PHOTOS

Delhi-Meerut RRTS: ರೆಡಿಯಾಯ್ತು ದೇಶದ ಅತಿ ವೇಗದ ರೈಲು! ಫಸ್ಟ್ ಲುಕ್ ಇಲ್ಲಿದೆ ನೋಡಿ

ಹವಾನಿಯಂತ್ರಿತ RRTS ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರಮಾಣಿತ ಹಾಗೂ ಕಾಯ್ದಿರಿಸಿದ ಕೋಚ್‌ಗಳು ಮತ್ತು ಪ್ರೀಮಿಯಂ ದರ್ಜೆ...

Advertisement
1/6
ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ
ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ

ಒಮ್ಮೆ ಈ ರೈಲುಗಳನ್ನು ಅಲ್‌ಸ್ಟೋಮ್ ಎನ್‌ಸಿಆರ್‌ಟಿಸಿಗೆ ಹಸ್ತಾಂತರಿಸಿದ ನಂತರ ದೊಡ್ಡ ಟ್ರೇಲರ್‌ಗಳಲ್ಲಿ ದುಹೈ ಡಿಪೋಗೆ ತರಲಾಗುವುದು. ಇವುಗಳನ್ನು ಗಾಜಿಯಾಬಾದ್‌ನಲ್ಲಿ ದೆಹಲಿ-ಗಾಜಿಯಾಬಾದ್-ಮೀರತ್ ಆರ್‌ಆರ್‌ಟಿಎಸ್ ಕಾರಿಡಾರ್‌ನ ಕಾರ್ಯಾಚರಣೆಗಾಗಿ ವೇಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಡಿಪೋದಲ್ಲಿ ಈ ರೈಲುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಎಲ್ಲಾ ಸೌಲಭ್ಯಗಳ ನಿರ್ಮಾಣ ಕಾರ್ಯವು ಮುಕ್ತಾಯದ ಹಂತದಲ್ಲಿದೆ.

2/6
ದುಹೈ ಡಿಪೋದಲ್ಲಿ ಅನಾವರಣಗೊಳಿಸಲಾಯಿತು
ದುಹೈ ಡಿಪೋದಲ್ಲಿ ಅನಾವರಣಗೊಳಿಸಲಾಯಿತು

ಈ ಹಸ್ತಾಂತರ ಸಮಾರಂಭವು ಶನಿವಾರ ಅಲ್‌ಸ್ಟಾಮ್‌ನ (ಈ ಹಿಂದೆ ಬೊಂಬಾರ್ಡಿಯರ್ ಎಂದಿತ್ತು) ಸ್ಥಾವರದಲ್ಲಿ ನಡೆಯಲಿದೆ. ಅಲ್ಲಿ RRTS ರೈಲು ಸೆಟ್‌ನ ಕೀಗಳನ್ನು NCRTCಗೆ ಹಸ್ತಾಂತರಿಸಲಾಗುವುದು. ಭಾರತದ ಮೊದಲ ಆರ್‌ಆರ್‌ಟಿಎಸ್ ರೈಲುಗಳ ಒಳಾಂಗಣ ಮತ್ತು ಅದರ ಪ್ರಯಾಣಿಕರ-ಕೇಂದ್ರಿತ ವೈಶಿಷ್ಟ್ಯಗಳನ್ನು ಇತ್ತೀಚೆಗೆ ಮಾರ್ಚ್ 16, 2022ರಂದು ಗಾಜಿಯಾಬಾದ್‌ನ ದುಹೈ ಡಿಪೋದಲ್ಲಿ ಅನಾವರಣಗೊಳಿಸಲಾಯಿತು.  

3/6
ಅತ್ಯಂತ ವೇಗದ ರೈಲು
ಅತ್ಯಂತ ವೇಗದ ರೈಲು

180 km/h ವಿನ್ಯಾಸದ ವೇಗ, 160 km/h ಕಾರ್ಯಾಚರಣೆಯ ವೇಗ ಮತ್ತು 100 km/h ಸರಾಸರಿ ವೇಗದ ವೈಶಿಷ್ಟ್ಯಗಳನ್ನು ಹೊಂದಿರುವ ಈ RRTS ರೈಲುಗಳು ಭಾರತದಲ್ಲಿಯೇ ಇದುವರೆಗೆ ಅತ್ಯಂತ ವೇಗದ ರೈಲುಗಳಾಗಿವೆ.

