PHOTOS

ಖಾಲಿ ಹೊಟ್ಟೆಗೆ ತೆಂಗಿನೆಣ್ಣೆ ಕುಡಿದರೆ ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ.. ಈ ಕಾಯಿಲೆಯಂತೂ ಬಳಿಯೂ ಸುಳಿಯದು!

coconut oil health benefits: ತೆಂಗಿನ ಎಣ್ಣೆ ಕೂದಲಿಗೆ ಮಾತ್ರವಲ್ಲ ಆರೋಗ್ಯಕ್ಕೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ದಕ್ಷಿಣ ಭಾರತದಲ್ಲಿ ತೆ...

Advertisement
1/7
ತೆಂಗಿನೆಣ್ಣೆ ಸೇವನೆಯ ಪ್ರಯೋಜನ
ತೆಂಗಿನೆಣ್ಣೆ ಸೇವನೆಯ ಪ್ರಯೋಜನ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಕೊಬ್ಬರಿ ಎಣ್ಣೆಯನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವುದಿಲ್ಲ. ಜೊತೆಗೆ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಆಯುರ್ವೇದದ ಪ್ರಕಾರ ತೆಂಗಿನ ಎಣ್ಣೆಯಲ್ಲಿ ಚಯಾಪಚಯವನ್ನು ವೇಗಗೊಳಿಸುವ ಶಕ್ತಿಯಿದೆ.  

2/7
ತೆಂಗಿನೆಣ್ಣೆ ಸೇವನೆಯ ಪ್ರಯೋಜನ
ತೆಂಗಿನೆಣ್ಣೆ ಸೇವನೆಯ ಪ್ರಯೋಜನ

ತೆಂಗಿನ ಎಣ್ಣೆಯಲ್ಲಿರುವ ಅಂಶಗಳು ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಮಚ ತೆಂಗಿನೆಣ್ಣೆ ಮತ್ತು ಅರ್ಧ ನಿಂಬೆಹಣ್ಣಿನ ರಸವನ್ನು ಸೇರಿಸಿ ಕುಡಿಯಿರಿ.

3/7
ತೆಂಗಿನೆಣ್ಣೆ ಸೇವನೆಯ ಪ್ರಯೋಜನ
ತೆಂಗಿನೆಣ್ಣೆ ಸೇವನೆಯ ಪ್ರಯೋಜನ

ಕೊಬ್ಬರಿ ಎಣ್ಣೆಯಲ್ಲಿ ಕ್ಯಾಪ್ರಿಕ್ ಆಸಿಡ್, ಲಾರಿಕ್ ಆಸಿಡ್, ಕ್ಯಾಪ್ರಿಲಿಕ್ ಆಮ್ಲ ಇವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಕಪ್ ಗ್ರೀನ್‌ ಟೀ ಜೊತೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಪ್ರತಿದಿನ ಕುಡಿಯಿರಿ.

4/7
ತೆಂಗಿನೆಣ್ಣೆ ಸೇವನೆಯ ಪ್ರಯೋಜನ
ತೆಂಗಿನೆಣ್ಣೆ ಸೇವನೆಯ ಪ್ರಯೋಜನ

ತೆಂಗಿನ ಎಣ್ಣೆಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಅಜೀರ್ಣಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ. ಇದರ ಸೇವನೆಯಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.

5/7
ತೆಂಗಿನೆಣ್ಣೆ ಸೇವನೆಯ ಪ್ರಯೋಜನ
ತೆಂಗಿನೆಣ್ಣೆ ಸೇವನೆಯ ಪ್ರಯೋಜನ

ತೆಂಗಿನೆಣ್ಣೆಯು ಟೈಪ್-2 ಮಧುಮೇಹದಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಇದು ಬ್ಲಡ್‌ ಶುಗರ್‌ ಕಂಟ್ರೋಲ್‌ ಮಾಡುತ್ತದೆ.  ಆಂಟಿಆಕ್ಸಿಡೆಂಟ್‌ಗಳು ತೆಂಗಿನ ಎಣ್ಣೆಯಲ್ಲಿ ಕಂಡುಬರುತ್ತವೆ. ಇದು ನಿಮ್ಮ ದೇಹದಲ್ಲಿನ ವಿಟಮಿನ್ ಡಿ ಕೊರತೆಯನ್ನು ಪೂರೈಸುತ್ತದೆ.

6/7
ತೆಂಗಿನೆಣ್ಣೆ ಸೇವನೆಯ ಪ್ರಯೋಜನ
ತೆಂಗಿನೆಣ್ಣೆ ಸೇವನೆಯ ಪ್ರಯೋಜನ

ತೆಂಗಿನ ಎಣ್ಣೆಯಲ್ಲಿರುವ ಗುಣಲಕ್ಷಣಗಳು ಹೊಟ್ಟೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮಲಬದ್ಧತೆ ಮತ್ತು ಆಸಿಡಿಟಿ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.   

7/7
ತೆಂಗಿನೆಣ್ಣೆ ಸೇವನೆಯ ಪ್ರಯೋಜನ
ತೆಂಗಿನೆಣ್ಣೆ ಸೇವನೆಯ ಪ್ರಯೋಜನ

(ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.)





Read More