PHOTOS

ಈ ರುಚಿಕರ ತರಕಾರಿಯನ್ನು ಸೇವಿಸಿದರೆ ಶಾಶ್ವತವಾಗಿ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್ ! ನಿಮಗಿಷ್ಟ ಬಂದಂತೆ ತಿನ್ನಬಹುದು !

ar: ಈ ಹಸಿರು ತರಕಾರಿಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಆದರೆ ಇದನ್ನು ಆಹಾರದಲ್ಲಿ ಹೇಗೆ ಸೇರಿಸ...

Advertisement
1/7
ಮನೆಮದ್ದು
 ಮನೆಮದ್ದು

ಮಧುಮೇಹ ಇದ್ದಾದ ಔಷಧಿಗಳನ್ನು ತಪ್ಪದೆ ತೆಗೆದುಕೊಳಬೇಕು, ಪಥ್ಯ ಮಾಡಬೇಕು ಎಂದೆಲ್ಲಾ ಹೇಳುತ್ತಾರೆ.ಆದರೆ ಕೆಲವು ಮನೆಮದ್ದುಗಳನ್ನು ಮಾಡುವ ಮೂಲಕ ಈ ಕಾಯಿಲೆಯನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.   

2/7
ತೊಂಡೆಕಾಯಿ
ತೊಂಡೆಕಾಯಿ

ನಾವಿಲ್ಲಿ ತೊಂಡೆಕಾಯಿ ಬಗ್ಗೆ ಹೇಳುತ್ತಿದ್ದೇವೆ.ತೊಂಡೆಕಾಯಿ ನೋಡುವುದಕ್ಕೆ ಪುಟ್ಟದಾಗಿ ಕಂಡರೂ ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಸಿ, ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ನಾರಿನಂಶದಂತಹ ಗುಣಗಳು ಹೇರಳವಾಗಿ ಕಂಡುಬರುತ್ತವೆ.   

3/7
ಬ್ಲಡ್ ಶುಗರ್ ನಿಯಂತ್ರಿಸಲು
ಬ್ಲಡ್ ಶುಗರ್ ನಿಯಂತ್ರಿಸಲು

ತೊಂಡೆಕಾಯಿ  ಕಡಿಮೆ ಮಟ್ಟದ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರಿವ ತರಕಾರಿಯಾಗಿದೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4/7
ತಿನ್ನುವ ಬಗೆ ಹೇಗೆ
ತಿನ್ನುವ ಬಗೆ ಹೇಗೆ

ಇನ್ನು ಬ್ಲಡ್ ಶುಗರ್ ನಿಯಂತ್ರಣ ಮಾಡುವ ಸಲುವಾಗಿ ಈ ತರಕಾರಿಯನ್ನು ತಿನ್ನಲು ವಿಶೇಷ ವಿಧಾನ ಎಂದೇನಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ಈ ತರಕಾರಿಯನ್ನು ಮಡಿ ಸೇವಿಸಬಹುದು. ಆದರೆ ಎಣ್ಣೆ ಮತ್ತು ಮಸಾಲೆಗಳನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿದರೆ ಒಳ್ಳೆಯದು. 

5/7
ಜೀರ್ಣಕ್ರಿಯೆಗೆ
ಜೀರ್ಣಕ್ರಿಯೆಗೆ

ತೊಂಡೆಕಾಯಿ ಸೇವನೆಯಿಂದ ಜೀರ್ಣಕಾರಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇದರಲ್ಲಿ ಹೇರಳವಾದ ಫೈಬರ್ ಅಂಶವಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.

6/7
ಬೊಜ್ಜು ಕಡಿಮೆ ಮಾಡುತ್ತದೆ
ಬೊಜ್ಜು ಕಡಿಮೆ ಮಾಡುತ್ತದೆ

ಬೊಜ್ಜು ಕಡಿಮೆ ಮಾಡಲು ತೊಂಡೆಕಾಯಿ ಸಹಕಾರಿ. ಇದು ಕಡಿಮೆ ಕ್ಯಾಲೊರಿ ಹೊಂದಿರುವ ತರಕಾರಿ. ಹಾಗಾಗಿ ಬೊಜ್ಜು ನಿಯಂತ್ರಣದಲ್ಲಿ ಇಡಲು ಇದು ಸಹಾಯ ಮಾಡುತ್ತದೆ. 

7/7
ಮಧುಮೇಹಕ್ಕೆ ಮನೆ ಮದ್ದು
ಮಧುಮೇಹಕ್ಕೆ ಮನೆ ಮದ್ದು

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ





Read More