4/6
ರೈಲಿನ ವಿಶೇಷತೆಗಳು
ರೈಲಿನ ವಿಶೇಷತೆಗಳು

ಈ RRTS ರೈಲುಗಳು ದಕ್ಷತಾಶಾಸ್ತ್ರೀಯವಾಗಿ 2x2 ಅಡ್ಡ ಮೆತ್ತನೆಯ ಆಸನ, ವಿಶಾಲವಾದ ಸ್ಟ್ಯಾಂಡಿಂಗ್ ಸ್ಪೇಸ್, ​​ಲಗೇಜ್ ರ್ಯಾಕ್, CCTV ಕ್ಯಾಮೆರಾಗಳು, ಲ್ಯಾಪ್‌ಟಾಪ್/ಮೊಬೈಲ್ ಚಾರ್ಜಿಂಗ್ ಸೌಲಭ್ಯ, ಡೈನಾಮಿಕ್ ಮಾರ್ಗ ನಕ್ಷೆ, ಸ್ವಯಂ ನಿಯಂತ್ರಿತ ಸುತ್ತುವರಿದ ಬೆಳಕಿನ ವ್ಯವಸ್ಥೆ, ತಾಪನ ಗಾಳಿ ಮತ್ತು ಹವಾನಿಯಂತ್ರಣ ವ್ಯವಸ್ಥೆ (HVAC) ಮತ್ತು ಇತರ ಸೌಲಭ್ಯಗಳನ್ನು ವಿನ್ಯಾಸಗೊಳಿಸಲಾಗಿದೆ.

5/6
ಪ್ರೀಮಿಯಂ ದರ್ಜೆಯ ಕೋಚ್‌
ಪ್ರೀಮಿಯಂ ದರ್ಜೆಯ ಕೋಚ್‌

ಹವಾನಿಯಂತ್ರಿತ RRTS ರೈಲುಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರಮಾಣಿತ ಹಾಗೂ ಕಾಯ್ದಿರಿಸಿದ ಕೋಚ್‌ಗಳು ಮತ್ತು ಪ್ರೀಮಿಯಂ ದರ್ಜೆಯ (ಪ್ರತಿ ರೈಲಿಗೆ ಒಂದು ಕೋಚ್) ಕೋಚ್‌ಗಳನ್ನು ಹೊಂದಿರುತ್ತವೆ. ಸಾವ್ಲಿಯಲ್ಲಿರುವ ಅಲ್‌ಸ್ಟೋಮ್‌ನ ಉತ್ಪಾದನಾ ಘಟಕವು ಆರ್‌ಆರ್‌ಟಿಎಸ್ ಕಾರಿಡಾರ್‌ಗೆ ಮೊದಲು ಒಟ್ಟು 210 ಕಾರುಗಳನ್ನು ವಿತರಿಸಲಿದೆ. ಇದು ದೆಹಲಿ-ಗಾಜಿಯಾಬಾದ್-ಮೀರತ್ ಕಾರಿಡಾರ್‌ನಲ್ಲಿ ಪ್ರಾದೇಶಿಕ ಸಾರಿಗೆ ಸೇವೆಗಳ ಕಾರ್ಯಾಚರಣೆಗಾಗಿ ರೈಲುಸೆಟ್‌ಗಳು ಮತ್ತು ಮೀರತ್‌ನಲ್ಲಿ ಸ್ಥಳೀಯ ಮೆಟ್ರೋ ಸೇವೆಗಳನ್ನು ಒಳಗೊಂಡಿದೆ.

6/6
ಕಾಮಗಾರಿ ಭರದಿಂದ ಸಾಗುತ್ತಿದೆ
ಕಾಮಗಾರಿ ಭರದಿಂದ ಸಾಗುತ್ತಿದೆ

ಆರ್‌ಆರ್‌ಟಿಎಸ್ ಕಾರಿಡಾರ್ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ರೈಲುಗಳ ಆಗಮನದ ನಂತರ ಈ ವರ್ಷದ ಅಂತ್ಯದ ವೇಳೆಗೆ ಆದ್ಯತಾ ವಿಭಾಗದ ಆರಂಭಿಕ ಪ್ರಾಯೋಗಿಕ ಚಾಲನೆ ಪ್ರಾರಂಭವಾಗುವ ನಿರೀಕ್ಷೆಯಿದೆ. 2023ರ ವೇಳೆಗೆ ಸಾಹಿಬಾಬಾದ್‌ನಿಂದ ದುಹೈ ನಡುವಿನ 17 ಕಿಮೀ ಆದ್ಯತೆಯ ವಿಭಾಗ ಮತ್ತು 2025ರ ವೇಳೆಗೆ ಸಂಪೂರ್ಣ ಕಾರಿಡಾರ್ ಮಾಡುವ ಗುರಿ ಇದೆ.





Read More