PHOTOS

Credit Card Rules: ಕ್ರೆಡಿಟ್ ಕಾರ್ಡ್‌ನ ಬದಲಾಗಿರುವ ಈ ನಿಯಮಗಳ ಬಗ್ಗೆ ತಿಳಿದಿದೆಯೇ?

Credit Card Rules: ಪ್ರಸ್ತುತ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ. ಈ ಮಧ್ಯೆ ಪ್ರಮುಖ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಿಗೆ ಸಂ...

Advertisement
1/5
ಕ್ರೆಡಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್

ಕಳೆದ ಕೆಲವು ವರ್ಷಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ದೇಶದ ಪ್ರಮುಖ ಖಾಸಗಿ ಮತ್ತು ಸಾರ್ವಜನಿಕ ಕ್ರೆಡಿಟ್ ಕಾರ್ಡ್ ನೀಡುವ ಬ್ಯಾಂಕ್‌ಗಳು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿವೆ.  ಆ ನಿಮಯಗಳು ಯಾವುವು ಎಂಬುದರ ಬಗ್ಗೆ ತಿಳಿಯೋಣ... 

2/5
ಕ್ರೆಡಿಟ್ ಕಾರ್ಡ್ ಸಂಬಂಧಿಸಿದಂತೆ ಆಕ್ಸಿಸ್ ಬ್ಯಾಂಕ್ ನಿಯಮ
 ಕ್ರೆಡಿಟ್ ಕಾರ್ಡ್ ಸಂಬಂಧಿಸಿದಂತೆ ಆಕ್ಸಿಸ್ ಬ್ಯಾಂಕ್ ನಿಯಮ

ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಈಗ ಮೊದಲಿಗಿಂತ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗಬಹುದು. ಹೊಸ ನಿಯಮಗಳ ಪ್ರಕಾರ, ಪ್ರತಿ ಶುಲ್ಕ ಪಾವತಿಗೆ 1% ಶುಲ್ಕ ವಿಧಿಸಲಾಗುತ್ತದೆ. ಇದರ ಹೊರತಾಗಿ, ನೀವು ವಿದೇಶದಲ್ಲಿ ಭಾರತೀಯ ಕರೆನ್ಸಿಯನ್ನು ಬಳಸಿಕೊಂಡು ಯಾವುದೇ ರೀತಿಯ ವಹಿವಾಟು ಮಾಡಿದರೆ ಅಥವಾ ವಿದೇಶದಲ್ಲಿ ನೋಂದಾಯಿಸಲಾದ ಭಾರತೀಯ ಅಂಗಡಿಯವರಿಗೆ ಪಾವತಿ ಮಾಡಿದರೆ, ನೀವು 1% ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ನಿಯಮವು ಇಂದಿನಿಂದ ಅಂದರೆ ಮಾರ್ಚ್ 5, 2024 ರಿಂದ ಅನ್ವಯವಾಗುತ್ತದೆ.

3/5
ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್
ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್

ನೀವು ಎಸ್‌ಬಿ‌ಐ ಕ್ರೆಡಿಟ್ ಕಾರ್ಡ್‌ನಲ್ಲಿ ಕನಿಷ್ಠ ಪಾವತಿಯ ಲೆಕ್ಕಾಚಾರ ಬದಲಾಗಿದೆ. ಇದರನ್ವಯ ಇದುವರೆಗೆ ಕನಿಷ್ಠ ಪಾವತಿಯನ್ನು ಒಟ್ಟು GST, EMI ಮೊತ್ತ, ನೀವು ಮಾಡಿದ ಎಲ್ಲಾ ಶುಲ್ಕಗಳು ಮತ್ತು ವೆಚ್ಚಗಳ 100% ಮತ್ತು ಮುಂಗಡದ 5% ಎಂದು ಲೆಕ್ಕ ಹಾಕಲಾಗುತ್ತಿತ್ತು. ಆದರೆ ಅದರ ನಿಯಮಗಳು ಮಾರ್ಚ್ 15 ರಿಂದ ಬದಲಾಗಲಿವೆ. 

