PHOTOS

Shani Dev: ಮರೆತೂ ಕೂಡ ಈ ವಸ್ತುಗಳನ್ನು ಉಚಿತವಾಗಿ ಪಡೆಯಬೇಡಿ, ಕಾರಣ ಇಲ್ಲಿದೆ

ni Dev Remedies: ಸಾಮಾನ್ಯವಾಗಿ ಶನಿ ದೇವನ ವಕ್ರದೃಷ್ಟಿಗೆ ಬೀಳಲು ಯಾರೂ ಇಷ್ಟಪಡುವುದಿಲ್ಲ. ಆತನ ಕೋಪದ ದೃಷ್ಟಿಯಿಂದ ಪಾರಾಗಲು ಜನರು ತರಹೇವಾರಿ ಉಪಾಯಗಳ...

Advertisement
1/5

1. ಶನಿ ದೇವನನ್ನು ಪ್ರಸನ್ನಗೊಳಿಸಲು ಆತನಿಗೆ ಕಪ್ಪು ಉದ್ದಿನ ಬೆಲೆಯನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ಶನಿದೋಷದಿಂದ ಮುಕ್ತಿ ಸಿಗುತ್ತದೆ. ಆದರೆ, ಉದ್ದಿನ ಬೇಳೆಯನ್ನು ಎಂದಿಗೂ ಕೂಡ ಉಚಿತವಾಗಿ ಪಡೆದು ಮನೆಗೆ ತರಬೇಡಿ, ಇದರಿಂದ ಶನಿ ಮುನಿಸಿಕೊಳ್ಳುತ್ತಾನೆ.  

2/5

2. ಶನಿವಾರದ ದಿನ ಶನಿಯ ಮುಂದೆ ಸಾಸಿವೆ ಎಣ್ಣೆ ದೀಪ ಉರಿಸುವುದು ಎಂದಿಗೂ ಕೂಡ ಶುಭ ಎಂದು ಹೇಳಲಾಗುತ್ತದೆ. ಆದರೆ ಅದನ್ನು ಉಚಿತವಾಗಿ ಎಂದಿಗೂ ಕೂಡ ಪಡೆಯಬೇಡಿ. ಇದರಿಂದ  ನಿಮಗೆ ಶನಿಯ ಅಶುಭ ದೆಸೆ ಎದುರಾಗುವ ಸಾಧ್ಯತೆ ಇರುತ್ತದೆ.  

3/5

3. ಶನಿವಾರದ ದಿನ ಕಬ್ಬಿಣ ಖರೀದಿ ಮತ್ತು ಮಾರಾಟ ಮಾಡಬಾರದು. ಇದರಿಂದ ನೀವು ಶನಿಯ ಕೆಟ್ಟ ದೃಷ್ಟಿ ಎದುರಿಸಬೇಕಾಗಬಹುದು ಹಾಗೂ ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳು ಎದುರಾಗಬಹುದು.  

4/5

4. ಕಪ್ಪು ಎಳ್ಳನ್ನು ಉಚಿತವಾಗಿ ಪಡೆಯುವುದರಿಂದ ಶನಿಯ ನಕಾರಾತ್ಮಕ ದೃಷ್ಟಿ ನಿಮ್ಮ ಮೇಲಾಗುವ ಸಾಧ್ಯತೆ ಇದೆ. ಹೀಗಾಗಿ ಎಳ್ಳನ್ನು ಎಂದಿಗೂ ಕೂಡ ಫ್ರೀಯಾಗಿ ಪಡೆದುಕೊಳ್ಳಬೇಡಿ.  

5/5

5. ಯಾವುದೇ ಓರ್ವ ವ್ಯಕ್ತಿಯಿಂದ ನೀವು ಯಾವುದಾದರೊಂದು ಕೆಲಸವನ್ನು ಮಾಡಿಸಿಕೊಂಡರೆ. ಅವರಿಗೆ ಅವರ ಕೆಲಸದ ಪ್ರತಿಯಾಗಿ ನೀಡಲಾಗುವ ಶುಲ್ಕವನ್ನು ಕೊಟ್ಟು ಕಳುಹಿಸಿ. ಈ ರೀತಿ ಮಾಡದೆ ಹೋದರೆ ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ. ಯಾರಿಂದಲೂ ಉಚಿತ ಸೇವೆ ಪಡೆಯುವುದು ಶನಿಗೆ ಇಷ್ಟವಾಗುವುದಿಲ್ಲ.  





Read More