PHOTOS

ಪೈಲಟ್‌ ಪತಿಗೆ ವಿಚ್ಛೇದನ ನೀಡಿ, ಇಸ್ಲಾಂಗೆ ಮತಾಂತರಗೊಂಡು ಎರಡನೇ ಮದುವೆಯಾದ ʻಈʼ ನಟಿ ಯಾರು ಗೊತ್ತಾ..?

ವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವರಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗೊರಿಯಾಗಿದ್ದರು. ಹಿಂದೂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು...

Advertisement
1/5

ದೀಪಿಕಾ ಕಾಕರ್ ಅವರು ನಟ ಶೋಯೆಬ್ ಇಬ್ರಾಹಿಂ ಅವರನ್ನು ವರಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗೊರಿಯಾಗಿದ್ದರು. ಹಿಂದೂ ಆಗಿದ್ದರೂ ಮುಸ್ಲಿಂ ಹುಡುಗನನ್ನು ಮದುವೆಯಾಗಿದ್ದಕ್ಕಾಗಿ ಆಕೆಯನ್ನು ಟ್ರೋಲ್ ಮಾಡಲಾಯಿತು. ಕಾರಣಾಂತರಗಳಿಂದ ಇದೀಗ ನಟಿ ಮತ್ತೆ ಸುದ್ದಿಯಲ್ಲಿದ್ದಾಳೆ. ಆಕೆಯ ಫೋಟೋಗಳು ಮತ್ತು ವಿಡಿಯೋಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ನಟ ಶೋಯೆಬ್ ದೀಪಿಕಾ ಅವರ ಎರಡನೇ ಪತಿ ಎಂಬುದು ಕೆಲವೇ ಜನರಿಗೆ ತಿಳಿದಿದೆ.  

2/5

ನಟಿಯಾಗುವ ಮೊದಲು ದೀಪಿಕಾ ಗಗನಸಖಿಯಾಗಿ ಕೆಲಸ ಮಾಡಿದ್ದು ಕೆಲವರಿಗೆ ಗೊತ್ತು. ಅವರು ಮುಂಬೈ ವಿಶ್ವವಿದ್ಯಾಲಯದಿಂದ ಪದವಿ ಪಡೆದು, ಪದವಿಯ ನಂತರ ಸುಮಾರು 3 ವರ್ಷಗಳ ಕಾಲ ಜೆಟ್ ಏರ್ವೇಸ್ನಲ್ಲಿ ಕೆಲಸ ಮಾಡಿ, ಅನಾರೋಗ್ಯದ ಕಾರಣದಿಂದ ಕೆಲಸ ಬಿಟ್ಟು ನಟನಾ ಲೋಕಕ್ಕೆ ಕಾಲಿಟ್ಟರು. ಮಾಧ್ಯಮ ವರದಿಗಳ ಪ್ರಕಾರ, ದೀಪಿಕಾ ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಪೈಲಟ್ ರೌನಕ್ ಸ್ಯಾಮ್ಸನ್ ಅವರನ್ನು ಭೇಟಿಯಾದರು. ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಅಂದಹಾಗೆ, 2011ರಲ್ಲಿ ರೌನಕ್ ಜೊತೆ ದೀಪಿಕಾ ಮೊದಲ ಮದುವೆ ಆಗಿತ್ತು. ಆದಾಗ್ಯೂ, ಈ ಮದುವೆಯು ಹೆಚ್ಚು ಕಾಲ ಉಳಿಯಲಿಲ್ಲ. 2015ರಲ್ಲಿ ಇಬ್ಬರೂ ವಿಚ್ಛೇದನ ಪಡೆದು ದೂರವಾದರು.  

