PHOTOS

ಫೋನ್‌ನ ಪರದೆಯ ಮೇಲೆ ಸಿಂಬಲ್ ಡ್ರಾ ಮಾಡಿದರೆ ತೆರೆಯುತ್ತೆ ಅಪ್ಲಿಕೇಶನ್! ಇಲ್ಲಿದೆ ಅದ್ಭುತ ಟ್ರಿಕ್!

Whatsapp: ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ತೆರೆಯಲು ಕೆಲವು ಟ್ರಿಕ್ ಗಳ...

Advertisement
1/6
ಸ್ಮಾರ್ಟ್‌ಫೋನ್‌ ಟ್ರಿಕ್ಸ್
 ಸ್ಮಾರ್ಟ್‌ಫೋನ್‌ ಟ್ರಿಕ್ಸ್

ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್ ತೆರೆಯಲು ಐಕಾನ್‌ಗಾಗಿ ಪದೇ ಪದೇ ಹುಡುಕಲು ಕಷ್ಟವಾಗುತ್ತಿದೆಯೇ? ಇನ್ನೂ ಮುಂದೆ ಈ ಚಿಂತೆಯೇ ಇರುವುದಿಲ್ಲ. ಸ್ಮಾರ್ಟ್‌ಫೋನ್‌ನಲ್ಲಿ  ಕೆಲವು ಅಪ್ಲಿಕೇಶನ್‌ಗಳ ಸಹಾಯದಿಂದ ನೀವು ಸುಲಭವಾಗಿ ನಿಮ್ಮ ಮೆಚ್ಚಿನ ಅಪ್ಲಿಕೇಶನ್‌ಗಳನ್ನು ತೆರೆಯಬಹುದು. 

2/6
ಗೆಸ್ಚರ್ ಅಪ್ಲಿಕೇಶನ್‌
ಗೆಸ್ಚರ್ ಅಪ್ಲಿಕೇಶನ್‌

ಗೆಸ್ಚರ್ ಅಪ್ಲಿಕೇಶನ್‌:  ಗೆಸ್ಚರ್ ಅಪ್ಲಿಕೇಶನ್‌ನ ಸಹಾಯದಿಂದ  ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಸುಲಭವಾಗಿ ತೆರೆಯಬಹುದು. ಇದಕ್ಕಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ಕೇವಲ ನಿಮ್ಮ ಪರದೆಯ ಮೇಲೆ ನಿಮಗೆ ಬೇಕಾದ ಅಪ್ಲಿಕೇಶನ್‌ನ ಚಿಹ್ನೆಯನ್ನು ಡ್ರಾ ಮಾಡಿದರೆ ಅಷ್ಟೇ ಸಾಕು. 

3/6
ಚಿಹ್ನೆಯನ್ನು ಚಿತ್ರಿಸಿದ ತಕ್ಷಣ ತೆರೆಯುತ್ತೇ ಅಪ್ಲಿಕೇಶನ್
ಚಿಹ್ನೆಯನ್ನು ಚಿತ್ರಿಸಿದ ತಕ್ಷಣ ತೆರೆಯುತ್ತೇ ಅಪ್ಲಿಕೇಶನ್

ಚಿಹ್ನೆಯನ್ನು ಚಿತ್ರಿಸಿದ ತಕ್ಷಣ ತೆರೆಯುತ್ತೇ ಅಪ್ಲಿಕೇಶನ್:  ಗೆಸ್ಚರ್ ಅಪ್ಲಿಕೇಶನ್ ಸಹಾಯದಿಂದ ನೀವು ಯಾವ ಅಪ್ಲಿಕೇಶನ್ ತೆರೆಯಲು ಬಯಸುವಿರೋ ಅದರ ಚಿಹ್ನೆಯನ್ನು ಚಿತ್ರಿಸಿದರೆ ಅಪ್ಲಿಕೇಶನ್ ಸ್ವಯಂಚಾಲಿತವಾಗಿ ತೆರೆಯುತ್ತದೆ. ಉದಾಹರಣೆಗೆ ನೀವು ಸ್ಕ್ರೀನ್ ಮೇಲೆ W ಎಂದು ಡ್ರಾ ಮಾಡಿದರೆ ವಾಟ್ಸಾಪ್ ತೆರೆಯುತ್ತದೆ. ಅಂತೆಯೇ f ಎಂದು ಡ್ರಾ ಮಾಡಿದರೆ ತಕ್ಷಣ ಫೇಸ್ ಬುಕ್ ಓಪನ್ ಆಗುತ್ತದೆ.

4/6
ಇದಕ್ಕಾಗಿ ಏನು ಮಾಡಬೇಕು?
ಇದಕ್ಕಾಗಿ ಏನು ಮಾಡಬೇಕು?

ನೀವೂ ಈ ರೀತಿಯ ಸೌಲಭ್ಯವನ್ನು ಪಡೆಯಲು ಮೊದಲು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ  ಗೆಸ್ಚರ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ. ಬಳಿಕ ಅವರು ಇದಕ್ಕಾಗಿ ಅನುಮತಿಯನ್ನು ನೀಡಬೇಕು. 

5/6
ಚಿಹ್ನೆಯನ್ನು ಆಯ್ಕೆಮಾಡಿ
 ಚಿಹ್ನೆಯನ್ನು ಆಯ್ಕೆಮಾಡಿ

ಗೆಸ್ಚರ್ ಅಪ್ಲಿಕೇಶನ್ ತೆರೆದ ಕೂಡಲೇ ಅದರಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ ಗೆಸ್ಚರ್ ಮ್ಯಾನೇಜ್ಮೆಂಟ್ ಆಯ್ಕೆಯನ್ನು ಆರಿಸಿ. ನಂತರ ರನ್ ಅಪ್ಲಿಕೇಶನ್ ಆಯ್ಕೆಗೆ ಹೋಗಿ ಮತ್ತು ಆ ಚಿಹ್ನೆಯೊಂದಿಗೆ ನೀವು ತೆರೆಯಲು ಬಯಸುವ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿ.

6/6
ಚಿಹ್ನೆಯನ್ನು ಡ್ರಾ ಮಾಡಿ
ಚಿಹ್ನೆಯನ್ನು ಡ್ರಾ  ಮಾಡಿ

ಪ್ರತಿ ಅಪ್ಲಿಕೇಶನ್‌ಗೆ ನಿಮ್ಮ ಆಯ್ಕೆಯ ಪ್ರಕಾರ ನೀವು ಯಾವುದೇ ಚಿಹ್ನೆಯನ್ನು ಆರಿಸಿಕೊಳ್ಳಿ. ಸ್ಮಾರ್ಟ್ಫೋನ್ ಪರದೆಯ ಮೇಲೆ ನಿಮ್ಮ ಬೆರಳಿನಿಂದ ನೀವು ಚಿಹ್ನೆಯನ್ನು ಡ್ರಾ ಮಾಡಬೇಕು. ನೀವು ಮೊಬೈಲ್ ಫೋನ್ ಪರದೆಯ ಮೇಲೆ ಚಿಹ್ನೆಯನ್ನು ಚಿತ್ರಿಸಿದ ತಕ್ಷಣ, ಆ ಅಪ್ಲಿಕೇಶನ್ ತಕ್ಷಣವೇ ತೆರೆಯುತ್ತದೆ. 





Read More