PHOTOS

ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?

್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುತ್ತಾರೆ. ಬದಲಾಗುತ್ತಿರುವ ಉದ್ಯೋಗಗಳು ಅಥವಾ ಬದಲಾಗುತ್ತಿರುವ ನಗರ...

Advertisement
1/5
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?

ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ತೆರೆಯುವುದು ಸುಲಭ. ಆದರೆ ಅವುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್  ಕಾಯ್ದುಕೊಳ್ಳುವುದು ಕಷ್ಟ. ನಿಮ್ಮ ಬಳಿ ಹೆಚ್ಚು ಉಳಿತಾಯ ಖಾತೆ ಇದ್ದರೆ, ಅವುಗಳಲ್ಲಿ ಮಿನಿಮಮ್ ಬ್ಯಾಲೆನ್ಸ್   ಉಳಿಸುವುದು ಕೂಡಾ ಅವಶ್ಯವಾಗಿರುತ್ತದೆ. ಒಂದು ವೇಳೆ ಇದಕ್ಕೆ ತಪ್ಪಿದರೆ ದಂಡ ಪಾವತಿಸಬೇಕಾಗುತ್ತದೆ.  

2/5
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?

ಬೇರೆ ಬೇರೆ ಉಳಿತಾಯ ಖಾತೆಗಳಲ್ಲಿ ಸ್ವಲ್ಪ ಸ್ವಲ್ಪ ಹಣವನ್ನು ಉಳಿಸುವುದರಿಂದ ಬಡ್ಡಿಯ ನಷ್ಟವೂ ಆಗುತ್ತದೆ. ಯಾಕೆಂದರೆ, ಹೆಚ್ಚಿನ ಮೊತ್ತದ ಠೇವಣಿಯನ್ನು ಒಂದೇ ಖಾತೆಯಲ್ಲಿ ಇಟ್ಟರೆ, ಹೆಚ್ಚಿನ ಬಡ್ಡಿ ಸಿಗುತ್ತದೆ. ಅಂದರೆ ಬೇರೆ ಬೇರೆ ಖಾತೆಗಲ್ಲಿ ಸಣ್ಣ ಸಣ್ಣ ಮೊತ್ತವನ್ನು ಇಡುವ ಬದಲು, ಒಂದೇ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಇಡುವುದರಿಂದ ಹೆಚ್ಚಿನ ಲಾಭಾವಾಗುತ್ತದೆ.   

3/5
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?

ಅನೇಕ ಉಳಿತಾಯ ಖಾತೆಗಳನ್ನು ಹೊಂದಿರುವುದು ಆಟೋ ಟ್ರಾನ್ಸ್ಫರ್ ಸಂದರ್ಭದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ಎಲ್ಲಾ ಠೇವಣಿಗಳನ್ನು ಒಂದು ಪೇ-ಚೆಕ್‌ನೊಂದಿಗೆ ಮಾಡಿದರೆ ಆಟೋ ಟ್ರಾನ್ಸ್ಫರ್ ಆಯ್ಕೆಯನ್ನು ಜಟಿಲವಾಗಬಹುದು. ಎಲ್ಲಾ ಖಾತೆಗಳು ಮತ್ತು  ಅವುಗಳಲ್ಲಿನ ಠೇವಣಿ ಮೇಲೆ ನಿಗಾ ಇಡುವುದು ಕಷ್ಟದ ಕೆಲಸವಾಗಿರುತ್ತದೆ.

4/5
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?

ಕೆಲವು ಬ್ಯಾಂಕುಗಳು ಖಾತೆಯಲ್ಲಿ ಕಡಿಮೆ ಬ್ಯಾಲೆನ್ಸ್ ಉಳಿಸಿಕೊಂಡರೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತವೆ. ಆದ್ದರಿಂದ, ಬಹು ಖಾತೆಗಳನ್ನು ನಿರ್ವಹಿಸುವ ವೆಚ್ಚ ಎಷ್ಟು ಎಂಬುದನ್ನು ಪರಿಶೀಲಿಸುವುದು ಮುಖ್ಯವಾಗಿರುತ್ತದೆ. ಇದಲ್ಲದೇ, ಬ್ಯಾಂಕುಗಳು ತಮ್ಮ ಗ್ರಾಹಕರಿಂದ ವಾರ್ಷಿಕ ನಿರ್ವಹಣೆ ಶುಲ್ಕ ಮತ್ತು ಸೇವಾ ಶುಲ್ಕವನ್ನು ವಿಧಿಸುತ್ತವೆ. ಈ ಶುಲ್ಕಗಳನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ.  

5/5
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?
ಒಂದಕ್ಕಿಂತ ಹೆಚ್ಚು ಉಳಿತಾಯ ಖಾತೆ ಇದ್ದರೆ ಆಗುವ ನಷ್ಟದ ಮಾಹಿತಿ ಇದೆಯೇ ?

ನೀವು ಅನೇಕ ಉಳಿತಾಯ ಖಾತೆಗಳನ್ನು ಹೊಂದಿದ್ದು, ಅವುಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ಉಳಿಸಿಕೊಂಡಿದ್ದೀರಿ ಎಂದೆ ಇರಲಿ. ಆದರೆ,   ದೀರ್ಘಕಾಲ ವಹಿವಾಟುಗಳನ್ನು ಮಾಡದಿದ್ದರೆ, ಆ ಖಾತೆಯು ನಿಷ್ಕ್ರಿಯ ಖಾತೆಯ ವರ್ಗಕ್ಕೆ ಹೋಗುತ್ತದೆ. ಇದನ್ನು ಮತ್ತೆ ಸಕ್ರಿಯಗೊಳಿಸಬೇಕು, ಇದಕ್ಕಾಗಿ ನೀವು ಸಂಪೂರ್ಣ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.

Read More