಷಾರ್‌ ಅತಿಯಾಗಿ ತಿಂದ್ರೆ ಈ ಸಮಸ್ಯೆ ಖಂಡಿತ ಬರುತ್ತೆ..!

ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ ಯಾವುದೇ ಆಹಾರ ಪದಾರ್ಥವನ್ನು ಇಷ್ಟ ಅಂತ ಹೆಚ್ಚಾಗಿ ತಿಂದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕೆ ಟೊಮೆಟೊ ಸಹ ಹೊರತ...

Advertisement
1/5

ಟೊಮೆಟೊಗಳನ್ನು ಆಹಾರದ ಪರಿಮಳ ಹೆಚ್ಚಿಸಲು ಬಳಸಲಾಗುತ್ತದೆ. ಇದರಲ್ಲಿರುವ ಹುಳಿ ಅಂಶ ಬೇಯಿಸಿದ ಆಹಾರಕ್ಕೆ ತಾಜಾ ಹುಳಿ ರುಚಿಯನ್ನು ನೀಡುತ್ತದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ, ಅಧಿಕವಾದ್ರೆ, ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.

2/5

ಟೊಮೆಟೊದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಹೇರಳವಾಗಿದ್ದರೂ, ಅವು ಅಧಿಕವಾಗಿದರೆ ಜೀರ್ಣವಾಗದೆ ಮೂತ್ರಪಿಂಡದಲ್ಲಿ ಕಲ್ಲುಗಳಾಗುವ ಸಾಧ್ಯತೆ ಇದೆ.   

3/5

ಹೆಚ್ಚು ಟೊಮ್ಯಾಟೊ ತಿನ್ನುವುದರಿಂದ ಎದೆಯುರಿ ಅಥವಾ ಆಮ್ಲೀಯತೆ ಉಂಟಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ವಿಶೇಷವಾಗಿ ಜಾಗರೂಕರಾಗಿರಬೇಕು.    

4/5

ಕೀಲು ನೋವಿನ ಸಮಸ್ಯೆ ಇದ್ದರೆ ಟೊಮೆಟೊ ಸೇವನೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಏಕೆಂದರೆ ಟೊಮೇಟೊದಲ್ಲಿರುವ ಸೊಲನೈನ್ ಎಂಬ ಆಲ್ಕಲಾಯ್ಡ್ ಕೀಲುಗಳಲ್ಲಿ ನೋವು ಮತ್ತು ಊತವನ್ನು ಉಂಟುಮಾಡುತ್ತದೆ.   

5/5

ಹಲವಾರು ಟೊಮೆಟೊಗಳು ಚರ್ಮದ ದದ್ದು, ಕೆಮ್ಮು, ಸೀನುವಿಕೆ ಮತ್ತು ಗಂಟಲಿನ ತುರಿಕೆ ಮುಂತಾದ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಅಲರ್ಜಿ ಇರುವವರು ಆರೋಗ್ಯ ಕಾಪಾಡಿಕೊಳ್ಳಲು ಟೊಮೆಟೊದಿಂದ ದೂರವಿರುವುದು ಉತ್ತಮ.





Read More