PHOTOS

ಒಂದು ಸಿನಿಮಾ ಪಾತ್ರಕ್ಕಾಗಿ 28ನೇ ವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡ ಸ್ಟಾರ್‌ ನಟ..? ಈತನ ಸ್ಟೋರಿ ಕೇಳಿದ್ರೆ ನಿಮ್ಮ ಎದೆ ಜಲ್‌ ಅನ್ನುತ್ತೆ..!

ರುವ ವ್ಯಕ್ತಿಯನ್ನು ನೀಚು ನೋಡಿರ್ಲೇಬೇಕು ಅಲ್ವಾ. ಈ ಫೋಟೊದಲ್ಲಿ ಕಾಣಿಸುವಷ್ಟು ಈ ಪಾತ್ರ ಸಿಪಲ್‌ ಏನಲ್ಲ. ಕ್ರಿಸ್ಟೋಫರ್ ನೋಲನ್ ಅವರ ಚಿತ್ರ 'ದಿ ಡಾರ್ಕ್ ನೈಟ್' ಅತ...

Advertisement
1/5

ಈ ಪೋಟೊದಲ್ಲಿರುವ ವ್ಯಕ್ತಿಯನ್ನು ನೀಚು ನೋಡಿರ್ಲೇಬೇಕು ಅಲ್ವಾ. ಈ ಫೋಟೊದಲ್ಲಿ ಕಾಣಿಸುವಷ್ಟು ಈ ಪಾತ್ರ ಸಿಪಲ್‌ ಏನಲ್ಲ. ಕ್ರಿಸ್ಟೋಫರ್ ನೋಲನ್ ಅವರ ಚಿತ್ರ 'ದಿ ಡಾರ್ಕ್ ನೈಟ್' ಅತ್ಯುತ್ತಮ ಸೂಪರ್ ಹಿಟ್‌ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರವು ನೋಲನ್ ಅವರ ನಿರ್ದೇಶನಕ್ಕಾಗಿ ಮಾತ್ರವಲ್ಲದೆ ಜೋಕರ್‌ನ ಅದ್ಭುತ ನಟನೆಯನ್ನು ನಿರ್ವಹಿಸಿದ ನಟ ಹೀತ್ ಲೆಡ್ಜರ್ ಅವರ ಅಭಿನಯಕ್ಕು ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ಈ ಪಾತ್ರವನ್ನು ನಿರ್ವಹಿಸಿದ ಕೆಲವು ತಿಂಗಳ ನಂತರ ಹೀತ್ ನಿಧನರಾದರು.   

2/5

ಮೆಥೆಡ್ ಆಕ್ಟಿಂಗ್ ಅನ್ನು ಹೊಸ ಮಟ್ಟಕ್ಕೆ ಕೊಂಡೊಯ್ದ ಹೀತ್, ಈ ಪಾತ್ರಕ್ಕಾಗಿ ಲಂಡನ್‌ನ ಹೋಟೆಲ್ ಕೋಣೆಯಲ್ಲಿ ಒಂದು ತಿಂಗಳ ಕಾಲ ಬೀಗ ಹಾಕಿಕೊಂಡಿದ್ದರು. ಜೋಕರ್ ಪತ್ರ ಮಾರಣಾಂತಿಕ, ಕ್ರೂರ ಮತ್ತು ಅಪಾಯಕಾರಿ ಪಾತ್ರವಾಗಿತ್ತು. ಈ ಸಿನಿಮಾ ನೋಡಿದಾಗಲೆಲ್ಲಾ ಈ ಪಾತ್ರ ಪ್ರೇಕ್ಷಕರಲ್ಲಿ ಇಂದಿಗೂ ನಡುಕ ಹುಟ್ಟಿಸುತ್ತದೆ. ಹೀತ್ ಈ ಪಾತ್ರಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಈ ಪಾತ್ರದಲ್ಲಿ ಹೀತ್‌ ಲೆಡ್ಜರ್‌ ಎಷ್ಟು ಮುಳುಗಿದ್ದರು ಎಂದರೆ ಜೋಕರ್ ಪಾತ್ರವು ಅವರ ವೈಯಕಿಕ ಜೀವನದಲ್ಲಿ ವ್ಯಕ್ತಿತ್ವದ ಭಾಗವಾಗಿ ಹೋಯ್ತು.   

