PHOTOS

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಈ 5 ಪ್ರಮುಖ ವಿಷಯಗಳು ತಿಳಿದಿರಲಿ

ೋಜನೆಯನ್ನು ಆಯ್ಕೆ ಮಾಡುವುದು ಮುಖ್ಯ. ಹೀಗಾಗಿ ಇದರಲ್ಲಿ ಹೂಡಿಕೆ ಮಾಡುವ ಮುನ್ನ ಆರಂಭಿಕ ಹೂಡಿಕೆದಾರರು  ಕೆಲವು ವ...

Advertisement
1/5
ರಿಸ್ಕ್ ಕೆಪ್ಯಾಸಿಟಿ ವಿಶ್ಲೇಷಿಸಿ
ರಿಸ್ಕ್ ಕೆಪ್ಯಾಸಿಟಿ ವಿಶ್ಲೇಷಿಸಿ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು, ನಿಮ್ಮ ರಿಸ್ಕ್ ಕೆಪ್ಯಾಸಿಟಿ ಮತ್ತು ರಿಟರ್ನ್ ಗೋಲ್ಸ್ ಗಳನ್ನು ವಿಶ್ಲೇಷಿಸಬೇಕು. ಅಂದರೆ, ಮುಂದಿನ 10 ವರ್ಷಗಳವರೆಗೆ ನಿರ್ದಿಷ್ಟ ಮೊತ್ತದ ಗುರಿಯನ್ನು ಹೊಂದಿದ್ದರೆ  ರಿಸ್ಕ್ ತೆಗೆದುಕೊಳ್ಳಬಹುದು. ನಿಮ್ಮ ಉದ್ದೇಶಗಳನ್ನು ಪೂರೈಸುವ ಯೋಜನೆಯನ್ನು ಆರಿಸಿಕೊಳ್ಳಬೇಕು. ಇದರ ಹೊರತಾಗಿ,  ರಿಸ್ಕ್  ಮತ್ತು ಹಣಕಾಸಿನ ಗುರಿಗಳನ್ನು ಸಾಧಿಸುವ ಆಧಾರದ ಮೇಲೆ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಎಷ್ಟು ಹೂಡಿಕೆ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

2/5
ಹೂಡಿಕೆ ಎಲ್ಲಿ ಮಾಡಬೇಕು ತಿಳಿದಿರಲಿ
ಹೂಡಿಕೆ ಎಲ್ಲಿ ಮಾಡಬೇಕು ತಿಳಿದಿರಲಿ

ಎಲ್ಲಾ ಹೂಡಿಕೆಯನ್ನು ಒಂದೇ ಕಡೆ ಮಾಡುವುದಕ್ಕಿಂತ, ವಿಭಿನ್ನ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಇದಕ್ಕಾಗಿ, ಹೂಡಿಕೆದಾರರು ಹೂಡಿಕೆಯನ್ನು ಹಂಚಿಕೆ ಹೇಗೆ ಮಾಡಬೇಕೆನ್ನುವುದನ್ನು ಅರ್ಥಮಾಡಿಕೊಳ್ಳಬೇಕು. 

3/5
ಸ್ಕೀಮ್ ಆಯ್ಕೆಯಲ್ಲಿ ಎಚ್ಚರಿಕೆ
ಸ್ಕೀಮ್ ಆಯ್ಕೆಯಲ್ಲಿ ಎಚ್ಚರಿಕೆ

ಹೂಡಿಕೆದಾರರು ಅನೇಕ ಮ್ಯೂಚುಯಲ್ ಫಂಡ್ ಯೋಜನೆ ಆಯ್ಕೆಗಳನ್ನು ಪಡೆಯುತ್ತಾರೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಆಯ್ಕೆ ಮಾಡಬಹುದು. ಯಾವುದೇ ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು, ಅದರ ಹಿಂದಿನ ಕಾರ್ಯಕ್ಷಮತೆ, ನಿರ್ವಹಣೆ ದಕ್ಷತೆ ಮತ್ತು ವೆಚ್ಚದ ಅನುಪಾತದಂತಹ ಕೆಲವು ವಿಷಯಗಳನ್ನು ಪರಿಶೀಲಿಸಬಹುದು. 

4/5
SIP ಹೂಡಿಕೆ
SIP ಹೂಡಿಕೆ

ದೀರ್ಘಾವಧಿಯವರೆಗೆ ಹೂಡಿಕೆ ಮಾಡುವಾಗ  SIP ಮೂಲಕ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. SIP ಎಂದರೆ ವ್ಯವಸ್ಥಿತ ಹೂಡಿಕೆ ಯೋಜನೆ. ಇದರ ಸಹಾಯದಿಂದ ಮಾರುಕಟ್ಟೆಯ ಏರಿಳಿತದ ನಡುವೆ ಉತ್ತಮ ಆದಾಯವನ್ನು ಪಡೆಯಬಹುದು.    

5/5
. ಪೋರ್ಟ್ಫೋಲಿಯೋ ವಿಶ್ಲೇಷಣೆ
. ಪೋರ್ಟ್ಫೋಲಿಯೋ ವಿಶ್ಲೇಷಣೆ

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ, ನಿಮ್ಮ ಪೋರ್ಟ್‌ಫೋಲಿಯೊವನ್ನು ಪರಿಶೀಲಿಸುತ್ತಿರಬೇಕು. ಇದರೊಂದಿಗೆ, ನಿಮ್ಮ ಗುರಿಯ ಪ್ರಕಾರ ಯಾವ ಹೂಡಿಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು. 





Read More