PHOTOS

ಫ್ರೆಂಚ್ ಫ್ರೈಸ್ ಪ್ರಿಯರೇ ಎಚ್ಚರ! ನೀವು ಈ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಬಹುದು!

French Fries side effects: ತಿನ್ನಲು ಬಲು ರುಚಿಕರವಾದ ಫ್ರೆಂಚ್ ಫ್ರೈಸ್ ಸಣ್ಣ ಮಕ್ಕಳಿಂದ ಹಿಡಿದು ದೊಡ್...

Advertisement
1/7
ಫ್ರೆಂಚ್ ಫ್ರೈಸ್
ಫ್ರೆಂಚ್ ಫ್ರೈಸ್

ನೀವು ಫ್ರೆಂಚ್ ಫ್ರೈಸ್ ಪ್ರಿಯರೇ! ಹಾಗಂತ ಅತಿಯಾಗಿ ಫ್ರೆಂಚ್ ಫ್ರೈಸ್ ಸೇವಿಸುವ ಮೊದಲು ಎಚ್ಚರ ಎಚ್ಚರ! ಫ್ರೆಂಚ್ ಫ್ರೈಸ್ ನಲ್ಲಿ ಸೋಡಿಯಂ, ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಅಧಿಕವಾಗಿರುವುದರಿಂದ ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರ ಅತಿಯಾದ ಸೇವನೆಯಿಂದ ಆರೋಗ್ಯಕ್ಕಾಗುವ ತೊಂದರೆಗಳೆಂದರೆ... 

2/7
ಸ್ಟ್ರೋಕ್ ಅಪಾಯ
ಸ್ಟ್ರೋಕ್ ಅಪಾಯ

ಫ್ರೆಂಚ್ ಫ್ರೈಸ್ ಅಧಿಕ ಸೋಡಿಯಂ ಹೊಂದಿರುತ್ತದೆ. ಇದು ದೀರ್ಘಕಾಲದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುವ ಮೂಲಕ  ಹೃದಯರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.

3/7
ತೂಕ ಹೆಚ್ಚಳ
ತೂಕ ಹೆಚ್ಚಳ

ನಿಯಮಿತವಾಗಿ ಫ್ರೆಂಚ್ ಫ್ರೈಸ್ ಸೇವಿಸುವುದರಿಂದ ಇದರಲ್ಲಿರುವ ಹೆಚ್ಚಿನ ಕ್ಯಾಲೋರಿಗಳು ದೇಹದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. 

4/7
ಜಠರಗರುಳಿನ ಸಮಸ್ಯೆ
ಜಠರಗರುಳಿನ ಸಮಸ್ಯೆ

ಅತಿಯಾದ ಫ್ರೆಂಚ್ ಫ್ರೈಸ್ ಸೇವನೆಯು ಜಠರಗರುಳಿನ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. 

5/7
ಅಧಿಕ ಕೊಲೆಸ್ಟ್ರಾಲ್ ಅಪಾಯ
ಅಧಿಕ ಕೊಲೆಸ್ಟ್ರಾಲ್ ಅಪಾಯ

ಫ್ರೆಂಚ್ ಫ್ರೈಸ್ ನಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೇರಳವಾಗಿರುತ್ತದೆ. ಅಧಿಕ-ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯು ಹೆಚ್ಚಿದ ಎಲ್‌ಡಿ‌ಎಲ್ (ಅಥವಾ ಕೆಟ್ಟ) ಕೊಲೆಸ್ಟ್ರಾಲ್‌ನೊಂದಿಗೆ ಸಂಬಂಧಿಸಿದೆ. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. 

6/7
ಟೈಪ್ 2 ಮಧುಮೇಹದ ಅಪಾಯ
ಟೈಪ್ 2 ಮಧುಮೇಹದ ಅಪಾಯ

ವಾರದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಫ್ರೆಂಚ್ ಫ್ರೈಸ್ ಸೇವಿಸುವ ಅಭ್ಯಾಸ ಹೊಂದಿರುವವವರಲ್ಲಿ ಟೈಪ್ 2 ಮಧುಮೇಹದ ಅಪಾಯ ಹೆಚ್ಚು ಎಂದು ಹೇಳಲಾಗುತ್ತದೆ. 

7/7
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More