PHOTOS

ಈ ವಸ್ತುಗಳನ್ನು ತಿಂದ ನಂತರ ಹಾಲು ಕುಡಿಯಲೇ ಬಾರದು ..!

ಆರೋಗ್ಯವಾಗಿರಲು ಮಗುವಾಗಲಿ, ವೃದ್ಧರಾಗಲಿ ಎಲ್ಲರಿಗೂ ಪೌಷ್ಟಿಕ ಆಹಾರ ಬಹಳ ಮುಖ್ಯ. ಈ ಆಹಾರಗಳಲ್ಲಿ ಹಾಲು ಕೂಡ ಒಂದು

...
Advertisement
1/5
ಉದ್ದಿನಬೇಳೆ ತಿಂದ ತಕ್ಷಣ ಹಾಲು ಕುಡಿಯಬಾರದು :
ಉದ್ದಿನಬೇಳೆ ತಿಂದ ತಕ್ಷಣ ಹಾಲು ಕುಡಿಯಬಾರದು :

ಉದ್ದಿನ ಬೇಳೆ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಆದರೆ ಇದು ಜೀರ್ಣಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಉದ್ದಿನಬೇಳೆ ತಿಂದ ತಕ್ಷಣ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ ಇದರಿಂದ ಅನಾರೋಗ್ಯಕ್ಕೆ ತುತ್ತಾಗಬಹುದು. ಆದ್ದರಿಂದ ನೀವು ಉದ್ದಿನಬೇಳೆ ತಿಂದಿದ್ದರೆ ಕನಿಷ್ಠ ಎರಡು ಗಂಟೆಗಳ ನಂತರವೇ ಹಾಲು ತೆಗೆದುಕೊಳ್ಳಿ.

2/5
ಮೊಸರು ತಿಂದ ನಂತರ ಹಾಲು ಕುಡಿಯಬೇಡಿ
ಮೊಸರು ತಿಂದ ನಂತರ ಹಾಲು ಕುಡಿಯಬೇಡಿ

ಮೊಸರನ್ನು ಹಾಲಿನಿಂದಲೇ ಮಾಡಲಾಗುತ್ತದೆ. ಮೊಸರು ತುಂಬಾ ಹುಳಿಯಾದಾಗ, ಅದಕ್ಕೆ ಹಾಲು ಸೇರಿಸುವುದು ಸಾಮಾನ್ಯವಾಗಿ ಕಂಡುಬರುತ್ತದೆ, ಆದರೆ ಇದು ಸರಿಯಲ್ಲ. ಮೊಸರು ತಿಂದ ನಂತರ ಹಾಲು ಕುಡಿಯಲು ಕನಿಷ್ಠ ಒಂದು ಗಂಟೆಯಾದರೂ ಕಾಯಲೇಬೇಕು.  ಇಲ್ಲವಾದರೆ ಆಮ್ಲೀಯತೆ, ಗ್ಯಾಸ್ ಮುಂತಾದ ಸಮಸ್ಯೆಗಳು ಎದುರಾಗಬಹುದು. 

3/5
ಸಿಟ್ರಸ್ ಹಣ್ಣುಗಳ ಜೊತೆ ಹಾಲು ಬೇಡ
 ಸಿಟ್ರಸ್ ಹಣ್ಣುಗಳ ಜೊತೆ ಹಾಲು ಬೇಡ

ನೀವು ಸಿಟ್ರಸ್ ಹಣ್ಣುಗಳನ್ನು ಸೇವಿಸಿದ್ದರೆ, ಸ್ವಲ್ಪ ಸಮಯದವರೆಗೆ ಹಾಲು ಕುಡಿಯಬೇಡಿ. ಹುಳಿ ತಿಂದು ಹಾಲು ಕುಡಿದರೆ ರೋಗಗಳಿಗೆ ಆಹ್ವಾನ ನೀಡಿದಂತೆ. ಕಿತ್ತಳೆ, ದ್ರಾಕ್ಷಿಹಣ್ಣು, ನಿಂಬೆಹಣ್ಣು, ಲಿಚಿ ಅಥವಾ ಯಾವುದೇ ಹುಳಿ ಹಣ್ಣುಗಳನ್ನು ಸೇವಿಸಿದ್ದರೆ, ಹಾಲು ಕುಡಿಯುವ ಮೊದಲು  ಕನಿಷ್ಟ ಒಂದು ಗಂಟೆ ಕಾಯಬೇಕು. ಏಕೆಂದರೆ ಸಿಟ್ರಸ್ ಹಣ್ಣುಗಳನ್ನು ತಿಂದ ತಕ್ಷಣ ಹಾಲು ಕುಡಿಯುವುದರಿಂದ ದೇಹದ ಮೇಲೆ ವಿಷಕಾರಿ ಪರಿಣಾಮ ಬೀರುತ್ತದೆ. 

4/5
ಮೀನು ತಿಂದ ನಂತರ ಹಾಲು ಕುಡಿಯಬಾರದು
ಮೀನು ತಿಂದ ನಂತರ ಹಾಲು ಕುಡಿಯಬಾರದು

ಮೀನುಗಳನ್ನು  ತಿಂದ  ಕನಿಷ್ಠ ಎರಡು ಗಂಟೆಗಳ ಕಾಲ ಹಾಲು ಕುಡಿಯಬಾರದು. ಮೀನು ತಿಂದ ತಕ್ಷಣ ಹಾಲು ಕುಡಿಯುವವರಿಗೆ ಹೊಟ್ಟೆನೋವು, ಎದೆಯುರಿ, ಹುಳಿ ತೇಗು, ಜೀರ್ಣಕಾರಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

5/5
ಮೂಲಂಗಿ ತಿಂದ ತಕ್ಷಣ ಹಾಲು ಕುಡಿಯಬಾರದು
ಮೂಲಂಗಿ ತಿಂದ ತಕ್ಷಣ ಹಾಲು ಕುಡಿಯಬಾರದು

ಮೂಲಂಗಿಯೊಂದಿಗೆ ಹಾಲನ್ನು ಸೇವಿಸಿದರೆ, ಹೊಟ್ಟೆಯಲ್ಲಿ ವಿಷವು ರೂಪುಗೊಳ್ಳಲು ಪ್ರಾರಂಭಿಸುತ್ತದೆ, ಅದು ಗಂಭೀರವಾದ  ಅನಾರೋಗ್ಯಕ್ಕೆ ಕಾರಣವಾಗಬಹುದು.





Read More