4/5
ಐ‌ಸಿ‌ಐ‌ಸಿ‌ಐ ಕ್ರೆಡಿಟ್ ಕಾರ್ಡ್
 ಐ‌ಸಿ‌ಐ‌ಸಿ‌ಐ ಕ್ರೆಡಿಟ್ ಕಾರ್ಡ್

ಐ‌ಸಿ‌ಐ‌ಸಿ‌ಐ ಕ್ರೆಡಿಟ್ ಕಾರ್ಡ್‌ನಲ್ಲಿ ಏರ್ಪೋರ್ಟ್  ಲಾಂಜ್ ಪ್ರವೇಶದ ನಿಯಮಗಳು ಏಪ್ರಿಲ್ 1, 2024 ರಿಂದ  ಬದಲಾಗಲಿದೆ. ಈ ನಿಯಮದ ಪ್ರಕಾರ, ನೀವು ಹಿಂದಿನ ತ್ರೈಮಾಸಿಕದಲ್ಲಿ (ಜನವರಿ-ಫೆಬ್ರವರಿ-ಮಾರ್ಚ್ 2024) ರೂ. 35,000 ಖರ್ಚು ಮಾಡಿದ್ದರೆ, ಮುಂದಿನ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ-ಜೂನ್ 2024) ನೀವು ಒಮ್ಮೆ ಉಚಿತ ಲೌಂಜ್ ಅನ್ನು ಬಳಸಬಹುದು. ಇದರರ್ಥ ನೀವು ಏಪ್ರಿಲ್‌ನಿಂದ ಜೂನ್ 2024 ರವರೆಗೆ ಏರ್‌ಪೋರ್ಟ್ ಲಾಂಜ್‌ಗೆ ಉಚಿತ ಪ್ರವೇಶವನ್ನು ಬಯಸಿದರೆ, ನಂತರ ನೀವು ಜನವರಿಯಿಂದ ಮಾರ್ಚ್ 2024 ರ ನಡುವೆ ಕಾರ್ಡ್‌ನಲ್ಲಿ ಕನಿಷ್ಠ 35,000 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಗಮನಾರ್ಹವಾಗಿ, ಈ ನಿಯಮಾವು ಪ್ರತಿ ತ್ರೈಮಾಸಿಕದ ಆಧಾರದ ಮೇಲೆ ಅನ್ವಯವಾಗುತ್ತದೆ. 

5/5
ಎಚ್‌ಡಿ‌ಎಫ್‌ಸಿ ಕ್ರೆಡಿಟ್ ಕಾರ್ಡ್ ನಿಯಮ
ಎಚ್‌ಡಿ‌ಎಫ್‌ಸಿ ಕ್ರೆಡಿಟ್ ಕಾರ್ಡ್ ನಿಯಮ

ಎಚ್‌ಡಿ‌ಎಫ್‌ಸಿ ಬ್ಯಾಂಕ್ ಸಹ ರೆಗಾಲಿಯಾ ಮತ್ತು ಮಿಲೇನಿಯಾ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳನ್ನು ಬದಲಾಯಿಸಿದೆ. ರೆಗಾಲಿಯಾ ಕಾರ್ಡ್‌ನಲ್ಲಿ ಲಾಂಜ್ ಪ್ರವೇಶ ನಿಯಮಗಳನ್ನು ಡಿಸೆಂಬರ್ 1, 2023 ರಿಂದ ಜಾರಿಗೆ ಬರುವಂತೆ ಬದಲಾಯಿಸಲಾಗಿದೆ. ಹೊಸ ನಿಯಮಗಳ ಪ್ರಕಾರ, ಲೌಂಜ್ ಪ್ರವೇಶವು ಕ್ರೆಡಿಟ್ ಕಾರ್ಡ್ ವೆಚ್ಚವನ್ನು ಆಧರಿಸಿರುತ್ತದೆ. ಇದರ ಪ್ರಕಾರ, ಪ್ರತಿ ಕ್ಯಾಲೆಂಡರ್ ತ್ರೈಮಾಸಿಕದಲ್ಲಿ ನೀವು 1 ಲಕ್ಷ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡಿದರೆ  ಎರಡು ಲೌಂಜ್ ಪ್ರವೇಶ ವೋಚರ್‌ಗಳನ್ನು ಪಡೆಯುತ್ತೀರಿ. ಅಂತೆಯೇ, ಎಚ್‌ಡಿ‌ಎಫ್‌ಸಿ ಮಿಲೇನಿಯಾ ಕಾರ್ಡ್‌ನೊಂದಿಗೆ ಪ್ರತಿ ತ್ರೈಮಾಸಿಕದಲ್ಲಿ  1 ಲಕ್ಷ  ರೂ. ಖರ್ಚು ಮಾಡಿದರೆ, ನೀವು ಒಂದು ಲಾಂಜ್ ಪ್ರವೇಶವನ್ನು ಪಡೆಯಬಹುದಾಗಿದೆ. 





Read More