PHOTOS

Astro Tips: ಈ 3 ದೊಡ್ಡ ಗ್ರಹಗಳ ಮೈತ್ರಿಯಿಂದ ದೇಶದಲ್ಲಿ ಭೂಕಂಪ-ಆರ್ಥಿಕ ಬಿಕ್ಕಟ್ಟು ಸಾಧ್ಯತೆ!

Surya-Guru-Rahu Yog: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 2 ಗ್ರಹಗಳ ಮಿಲನವನ್ನು ಯುತಿ ಎನ್ನುತ್ತಾರೆ. ಗ್ರಹಗಳ ಈ ಸಂಯೋಜನೆಯು ಕೆಲವೊಮ್ಮೆ ...

Advertisement
1/6
ಬೀದಿಗಿಳಿದು ಆಕ್ರೋಶ
ಬೀದಿಗಿಳಿದು ಆಕ್ರೋಶ

ಮೇಷ ರಾಶಿಯಲ್ಲಿ ಸೂರ್ಯ-ಗುರು-ರಾಹು ಸಂಯೋಗದ ಋಣಾತ್ಮಕ ಪರಿಣಾಮಗಳು ಹಲವು ರೀತಿಯಲ್ಲಿ ಕಂಡುಬರುತ್ತವೆ. ಈ 3 ಗ್ರಹಗಳ ಮೈತ್ರಿಯಿಂದಾಗಿ ರಾಜಕೀಯ ಮೇಲಾಟ ಕಾಣಬಹುದು. ಅಷ್ಟೇ ಅಲ್ಲ ಸರ್ಕಾರದ ಯಾವುದೇ ಪ್ರಮುಖ ನಿರ್ಧಾರ ಸಾರ್ವಜನಿಕರನ್ನು ಕೆರಳಿಸುವ ಸಾಧ್ಯತೆಯೂ ಇದೆ. ಆ ವೇಳೆ ಸಾರ್ವಜನಿಕರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

2/6
ಜನರ ಪ್ರಾಣಕ್ಕೆ ಅಪಾಯ
ಜನರ ಪ್ರಾಣಕ್ಕೆ ಅಪಾಯ

ಜ್ಯೋತಿಷ್ಯದಲ್ಲಿ ದೇವ ಗುರು ಗುರುವನ್ನು ಆಯಸ್ಸು ಒದಗಿಸುವ ಮತ್ತು ಜೀವನದ ರಕ್ಷಕನೆಂದು ಪರಿಗಣಿಸಲಾಗುತ್ತದೆ. ರಾಹುವಿನೊಡನೆ ಇರುವುದರಿಂದಲೇ ದೇಶ-ಪ್ರಪಂಚದಲ್ಲಿ ಮಾರಕ ರೋಗ ಬರಬಹುದು, ಇದರಿಂದ ಸಾವಿರಾರು ಜನರ ಪ್ರಾಣಕ್ಕೆ ಅಪಾಯ ಎದುರಾಗುವ ಸಾಧ‍್ಯತೆ ಇರುತ್ತದೆ.

3/6
ಹೆಚ್ಚಿನ ಪ್ರಭಾವ
ಹೆಚ್ಚಿನ ಪ್ರಭಾವ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ 22ರಂದು ಮೇಷ ರಾಶಿಯಲ್ಲಿ ಸೂರ್ಯ, ರಾಹು ಮತ್ತು ಗುರುಗಳ ಸಂಯೋಜನೆಯು ದೇಶ ಮತ್ತು ಪ್ರಪಂಚದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಸಮಯದಲ್ಲಿ ಬಹಳಷ್ಟು ನಕಾರಾತ್ಮಕ ಪರಿಣಾಮಗಳು ಕಂಡುಬರುತ್ತವೆ. ಈ ವೇಳೆ ಭಾರೀ ಅಗ್ನಿ ಅವಘಡ ಸಂಭವಿಸಬಹುದು ಎಂದು ನಂಬಲಾಗಿದೆ. ಯಾವುದೇ ಕಾಡಿನಲ್ಲಿ ಬೆಂಕಿ ಹೊತ್ತಿಕೊಳ್ಳುವ ಘಟನೆ ಇತ್ಯಾದಿ ಸುದ್ದಿಯಾಗಬಹುದು.

4/6
ಆರ್ಥಿಕ ಬಿಕ್ಕಟ್ಟು
ಆರ್ಥಿಕ ಬಿಕ್ಕಟ್ಟು

ಈ ಗ್ರಹಗಳ ಸಂಯೋಗದ ಸಮಯದಲ್ಲಿ ಅನೇಕ ದೇಶಗಳ ಆರ್ಥಿಕ ಸ್ಥಿತಿಯ ಮೇಲೆ ಬಿಕ್ಕಟ್ಟು ಕಾಣಿಸಿಕೊಂಡಿದೆ. ಅಷ್ಟೇ ಅಲ್ಲ ಈ ಅವಧಿಯಲ್ಲಿ ಷೇರುಪೇಟೆ ಮತ್ತು ಚಿನ್ನದ ಬೆಲೆಯಲ್ಲಿ ಹಠಾತ್ ದೊಡ್ಡ ಕುಸಿತ ಕಂಡುಬರಲಿದೆ. ಇದು ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟನ್ನು ಆಹ್ವಾನಿಸುತ್ತದೆ.

5/6
ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿ
ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿ

ಮೇಷ ರಾಶಿಯಲ್ಲಿ ಈ 3 ಗ್ರಹಗಳ ಸಂಯೋಜನೆಯು ಭೂಮಿಯ ಯಾವುದೇ ಪ್ರದೇಶದಲ್ಲಿ ಭೂಕಂಪ, ಸುನಾಮಿ ಮತ್ತು ಜ್ವಾಲಾಮುಖಿಯಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

6/6
ಯುದ್ಧದ ಸಾಧ್ಯತೆ
ಯುದ್ಧದ ಸಾಧ್ಯತೆ

ಈ 3 ಗ್ರಹಗಳ ಮೈತ್ರಿಯು ಮೇಷ ರಾಶಿಯಲ್ಲಿ ಏಪ್ರಿಲ್ 22ರಂದು ಸಂಭವಿಸಲಿದೆ. ಈ ಸಮಯದಲ್ಲಿ ಬೇರೆ ದೇಶದಲ್ಲಿ ಯುದ್ಧದ ಸಾಧ್ಯತೆ ಇರುತ್ತದೆ. ಪ್ರಸ್ತುತ ರಷ್ಯಾ ಮತ್ತು ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಭಾರತದ ಯಾವುದೇ ನೆರೆಯ ರಾಷ್ಟ್ರದೊಂದಿಗೆ ಸಂಘರ್ಷ ನಡೆಯಬಹುದು ಎಂದು ನಂಬಲಾಗಿದೆ. ಪ್ರಮುಖ ಭಯೋತ್ಪಾದಕ ಘಟನೆಯೂ ಸಂಭವಿಸಬಹುದು ಎನ್ನಲಾಗುತ್ತಿದೆ.





Read More