PHOTOS

Bilvapatra Benefits: ಶಿವನಿಗೆ ಪ್ರಿಯವಾದ ಈ ಎಲೆಯಿಂದ ಫಟಾಫಟ್ ಕಂಟ್ರೋಲ್ ಆಗುತ್ತೆ ಶುಗರ್

Bael Leaves Benefits: ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಔಷಧೀಯ ಗುಣಗಳಿಂದಲೂ ಸಮೃದ್ಧವಾಗಿದೆ. 

...
Advertisement
1/8
ಬಿಲ್ವಪತ್ರೆ
ಬಿಲ್ವಪತ್ರೆ

ಭಗವಾನ್ ಶಿವನಿಗೆ ಬಲು ಪ್ರಿಯವಾದ ಬಿಲ್ವಪತ್ರೆ ಹಲವು ಔಷಧೀಯ ಗುಣಗಳನ್ನು ಒಳಗೊಂಡಿದ್ದು ಇದರ ಬಳಕೆಯಿಂದ ಶುಗರ್ ಕಂಟ್ರೋಲ್‌ ಮಾಡುವುದು ತುಂಬಾ ಸುಲಭ. ಅಷ್ಟೇ ಅಲ್ಲ, ಇದರಿಂದ ಹಲವು ಆರೋಗ್ಯ ಪ್ರಯೋಜನಗಳು ಕೂಡ ಇವೆ. 

2/8
ಮಧುಮೇಹ
ಮಧುಮೇಹ

ಈ ಒತ್ತಡದ ಜೀವನ ಶೈಲಿಯಲ್ಲಿ ಡಯಾಬಿಟಿಸ್ ಸರ್ವೇ ಸಾಮಾನ್ಯ ಕಾಯಿಲೆಯಾಗಿದೆ. ಆದರೆ ಬಿಲ್ವಪತ್ರೆಯಿಂದ ಚಹಾ ತಯಾರಿಸಿ ಸೇವಿಸುವುದರಿಂದ ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಿ ಶುಗರ್ ಕಂಟ್ರೋಲ್ ಮಾಡಲು ಸಹಕಾರಿ ಆಗಿದೆ. 

3/8
ದೃಷ್ಟಿ ವೃದ್ಧಿ
ದೃಷ್ಟಿ ವೃದ್ಧಿ

ಬಿಲ್ವಪತ್ರೆ ಎಲೆಗಳನ್ನು ಚೆನ್ನಾಗಿ ತೊಳೆದು ಕಲ್ಲಿನ ಮೇಲೆ ಅರೆದು ಇದನ್ನು ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚುವುದರಿಂದ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗಿ ದೃಷ್ಟಿ ವೃದ್ಧಿಯಾಗುತ್ತದೆ. 

4/8
ದೇಹದ ದುರ್ಗಂಧ
ದೇಹದ ದುರ್ಗಂಧ

ಬಿಲ್ವಪತ್ರೆಯನ್ನು ನೀರಿನಲ್ಲಿ ನೆನೆಹಾಕಿ ಸ್ನಾನ ಮಾಡುವ ನೀರಿಗೆ ಅದನ್ನು ಬೆರೆಸಿ ಸ್ನಾನ ಮಾಡುವುದರಿಂದ ದೇಹದ ದುರ್ಗಂಧ ನಿವಾರಿಸಬಹುದು. 

5/8
ನಿದ್ರಾಹೀನತೆ
 ನಿದ್ರಾಹೀನತೆ

ನಿತ್ಯ ಒಂದೆರಡು ಚಮಚ ಬಿಲ್ವಪತ್ರೆ ರಸ ಸೇವಿಸುವುದರಿಂದ ದೇಹದಲ್ಲಿ ನಿಶ್ಚಕ್ತಿ ದೂರವಾಗಿ ನೆಮ್ಮದಿಯ ನಿದ್ರೆ ಪಡೆಯಬಹುದು. 

6/8
ಮಾನಸಿಕ ಒತ್ತಡ
ಮಾನಸಿಕ ಒತ್ತಡ

ಬಿಲ್ವಪತ್ರೆ ಕಷಾಯ ತಯಾರಿಸಿ ಸೇವಿಸುವುದರಿಂದ ಮಾನಸಿಕ ಒತ್ತಡ ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. 

7/8
ಹೃದಯದ ಆರೋಗ್ಯ
ಹೃದಯದ ಆರೋಗ್ಯ

ಬಿಲ್ವಪತ್ರೆಯಲ್ಲಿ ವಿಟಮಿನ್ ಎ, ಸಿ, ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು ಇದು  ಹೈಬಿಪಿ, ಕೊಲೆಸ್ಟ್ರಾಲ್ ನಿಯಂತ್ರಿಸಿ ಹೃದಯದ ಆರೋಗ್ಯಕ್ಕೂ ಕೊಡುಗೆ ನೀಡುತ್ತದೆ.   

8/8
ಸೂಚನೆ
ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.





Read More