PHOTOS

Budget Smartphone: ಇಲ್ಲಿವೆ ನೋಡಿ 10-15 ಸಾವಿರದೊಳಗಿನ ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳು…

ಮಾರುಕಟ್ಟೆಯಲ್ಲಿ ಸಾಕಷ್ಟು ಬಜೆಟ್ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಅವುಗಳು...

Advertisement
1/5
ಸ್ಯಾಮ್‌ಸಂಗ್ ಗ್ಯಾಲಕ್ಸಿ M 21 (2021)
ಸ್ಯಾಮ್‌ಸಂಗ್ ಗ್ಯಾಲಕ್ಸಿ M 21 (2021)

ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ M 21 (2021) ಬಜೆಟ್ ವಿಭಾಗದಲ್ಲಿ ಖರೀದಿದಾರರ ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಸಾಧನವು 6.4 ಇಂಚಿನ ಸ್ಯಾಮೊಲೆಡ್ ಇನ್ಫಿನಿಟಿ-ಯು(sAMOLED Infinity-U) ಡಿಸ್ ಪ್ಲೇ ಹೊಂದಿದೆ. ಆಂಡ್ರಾಯ್ಡ್ 11 ಆಧಾರಿತ One UI Core 3.1ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M21 ಪ್ರಸ್ತುತ ಆಕ್ಟಾ-ಕೋರ್ ಎಕ್ಸಿನೋಸ್ 9611 SoC ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು Mali-G72 MP3 GPU ಮತ್ತು 6GB LPDDR4x RAM ಅನ್ನು ಹೊಂದಿದೆ. 4GB RAM ಆವೃತ್ತಿಯ ಈ ಸ್ಮಾರ್ಟ್‌ಫೋನ್‌ ಪ್ರಸ್ತುತ 12,499 ರೂ.ಗೆ ಮಾರಾಟವಾಗುತ್ತಿದೆ.

2/5
ರಿಯಲ್‌ಮಿ ನಾರ್ಜೊ 20
ರಿಯಲ್‌ಮಿ ನಾರ್ಜೊ 20

ರಿಯಲ್‌ಮಿ ನಾರ್ಜೊ 20 ಬಜೆಟ್ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಕಳೆದ ವರ್ಷ ಬಿಡುಗಡೆಯಾದ ಈ ಸ್ಮಾರ್ಟ್‌ಫೋನ್ MediaTek Helio G85 processor ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 6000mAh ಮೆಗಾ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.   

ಈ ಸ್ಮಾರ್ಟ್‌ಫೋನ್‌ 48MP AI ಟ್ರಿಪಲ್ ಕ್ಯಾಮೆರಾವನ್ನು ಹೊಂದಿದೆ ಮತ್ತು 18W ತ್ವರಿತ ಚಾರ್ಜ್ ಗೆ ಬೆಂಬಲ ನೀಡುತ್ತದೆ. Realme Narzo 20’s 4GB+64 GB and 4GB+128GB ರೂಪಾಂತರಗಳು ಕ್ರಮವಾಗಿ 10,499 ರೂ. ಮತ್ತು 11,499 ರೂ.ಗೆ ಮಾರಾಟವಾಗುತ್ತಿವೆ.

3/5
Xiaomi Redmi 9 ಪವರ್
Xiaomi Redmi 9 ಪವರ್

Xiaomi Redmi 9 ಪವರ್ 6GB RAM ಮತ್ತು 128GB ಸಾಮರ್ಥ್ಯದೊಂದಿಗೆ ಬರುತ್ತದೆ. 12,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್‌ Adreno 610 GPU ಜೊತೆಗೆ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 662 ಪ್ರೊಸೆಸರ್ ಅನ್ನು ಹೊಂದಿದೆ. ಮೈಟಿ ಬ್ಲಾಕ್, ಬ್ಲೇಜಿಂಗ್ ಬ್ಲೂ, ಫಿಯರಿ ರೆಡ್ ಮತ್ತು ಎಲೆಕ್ಟ್ರಿಕ್ ಗ್ರೀನ್ ಎಂಬ 4 ಬಣ್ಣದ ಆಯ್ಕೆಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ.

4/5
ಮೋಟೋ G10 ಪವರ್
ಮೋಟೋ G10 ಪವರ್

ಮೋಟೋ G10 ಪವರ್ ಸ್ಮಾರ್ಟ್‌ಫೋನ್‌ 6.5 ಇಂಚಿನ ಎಚ್‌ಡಿ+ (720x1,600 ಪಿಕ್ಸೆಲ್‌ಗಳು) ಮ್ಯಾಕ್ಸ್ ವಿಷನ್ ಡಿಸ್‌ಪ್ಲೇಯನ್ನು 20:9 ಆಕಾರ ಅನುಪಾತದೊಂದಿಗೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 460 SoC ನಿಂದ ನಿಯಂತ್ರಿಸಲ್ಪಡುತ್ತದೆ. ಇದು 4GB RAM ನೊಂದಿಗೆ ಬರುತ್ತದೆ.

ಈ ಸಾಧನವು ಕ್ವಾಡ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. 48MP ಪ್ರಾಥಮಿಕ ಸೆನ್ಸರ್, 8MP ಸೆನ್ಸರ್ ಅಲ್ಟ್ರಾ-ವೈಡ್ ಆಂಗಲ್, 2MP ಸೆನ್ಸರ್ ಮ್ಯಾಕ್ರೋ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸರ್. ಈ ಸ್ಮಾರ್ಟ್‌ಫೋನ್‌ ಪ್ರಸ್ತುತ 10,499 ರೂ.ಗೆ ಮಾರಾಟವಾಗುತ್ತಿದೆ.

5/5
ಸ್ಯಾಮ್‌ಸಂಗ್ ಗ್ಯಾಲಕ್ಸಿ F41
ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಕಳೆದ ವರ್ಷ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ F41, 6.4 ಇಂಚಿನ ಪೂರ್ಣ ಎಚ್‌ಡಿ+ sAMOLED Infinity U ಡಿಸ್‌ಪ್ಲೇ ಹೊಂದಿದೆ. 64MP ಹಿಂಬದಿಯ ಕ್ಯಾಮೆರಾ ಮತ್ತು 6000mAh ಬ್ಯಾಟರಿಯೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್‌ ಫ್ಯೂಷನ್ ಬ್ಲಾಕ್, ಫ್ಯೂಷನ್ ಬ್ಲೂ ಮತ್ತು ಫ್ಯೂಷನ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.





Read More