PHOTOS

ಗ್ರೀನ್ ಟೀ ಕುಡಿಯುವಾಗ ನೀವೂ ಈ ತಪ್ಪುಗಳನ್ನು ಮಾಡ್ತೀರಾ? ಎಚ್ಚರ!

bsp;                     &n...

Advertisement
1/6
ಗ್ರೀನ್ ಟೀ
ಗ್ರೀನ್ ಟೀ

ತೂಕ ಇಳಿಕೆಯಲ್ಲಿ ಗ್ರೀನ್ ಟೀ ಅನ್ನು ವರದಾನ ಎಂತಲೇ ಹೇಳಲಾಗುತ್ತದೆ. ಆದರೆ, ಇದನ್ನು ಯಾವಾಗ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂದು ತಿಳಿದಿರಬೇಕು. ಇಲ್ಲದಿದ್ದರೆ, ಅದು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಆರೋಗ್ಯ ತಜ್ಞರ ಪ್ರಕಾರ, ಗ್ರೀನ್ ಟೀ ಕುಡಿಯುವ ವೇಳೆ ಎಂದಿಗೂ ಕೂಡ ಕೆಲವು ತಪ್ಪುಗಳನ್ನು ಮಾಡಲೇಬಾರದು. ಆ ಸಾಮಾನ್ಯ ತಪ್ಪುಗಳು ಯಾವುವು ಎಂದು ತಿಳಿಯೋಣ... 

2/6
ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು
ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು

ಕೆಲವರಿಗೆ ಬೆಳಿಗ್ಗೆ ಬೆಡ್ ಕಾಫಿ ಕುಡಿಯುವ ಅಭ್ಯಾಸದಂತೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವ ಅಭ್ಯಾಸವಿರುತ್ತದೆ. ಆದರೆ, ಎಂದಿಗೂ ಈ ತಪ್ಪನ್ನು ಮಾಡಬಾರದು. 

3/6
ಆಹಾರ ಸೇವಿಸಿದ ತಕ್ಷಣ ಗ್ರೀನ್ ಟೀ ಸೇವನೆ
ಆಹಾರ ಸೇವಿಸಿದ ತಕ್ಷಣ ಗ್ರೀನ್ ಟೀ ಸೇವನೆ

ವೈದ್ಯರ ಪ್ರಕಾರ, ಆಹಾರ ಸೇವಿಸಿದ ಕೂಡಲೇ ಗ್ರೀನ್ ಟೀ ಕುಡಿಯುವುದು ಒಳ್ಳೆಯದಲ್ಲ. ಆಹಾರ ಸೇವಿಸುವ ಎರಡು ಗಂಟೆಗಳ ಮೊದಲು ಇಲ್ಲವೇ ಎರಡು ಗಂಟೆಗಳ ನಂತರ ಗ್ರೀನ್ ಟೀ ಕುಡಿಯಲು ಸಲಹೆ ನೀಡಲಾಗುತ್ತದೆ.  

4/6
ಗ್ರೀನ್ ಟೀ ಅತಿಯಾದ ಸೇವನೆ
ಗ್ರೀನ್ ಟೀ ಅತಿಯಾದ ಸೇವನೆ

ಮೊದಲೇ ತಿಳಿಸಿದಂತೆ ತ್ವರಿತ ತೂಕ ಇಳಿಕೆ ಗ್ರೀನ್ ಟೀ ತುಂಬಾ ಪ್ರಯೋಜನಕಾರಿ. ಹಾಗಂತ ಇದನ್ನು ಅತಿಯಾಗಿ ಕುಡಿಯುವುದರಿಂದ ಹೊಟ್ಟೆ ನೋವು, ಮಲಬದ್ಧತೆಯಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.   

5/6
ನಿತ್ಯ ಇಷ್ಟು ಗ್ರೀನ್ ಟೀ ಸೇವಿಸಿದರಷ್ಟೇ ಲಾಭ
ನಿತ್ಯ ಇಷ್ಟು ಗ್ರೀನ್ ಟೀ ಸೇವಿಸಿದರಷ್ಟೇ ಲಾಭ

ತಜ್ಞರ ಪ್ರಕಾರ, ಪ್ರತಿ ದಿನ ಎರಡರಿಂದ ಮೂರು ಕಪ್ ಗ್ರೀನ್ ಟೀ ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಗ್ರೀನ್ ಟೀ ಸೇವನೆ ಆರೋಗ್ಯಕ್ಕೆ ಹಾನಿಯುಂಟುಮಾಡುತ್ತದೆ. 

6/6
ಂತಹ ಮಹಿಳೆಯರಿಗೆ ಗ್ರೀನ್ ಟೀ ಸೇವನೆ ಒಳ್ಳೆಯದಲ್ಲ
ಂತಹ ಮಹಿಳೆಯರಿಗೆ ಗ್ರೀನ್ ಟೀ ಸೇವನೆ ಒಳ್ಳೆಯದಲ್ಲ

ತಜ್ಞರ ಪ್ರಕಾರ, ಗರ್ಭಿಣಿ ಸ್ತ್ರೀಯರು, ಹಾಲುಣಿಸುವ ಮಹಿಳೆಯರು ಗ್ರೀನ್ ಟೀ ಸೇವಿಸುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   





Read More