PHOTOS

Coffee Side Effects: ಅತಿಯಾದ ಕಾಫಿ ಸೇವನೆಯಿಂದ ಉಂಟಾಗುವ 5 ಅಡ್ಡಪರಿಣಾಮಗಳಿವು

Coffee Side Effects: ನಮ್ಮಲ್ಲಿ ಬಹುತೇಕ ಜನರಿಗೆ ಕಾಫಿ ಎಂದರೆ ಬಲು ಪ್ರೀತಿ. ಕಾಫಿ ಕುಡಿಯುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ...

Advertisement
1/6
ಕಾಫಿ
ಕಾಫಿ

ಕೆಲವರಿಗೆ ಕಾಫಿ ಯಾವುದೇ ರೀತಿಯ ಎನರ್ಜಿ ಡ್ರಿಂಕ್ ಗಿಂತಲೂ ಕಡಿಮೆಯಿಲ್ಲ. ಕೆಲವರಿಗೆ ತಲೆನೋವಿದ್ದಾಗ ಕಾಫಿ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ. ಇನ್ನೂ ಕೆಲವರಿಗೆ ಕಾಫಿ ಸೇವನೆ ಒತ್ತಡವನ್ನು ನಿವಾರಿಸುತ್ತದೆ. ಆದರೆ, ಅತಿಯಾದ ಕಾಫಿ ಸೇವನೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ನಿಮಗೆ ತಿಳಿದಿದೆಯೇ? ಕಾಫಿ ಕುಡಿಯುವುದರಿಂದ ಆರೋಗ್ಯದ ಮೇಲೆ ಉಂಟಾಗಬಹುದಾಗ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ. 

2/6
ಉಸಿರಾಟದ ತೊಂದರೆ
ಉಸಿರಾಟದ ತೊಂದರೆ

ಉಸಿರಾಟದ ತೊಂದರೆ:  ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಸೇವಿಸಿದರೆ, ನೀವು ಉಸಿರಾಟದ ತೊಂದರೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಲವು ಬಾರಿ ಅತಿಯಾದ ಕಾಫಿ ಸೇವನೆಯು ವಾಕರಿಕೆ, ವಾಂತಿಯಂತಹ ಸಮಸ್ಯೆಗಳು ಕೂಡ ನಿಮ್ಮನ್ನು ಬಾಧಿಸಬಹುದು. 

3/6
ತೀವ್ರ ರಕ್ತದೊತ್ತಡ
ತೀವ್ರ ರಕ್ತದೊತ್ತಡ

ತೀವ್ರ ರಕ್ತದೊತ್ತಡ:  ಆರೋಗ್ಯ ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡ ರೋಗಿಗಳಿಗೆ ಕಾಫಿ ಸೇವನೆ ಒಳ್ಳೆಯದಲ್ಲ. ಬಿಪಿ ಸಮಸ್ಯೆ ಇರುವವರು ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಇದು ರಕ್ತದೊತ್ತಡವನ್ನು ಹೆಚ್ಚಿಸಬಹುದು.  

4/6
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು:  ಕೆಫೀನ್ ಸೇವನೆಯು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಹಾರ್ಮೋನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು.   

5/6
ತಲೆತಿರುಗುವಿಕೆ
ತಲೆತಿರುಗುವಿಕೆ

ತಲೆತಿರುಗುವಿಕೆ:  ತುಂಬಾ ದಣಿದಿರುವಾಗ ಕಾಫಿ ಕುಡಿಯುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದನ್ನು ಅತಿಯಾಗಿ ಸೇವಿಸುವುದರಿಂದ ನೀವು ಆಲಸ್ಯ, ಆಯಾಸ ಮತ್ತು ಸೋಮಾರಿತನದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ಅಷ್ಟೇ ಅಲ್ಲ, ಇದು  ತಲೆತಿರುಗುವಿಕೆಯಂತಹ ಸಮಸ್ಯೆಗಳನ್ನು ಸಹ ಹೆಚ್ಚಿಸಬಹುದು. 

6/6
ನಿದ್ರಾಹೀನತೆ ಸಮಸ್ಯೆ
ನಿದ್ರಾಹೀನತೆ ಸಮಸ್ಯೆ

ನಿದ್ರಾಹೀನತೆ ಸಮಸ್ಯೆ:  ನಮ್ಮಲ್ಲಿ ಕೆಲವರು ರಾತ್ರಿ ಮಲಗುವ ಮುನ್ನ ಕಾಫಿ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ,  ಮಿತಿಮೀರಿದ ಪ್ರಮಾಣದಲ್ಲಿ ಕಾಫಿ ಕುಡಿಯುವುದರಿಂದ ಇದು ನಿದ್ರೆಗೆ ಅಡ್ಡಪರಿಣಾಮ ಬೀರುತ್ತದೆ. ಕೆಲವೊಮ್ಮೆ ಇದು ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More