PHOTOS

ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆಯೇ ಸೇವಿಸಿ !ಹೊಟ್ಟೆಯ ಹಠಮಾರಿ ಕೊಬ್ಬು ಕರಗಿ ಸ್ಲಿಮ್ ಆಗುವುದು ಗ್ಯಾರಂಟಿ

್ಜು ಪ್ರಪಂಚದ ಅನೇಕ ಜನರನ್ನು ಕಾಡುವ ಸಮಸ್ಯೆಯಾಗಿದೆ. ಅದು ಕೂಡಾ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಸೇರಿಕೊಂಡರ...

Advertisement
1/8
ಫ್ಯಾಟ್ ಬರ್ನ್ ಗೆ ಸಹಕಾರಿ
ಫ್ಯಾಟ್ ಬರ್ನ್ ಗೆ ಸಹಕಾರಿ

ಸೌತೆಕಾಯಿಯ ಸೇವನೆಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ ಮತ್ತು ಕ್ಯಾಲೋರಿಗಳು ತುಂಬಾ ಕಡಿಮೆ. ಆದ್ದರಿಂದ ಇದು ತೂಕ ನಷ್ಟಕ್ಕೆ ತುಂಬಾ ಸಹಾಯ ಮಾಡುತ್ತದೆ.

2/8
ಈ ಹೊತ್ತಿನಲ್ಲಿ ಸೇವಿಸಿ
ಈ ಹೊತ್ತಿನಲ್ಲಿ ಸೇವಿಸಿ

ಸೌತೆಕಾಯಿಯನ್ನು ರಾತ್ರಿ ಊಟವಾದ ಬಳಿಕ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.ಒಂದು ತಿಂಗಳ ಕಾಲ ನಿತ್ಯ ರಾತ್ರಿ ಸಮಯದಲ್ಲಿ ಸೌತೆಕಾಯಿ ಸೇವಿಸಿದರೆ ದೇಹ ತೂಕ ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. 

3/8
ಸಲಾಡ್
ಸಲಾಡ್

ಸೌತೆಕಾಯಿಯನ್ನು ಸಿಪ್ಪೆ ಸುಲಿದು ಟೊಮೆಟೊ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಉಪ್ಪು,ಕಾಳುಮೆಣಸು ಮತ್ತು ನಿಂಬೆ ರಸವನ್ನು ಬೆರೆಸಿ ಸಲಾಡ್ ರೀತಿಯಲ್ಲಿ ಸೇವಿಸಿದರೆ ರುಚಿಕರವಾಗಿಯೂ ಇರುತ್ತದೆ ಜೊತೆಗೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.

4/8
ಮೊಸರಿನ ಜೊತೆ
ಮೊಸರಿನ ಜೊತೆ

ಸೌತೆಕಾಯಿಯನ್ನು ಸಿಪ್ಪೆ ಸಮೇತ ತುರಿದುಕೊಂಡು ಮೊಸರಿನಲ್ಲಿ ಕಲಸಿ ಉಪ್ಪು, ಜೀರಿಗೆ ಪುಡಿ,ಕಾಳುಮೆಣಸಿನ ಪುಡಿ,ಕೊತ್ತಂಬರಿ ಪುಡಿ ಹಾಕಿ  ಸೇವಿಸಿದರೆ ದೇಹವನ್ನು ತಂಪಾಗಿಸುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.  

5/8
ಸಂಜೆ ಹೀಗೆ ತಿನ್ನಿ
ಸಂಜೆ ಹೀಗೆ ತಿನ್ನಿ

ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ಮೊಸರಿನಲ್ಲಿ ಅದ್ದಿ ಸಂಜೆಯ ಕೆಲಸದ ತಿಂಡಿಯಾಗಿ ಸೇವಿಸಿ.ಇದನ್ನು ಸೇವಿಸಿದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ.  

6/8
ಸ್ಮೂಥಿ ರೂಪದಲ್ಲಿ
ಸ್ಮೂಥಿ ರೂಪದಲ್ಲಿ

ಸೌತೆಕಾಯಿಯನ್ನು ಕತ್ತರಿಸಿ ಮತ್ತು ಬಾಳೆಹಣ್ಣು,ಪಾಲಕ್ ಮತ್ತು ಮೊಸರು ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ.ಬೇಕಾದರೆ ಇದಕ್ಕೆ ಸ್ವಲ್ಪ ತೆಂಗಿನಕಾಯಿಯನ್ನೂ ಸೇರಿಸಬಹುದು.ಈ ಸ್ಮೂಥಿ ದೇಹದಲ್ಲಿರುವ ಬೇಡದ ಕೊಬ್ಬನ್ನು ಕಡಿಮೆ ಮಾಡುತ್ತದೆ.  

7/8
ಡಿಟಾಕ್ಸ್ ನೀರು
ಡಿಟಾಕ್ಸ್  ನೀರು

ಡಿಟಾಕ್ಸ್ ನೀರನ್ನು ತಯಾರಿಸಲು,ಸೌತೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಅದಕ್ಕೆ ಪುದೀನಾ,ನಿಂಬೆ ರಸ ಮತ್ತು ಶುಂಠಿ ಸೇರಿಸಿ.ಸ್ವಲ್ಪ ಹೊತ್ತು ಕುದಿಸಿ ನಂತರ ಕುಡಿಯಿರಿ.ಎಲ್ಲಾ ಪದಾರ್ಥಗಳ ರಸವನ್ನು ನೀರು ಹೀರಿಕೊಳ್ಳುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

8/8
ತೂಕ ಇಳಿಕೆಗೆ ಮನೆ ಮದ್ದು
ತೂಕ ಇಳಿಕೆಗೆ ಮನೆ ಮದ್ದು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.   





Read More