3/5

ಹೀತ್ ಅವರ ಮರಣದ ನಂತರ ಅವರ ತಂದೆ ಹೀತ್‌ ಅವರು ಬರೆದಿದ್ದ ಡೈರಿಯನ್ನು ಹಂಚಿಕೊಂಡಿದ್ದಾರೆ.  ಈ ಡೈರಿಯ ಕೊನೆಯಲ್ಲಿ ಬೈ-ಬೈ ಬರೆಯಲಾಗಿದ್ದು, ತಮ್ಮ ಸಾವಿನ ಸುಳಿವು ಹೀತ್‌ ಲೆಡ್ಜರ್‌ಗೆ ಮೊದಲೇ ಸಿಕ್ಕಿತ್ತು ಎನ್ನುವುದು ಅಚ್ಚರಿಯ ಸಂಗತಿ.   

4/5

ಜೋಕ‌ರ್ ಪಾತ್ರವು ನಟನ ಸಾವಿಗೆ ಕಾರಣ ಎಂದು ಹೇಳುವುದು ಸರಿಯಲ್ಲ, ಆದರೆ ಈ ಪಾತ್ರವು ಹೀತ್‌ ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಮತ್ತು ಎಲ್ಲೋ ಈ ಪಾತ್ರದ ನಕಾರಾತ್ಮಕ ಶಕ್ತಿಯು ಅವರನ್ನು ಈ ಹೆಜ್ಜೆ ಇಡಲು ಒತ್ತಾಯಿಸಿತು ಎಂಬುದು ನಿಜ. ದಿ ಡಾರ್ಕ್ ನೈಟ್ ಚಿತ್ರದ ಒಂದು ಡೈಲಾಗ್ ಇದೆ " ಒಂದೋ ನೀವು ಹೀರೋ ಆಗಿ ಸಾಯುತ್ತೀರಿ ಅಥವಾ ನೀವು ವಿಲನ್ ಆಗಿ ಸಾಯುತ್ತೀರಿ" ಎಂದು ಸಿನಿಮಾದಲ್ಲಿ ಜೋಕರ್‌ ಪಾತ್ರದಲ್ಲಿ ನಟಿಸಿದ ನಟ ಹೇಳುತ್ತಾರೆ.   

5/5

ಕೇವಲ 28 ನೇ ವಯಸ್ಸಿನಲ್ಲಿ ಜೋಕ‌ರ್ ಪಾತ್ರವನ್ನು ನಿರ್ವಹಿಸುವ ಮೂಲಕ, ಹೀತ್ ನಾಯಕನಾಗಿ ವಿದಾಯ ಹೇಳುತ್ತಾರೆ, ಮಾತ್ರವಲ್ಲದೆ ಜನರ ಹೃದಯದಲ್ಲಿ ಶಾಶ್ವತವಾಗಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸ್ಮರಣೀಯ ಪಾತ್ರಕ್ಕಾಗಿ ಹೀತ್ ಲೆಡ್ಜರ್ ಅತ್ಯುತ್ತಮ  ನಟನಿಗಾಗಿ ಆಸ್ಕರ್ ಪ್ರಶಸ್ತಿಯನ್ನು ಪಡೆಯುತ್ತಾರೆ. ಆದರೆ ಈ ವೇಳೆಗಾಗಲೇ ನಟ ಸಾವನ್ನಪ್ಪಿದ್ದ ಕಾರಣ ಆಸ್ಕರ್‌ ಪುರಸ್ಕಾರವನ್ನು ಹೀತ್‌ ಅವರ ಕುಟುಂಬದವರು ತೆಗೆದುಕೊಳ್ಳುತ್ತಾರೆ.   





Read More