PHOTOS

Astro Tips: ವಾರದ ಈ ದಿನ ಈ ಕೆಲಸಗಳನ್ನು ಮಾಡ್ಬೇಡಿ, ಇಲ್ಡಿದ್ರೆ... ಕಾಟ ತಪ್ಪಿದ್ದಲ್ಲ!

ದಯಪಾಲಿಸುವ ದೇವ ಎಂದು ಗುರುತಿಸಲಾಗುತ್ತದೆ. ಶನಿದೇವ ವ್ಯಕ್ತಿಗಳಿಗೆ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲ ನೀಡುತ್ತಾನೆ ಎನ್ನಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಶನಿದೇ...

Advertisement
1/5

1. ಶಾಸ್ತ್ರಗಳಲ್ಲಿ ಹೇಳಿದಂತೆ ಯಾವುದೇ ಓರ್ವ ವ್ಯಕ್ತಿಯ ಮೇಲೆ ಶನಿ ತನ್ನ ವಕ್ರದೃಷ್ಟಿಯನ್ನು ಬೀರಿದರೆ, ಆ ವ್ಯಕ್ತಿಯ ಜೀವನವೇ ಹಾಳಾಗುತ್ತದೆ ಎನ್ನಲಾಗಿದೆ. ಇಂತಹುದರಲ್ಲಿ ಆ ವ್ಯಕ್ತಿ ಶನಿದೇವನನ್ನು ಪ್ರಸನ್ನಗೊಳಿಸಲು ಉಪಾಯಗಳನ್ನು ಕೈಗೊಳ್ಳುತ್ತಿಲ್ಲ ಎಂದಾದರೆ, ನಿಯಮಗಳನ್ನು ಪಾಲಿಸಿಯೂ ಕೂಡ ಶನಿದೆವನನ್ನು ಪ್ರಸನ್ನಗೊಳಿಸಬಹುದು. ಶನಿವಾರದ ದಿನ ಯಾವ ಆಹಾರ ಪದಾರ್ಥಗಳ ಸೇವನೆಯಿಂದ ದೂರವಿರಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

2/5

2. ಹಾಲು- ಜೋತಿಷ್ಯ ಶಾಸ್ತ್ರದ ಪ್ರಕಾರ, ಹಾಲು ಶುಕ್ರಗ್ರಹಕ್ಕೆ ಸಂಬಂಧಿಸಿದೆ. ಶುಕ್ರನನ್ನು ಯೋನಿ ಇಚ್ಚೆಗಳ ಕಾರಕ ಗ್ರಹ ಎಂದು ಹೇಳಲಾಗಿದೆ. ಇನ್ನೊಂದೆಡೆ ಶನಿಗ್ರಹ ಆಧ್ಯಾತ್ಮ ಹಾಗೂ ಸತ್ಯವನ್ನು ಹೆಚ್ಚಿಸುವ ಗ್ರಹವಾಗಿದೆ. ಹೀಗಿರುವಾಗ ಜೋತಿಷ್ಯ ಪಂಡಿತರ ಪ್ರಕಾರ, ವ್ಯಕ್ತಿಯು ಶನಿವಾರದ ದಿನ ಹಾಲಿನ ಸೇವನೆ ಮಾಡಬಾರದು ಎನ್ನುತ್ತಾರೆ.  

3/5

3. ಮಸೂರಿ ಅಥವಾ ಚನ್ನಂಗಿ ಬೇಳೆ ಕೆಂಪು ಇರುವ ಕಾರಣ ಶಾಸ್ತ್ರಗಳಲ್ಲಿ ಅದರ ಸಂಬಂಧವನ್ನು ಮಂಗಳ ಗ್ರಹಕ್ಕೆ ಕಲ್ಪಿಸಲಾಗಿದೆ. ಇನ್ನೊಂದೆಡೆ ಮಂಗಳ ಹಾಗೂ ಶನಿ ಗ್ರಹಗಳು ಕೋಪ ಸ್ವಭಾವದ ಗ್ರಹಗಳು ಎಂದು ಭಾವಿಸಲಾಗುತ್ತದೆ. ಹೀಗಿರುವಾಗ ಶನಿವಾರ ಚನ್ನಂಗಿ ಬೇಳೆ ಸೇವಿಸುವುದರಿಂದ ವ್ಯಕ್ತಿಯ ಸ್ವಭಾವದಲ್ಲಿ ಕೋಪ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.  

4/5

4. ಶನಿದೇವನನ್ನು ನ್ಯಾಯದ ದೇವರು ಎಂದು ಭಾವಿಸಲಾಗುತ್ತದೆ. ಹೀಗಾಗಿ ಜನರನ್ನು ಸತ್ಯದ ದಾರಿಗೆ ತರುವುದು ಆತನಿಗೆ ಇಷ್ಟದ ಕೆಲಸ. ಸತ್ಯದ ಜೊತೆಗೆ ಶನಿ ವ್ಯಕ್ತಿಗಳನ್ನು ಆಧ್ಯಾತ್ಮದ ಮಾರ್ಗದಲ್ಲಿಯೂ ಕೂಡ ಕೊಂಡೊಯ್ಯುತ್ತಾರೆ. ಹೀಗಾಗಿ ಶನಿವಾರದ ದಿನ ಮಾಂಸ-ಮಧ್ಯ ಅಥವಾ ಯಾವುದೇ ಅಮಲು ತರಿಸುವ ಪದಾರ್ಥಗಳ ಸೇವನೆ ಮಾಡಬಾರದು ಎನ್ನಲಾಗುತ್ತದೆ. ಇದರಿಂದ ಶನಿಯ ಕೂದೃಷ್ಟಿ ಬೀಳುತ್ತದೆ. ಅದರಲ್ಲಿಯೂ ವಿಶೇಷವಾಗಿ ಶನಿಯ ಸಾಡೇಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ಎದುರಿಸುತ್ತಿರುವವರು ಮರೆತೂ ಕೂಡ ಈ ಪದಾರ್ಥಗಳನ್ನು ಸೇವಿಸಬಾರದು.  

5/5

5. ಕೆಂಪು ಮೆಣಸು: ಧರ್ಮಗ್ರಂಥಗಳ ಪ್ರಕಾರ ಶನಿ ದೇವನ ಸ್ವಭಾವ ಉಗ್ರ ಸ್ವಭಾವ. ಹೀಗಾಗಿ ಶನಿಗೆ ತಂಪು ನೀಡುವ ಪದಾರ್ಥಗಳೆಂದರೆ ಇಷ್ಟ ಎನ್ನಲಾಗುತ್ತದೆ. ಹೀಗಿರುವಾಗ ಶನಿವಾರದ ದಿನ ಒಂದು ವೇಳೆ ನೀವು ಕೆಂಪು ಮೆಣಸಿನ ಸೇವನೆಯನ್ನು ಮಾಡಿದರೆ, ನಿಮ್ಮ ಸಂಕಷ್ಟಗಳು ಹೆಚ್ಚಾಗಬಹುದು.ಶನಿದೇವನ ಕೋಪದಿಂದ ಪಾರಾಗಲು ಶನಿವಾರ ಕೆಂಪು ಮೆಣಸಿನ ಸೇವನೆಯಿಂದ ದೂರವಿರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)





Read More