PHOTOS

ಮುಂಜಾನೆ ಈ 5 ಆಹಾರಗಳ ಸೇವನೆಯಿಂದ ದಿನವಿಡೀ ಕಾಡುತ್ತೆ ಆಯಾಸ

Health Tips: ಅನಾರೋಗ್ಯಕರ ಆಹಾರ ಪದ್ಧತಿಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ...

Advertisement
1/6
ಆರೋಗ್ಯ
ಆರೋಗ್ಯ

ದೈಹಿಕ ಆರೋಗ್ಯಕ್ಕೆ ನಮ್ಮ ಆಹಾರಪದ್ಧತಿ ಬಗ್ಗೆ ನಿಗಾವಹಿಸುವುದು ಬಹಳ ಮುಖ್ಯ. ತಪ್ಪಾದ ಆಹಾರ ಪದ್ದತಿಯು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಮುಂಜಾನೆ ಕೆಲವು ಆಹಾರಗಳ ಸೇವನೆಯು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. 

2/6
ಕಚ್ಚಾ ತರಕಾರಿಗಳು
ಕಚ್ಚಾ ತರಕಾರಿಗಳು

ಕಚ್ಚಾ ತರಕಾರಿಗಳು:  ಹಸಿ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕಚ್ಚಾ ತರಕಾರಿಗಳ ಸೇವನೆ ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. 

3/6
ಜ್ಯೂಸ್
ಜ್ಯೂಸ್

ಜ್ಯೂಸ್:  ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜ್ಯೂಸ್ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ನಿತ್ಯ ಖಾಲಿ ಜ್ಯೂಸ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಜ್ಯೂಸ್ ನಲ್ಲಿರುವ ಸಕ್ಕರೆಯು ಯಕೃತ್ತಿನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. 

4/6
ಟೀ/ಕಾಫಿ
ಟೀ/ಕಾಫಿ

ಟೀ/ ಕಾಫಿ:  ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಟೀ ಅಥವಾ ಕಾಫಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. 

5/6
ಮೊಸರು
ಮೊಸರು

ಮೊಸರು:  ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಕಂಡು ಬರುತ್ತದೆ. ಇದೂ ಕೂಡ ಅಸಿಡಿಟಿಗೆ ಕಾರಣವಾಗುತ್ತದೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಸರನ್ನು ತಿನ್ನಬಾರದು. 

6/6
ಮಸಾಲೆ ಆಹಾರ
ಮಸಾಲೆ ಆಹಾರ

ಮಸಾಲೆ ಆಹಾರ:  ಬೆಳಿಗ್ಗೆ ಸಮಯದಲ್ಲಿ ಮಸಾಲೆಯುಕ್ತ ಆಹಾರಗಳನ್ನು ಸೇವಿಸಬಾರದು. ಇದೂ ಸಹ ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸುತ್ತದೆ.    ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More