3/5

ವರದಿಗಳ ಪ್ರಕಾರ, ದೀಪಿಕಾ ಕಕ್ಕರ್ ಅವರ ಮೊದಲ ಮದುವೆ ಮುರಿದು ಬೀಳಲು ಶೋಯೆಬ್ ಇಬ್ರಾಹಿಂ ಕಾರಣ ಎಂದು ನಂಬಲಾಗಿದೆ. ವರದಿಗಳ ಪ್ರಕಾರ, ದೀಪಿಕಾ ಮದುವೆಯ ಸಮಯದಲ್ಲಿ ಶೋಯೆಬ್ ಅನ್ನು ಪ್ರೀತಿಸುತ್ತಿದ್ದರು. ಇವರಿಬ್ಬರು ಮೊದಲು ಭೇಟಿಯಾದದ್ದು 'ಸಸುರಲ್ ಸಿಮ್ರಾನ್ ಕಾ' ಟಿವಿ ಶೋ ಸೆಟ್‌ನಲ್ಲಿ. ಆದರೆ ಇವೆರಡರ ನಡುವೆ ಧಾರ್ಮಿಕ ಸಂಘರ್ಷವಿದೆ. ದೀಪಿಕಾ ಮೊದಲು ರೌನಕ್‌ಗೆ ವಿಚ್ಛೇದನ ನೀಡಿ ನಂತರ ಶೋಯೆಬ್ ನನ್ನು ಮದುವೆಯಾಗಲು ತನ್ನ ಧರ್ಮವನ್ನೂ ಬದಲಾಯಿಸಿದಳು. ಶೋಯೆಬ್‌ಗಾಗಿ ಸಮಾಜ ಹಾಗೂ ಕುಟುಂಬದ ವಿರುದ್ಧ ಹೋರಾಡಿದಳು. 2018 ರಲ್ಲಿ ಶೋಯೆಬ್ ಅವರನ್ನು ಮದುವೆಯಾಗಲು, ಅವರು ಇಸ್ಲಾಂಗೆ ಮತಾಂತರಗೊಂಡರು.  

4/5

ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಕ್ಕಾಗಿ ಜನರು ನಟಿಯನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ. ದೀಪಿಕಾ 2018 ರಲ್ಲಿ ಶೋಯೆಬ್ ಅವರನ್ನು ವಿವಾಹವಾದರು. ಅದೇ ವರ್ಷ ಬಿಗ್ ಬಾಸ್ 12 ರ ವಿಜೇತೆಯೂ ಆದರು. ಬಿಗ್ ಬಾಸ್ ಟ್ರೋಫಿ ಗೆದ್ದ ನಂತರ, ಅವರು ಮೊದಲು ಅಜ್ಮೀರ್ ಷರೀಫ್‌ಗೆ ತೆರಳಿದರು. ಅವರ ಪತಿ ಶೋಯೆಬ್ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದರು. ಆಕೆ ಅಜ್ಮೀರ್‌ಗೆ ಹೋದಾಗ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದಳು. ಆದರೆ, ಅವರು ಅಜ್ಮೀರ್‌ನಿಂದ ಹಿಂದಿರುಗಿದಾಗ, ಮುಂಬೈನ ದೇವಸ್ಥಾನದಲ್ಲಿ ಪತಿಯೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಮತ್ತೆ ವಿವಾದವನ್ನು ಹೆಚ್ಚಿಸಿದರು.  

5/5

ದೀಪಿಕಾ ಮತ್ತು ಶೋಯೆಬ್ ಮದುವೆಯಗೆ ಸಾಕ್ಷಿಯಾಗಿ ಒಬ್ಬ ಮಗ ಇದ್ದಾನೆ. ತನ್ನ ಮಗುವಿಗೆ ರುಹಾನ್ ಎಂದು ಹೆಸರಿಟ್ಟಳು. ಆದರೆ ಆ ಹೆಸರು ಹೇಳುತ್ತಲೇ ನೆಟ್ಟಿಗರು ದೀಪಿಕಾ ಅವರನ್ನು ಟ್ರೋಲ್ ಮಾಡಿದ್ದಾರೆ.   





Read More