PHOTOS

Belly Fat: ನೈಸರ್ಗಿಕವಾಗಿ ಹೊಟ್ಟೆಯ ಫ್ಯಾಟ್ ಕರಗಿಸಲು ಪ್ರತಿದಿನ ಬೆಳಿಗ್ಗೆ ಈ ಪಾನೀಯಗಳನ್ನು ಸೇವಿಸಿ

Belly Fat: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕೆಲವು ನೈಸರ್ಗಿಕ ಪಾನೀಯಗಳನ್ನು ಕುಡಿಯುವುದರಿಂದ ಹೊಟ್ಟೆಯ ಸುತ್ತಲೂ ಶೇಖರಣೆಯಾಗಿರುವ ಕೊಬ್ಬನ್ನು ಸುಲಭವಾಗಿ...

Advertisement
1/8
ಬೆಲ್ಲಿ ಫ್ಯಾಟ್
ಬೆಲ್ಲಿ ಫ್ಯಾಟ್

ತೂಕ ಇಳಿಕೆಯಲ್ಲಿ ದೊಡ್ಡ ಸವಾಲು ಬೆಲ್ಲಿ ಫ್ಯಾಟ್ ಕರಗಿಸುವುದು. ಆದರೆ, ನಿತ್ಯ ಮುಂಜಾನೆ ಕೆಲವು ಪಾನೀಯಗಳ ಸೇವನೆಯು ಬೆಲ್ಲಿ ಫ್ಯಾಟ್ ಕರಗಿಸಲು ವರದಾನವಿದ್ದಂತೆ ಎನ್ನಲಾಗುತ್ತದೆ. 

2/8
ಮಾರ್ನಿಂಗ್ ಡ್ರಿಂಕ್ಸ್
ಮಾರ್ನಿಂಗ್ ಡ್ರಿಂಕ್ಸ್

ಹೌದು, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕೆಲವು ಪಾನೀಯಗಳನ್ನು ಸವಿಯುವುದರಿಂದ ನೈಸರ್ಗಿಕವಾಗಿ ಬೆಲ್ಲಿ ಫ್ಯಾಟ್ ಕರಗಿಸಬಹುದು ಎನ್ನಲಾಗುತ್ತದೆ. ಅಂತಹ ಪಾನೀಯಗಳೆಂದರೆ... 

3/8
ಲೆಮನ್ ವಾಟರ್
ಲೆಮನ್ ವಾಟರ್

ಲೆಮನ್ ವಾಟರ್:  ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನಿಂಬೆ ರಸ ಬೆರೆಸಿದ ನೀರನ್ನು ಕುಡಿಯುವುದರಿಂದ ಇದು ಚಯಾಪಚಯವನ್ನು ಹೆಚ್ಚಿಸಿ ಹೊಟ್ಟೆಯ ಸುತ್ತಲಿನ ಫ್ಯಾಟ್ ಕರಗಿಸಲು ಸಹಕಾರಿ ಆಗಿದೆ. 

4/8
ಸೌತೆಕಾಯಿ ನೀರು
ಸೌತೆಕಾಯಿ ನೀರು

ಸೌತೆಕಾಯಿ ನೀರು:  ಕಡಿಮೆ ಕ್ಯಾಲೋರಿ ಜೊತೆಗೆ ಉರಿಯೂತವನ್ನು ಕಡಿಮೆ ಮಾಡಬಲ್ಲ ಸೌತೆಕಾಯಿಯ ನೀರನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಿ, ಹೊಟ್ಟೆಯನ್ನು ಚಪ್ಪಟೆಯಾಗಿಸಬಹುದು. 

5/8
ಶುಂಠಿ ನೀರು
ಶುಂಠಿ ನೀರು

ಶುಂಠಿ ನೀರು:  ನೈಸರ್ಗಿಕ ಹಸಿವು ನಿವಾರಕವಾಗಿರುವ ಶುಂಠಿ ನೀರನ್ನು ನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಹೊಟ್ಟೆಯ ಕೊಬ್ಬನ್ನು ಕರಗಿಸಿ, ಕೆಲವೇ ದಿನಗಳಲ್ಲಿ ಸ್ಲಿಮ್ ಬೆಲ್ಲಿ ನಿಮ್ಮದಾಗಿಸಲು ಪ್ರಯೋಜನಕಾರಿ ಆಗಿದೆ. 

6/8
ಪುದೀನಾ ನೀರು
ಪುದೀನಾ ನೀರು

ಪುದೀನ ನೀರು:  ನಿತ್ಯ ಖಾಲಿ ಹೊಟ್ಟೆಯಲ್ಲಿ ಪುದೀನಾ ನೀರಿನ ಸೇವನೆಯು ಉತ್ತಮ ಜೀರ್ಣಕ್ರಿಯೆಯನ್ನು ಉತ್ತೇಜಿಸಿ ಬೆಲ್ಲಿ ಫ್ಯಾಟ್ ಕರಗಿಸಲು ಉತ್ತಮ ಪಾನೀಯ ಎನ್ನಲಾಗುತ್ತದೆ. 

7/8
ಮೆಂತ್ಯ ನೀರು
ಮೆಂತ್ಯ ನೀರು

ಮೆಂತ್ಯ ನೀರು:  ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರನ್ನು ಕುಡಿಯುವುದಾರಿಂದ ಇದು ಹಸಿವನ್ನು ನಿಯಂತ್ರಿಸಿ ಹೊಟ್ಟೆಯಲ್ಲಿ ಶೇಖರವಾಗಿರುವ ಕೊಬ್ಬನ್ನು ಸುಡುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. 

8/8
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More