PHOTOS

ಗ್ರಾಹಕರೇ ಎಚ್ಚರ! ಹಣ ವಿತ್ ಡ್ರಾ ಮಾಡುವ ಮೊದಲು ATM ಯಂತ್ರವನ್ನು ಈ ರೀತಿ ಪರಿಶೀಲಿಸಿ

            

...
Advertisement
1/4

ನವದೆಹಲಿ: ಎಟಿಎಂ ಯಂತ್ರವನ್ನು ಹಾಳು ಮಾಡುವ ಮೂಲಕ ವಂಚನೆ ಮಾಡುವ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದೆ. ವಂಚಕರು ಎಟಿಎಂ ಯಂತ್ರದಲ್ಲಿ ಹೆಚ್ಚುವರಿ ಸ್ಲಾಟ್ ಮತ್ತು ಕ್ಯಾಮೆರಾವನ್ನು ಇರಿಸಿ, ಕಾರ್ಡ್ ಸಂಖ್ಯೆ ಮತ್ತು ಎಟಿಎಂ ಪಿನ್ ಅನ್ನು ಪತ್ತೆಹಚ್ಚುತ್ತಾರೆ. ನಂತರ ನಿಮಿಷಗಳಲ್ಲಿ ಖಾತೆಯನ್ನು ಖಾಲಿ ಮಾಡುತ್ತಾರೆ. ಮಹಾರಾಷ್ಟ್ರದ ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದು  ಹ್ಯಾಕರ್‌ಗಳು ಎಟಿಎಂ ಯಂತ್ರವನ್ನು ಹೇಗೆ ಹಾಳುಮಾಡುತ್ತಾರೆ ಮತ್ತು ಜನರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಹೇಗೆ ಲೂಟಿ ಮಾಡುತ್ತಾರೆ ಎಂದು ವಿವರಿಸಿದ್ದಾರೆ.

2/4

ವಿಡಿಯೋದಲ್ಲಿ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳನ್ನು ಎಟಿಎಂ (ATM) ಯಂತ್ರದ ಮುಂದೆ ಕಾಣಬಹುದು. ಯಂತ್ರವನ್ನು ಹಾಳು ಮಾಡುವ ಮೂಲಕ ಹ್ಯಾಕರ್‌ಗಳು ನಿಮ್ಮ ಕಾರ್ಡ್ ಸಂಖ್ಯೆ ಮತ್ತು ಪಿನ್ ಕೋಡ್ ಅನ್ನು ಹೇಗೆ ಕದಿಯುತ್ತಾರೆ ಮತ್ತು ನಂತರ ನಿಮ್ಮ ಹಣ ಹೇಗೆ ಖಾಲಿಯಾಗುತ್ತದೆ ಎಂದವರು ವಿವರಿಸಿದ್ದಾರೆ.  

ಇದನ್ನೂ ಓದಿ: SBI ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ

3/4

ವಿಡಿಯೋದಲ್ಲಿ ತೋರಿಸಿರುವಂತೆ ಎಟಿಎಂ ಯಂತ್ರದ ಕಾರ್ಡ್ ಸ್ಲಾಟ್‌ನಲ್ಲಿ ಹ್ಯಾಕರ್‌ಗಳು ಹೆಚ್ಚುವರಿ ಸ್ಲಾಟ್‌ಗಳನ್ನು ಇಡುತ್ತಾರೆ, ಅದರಲ್ಲಿ ಕಾರ್ಡ್ ಸೇರಿಸಿದ ಕೂಡಲೇ ಕಾರ್ಡ್‌ನ ವಿವರಗಳನ್ನು ಕಳವು ಮಾಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದರೊಂದಿಗೆ ಯಂತ್ರದ ಕೀಪ್ಯಾಡ್‌ಗಿಂತ ಮೇಲಿರುವ ಜಾಗದಲ್ಲಿ ಕ್ಯಾಮೆರಾವನ್ನು ಇರಿಸಲಾಗುತ್ತದೆ ಮತ್ತು ಹಣವನ್ನು ಹಿಂಪಡೆಯಲು ನೀವು ಪಿನ್ ನಮೂದಿಸಿದ ತಕ್ಷಣ ಅದನ್ನು ಕ್ಯಾಮೆರಾದಲ್ಲಿ ದಾಖಲಿಸಲಾಗುತ್ತದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. 

 

Using ATM to withdraw cash....? Watch this ..! pic.twitter.com/CzSCovT9Cj

— Dayanand Kamble (@dayakamPR) November 23, 2020
4/4
ಹಣವನ್ನು ವಿತ್ ಡ್ರಾ ಮಾಡುವಾಗ ಯಂತ್ರವನ್ನು ಈ ರೀತಿ ಪರಿಶೀಲಿಸಿ:
ಹಣವನ್ನು ವಿತ್ ಡ್ರಾ ಮಾಡುವಾಗ ಯಂತ್ರವನ್ನು ಈ ರೀತಿ ಪರಿಶೀಲಿಸಿ:

ನೀವು ಹಣವನ್ನು ಹಿಂಪಡೆಯಲು ಎಟಿಎಂಗೆ ಹೋದಾಗಲೆಲ್ಲಾ ಯಂತ್ರವನ್ನು ಪರಿಶೀಲಿಸಿ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇಲ್ಲಿ ಯಾವುದೇ ಹೆಚ್ಚುವರಿ ಸ್ಲಾಟ್ ಇದೆಯೇ ಎಂದು ನೋಡಲು ಯಂತ್ರದ ಕಾರ್ಡ್ ಸ್ಲಾಟ್ ಅನ್ನು ಮೊದಲು ಪರಿಶೀಲಿಸಿ. ಇದರ ನಂತರ ಕೀಪ್ಯಾಡ್‌ನ ಮೇಲೆ ಯಾವುದೇ ಕ್ಯಾಮೆರಾವನ್ನು ಸ್ಥಾಪಿಸಲಾಗಿದೆಯೇ ಎಂದು ನೋಡಿ. ಬಳಿಕವಷ್ಟೇ ನಿಮ್ಮ ಕಾರ್ಡ್ ಅನ್ನು ಎಟಿಎಂ ಯಂತ್ರದಲ್ಲಿ ಬಳಸಿ ಎಂದು ಪೊಲೀಸ್ ಅಧಿಕಾರಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ATM ನಿಂದ ಹಣ ವಿಥ್ ಡ್ರಾ ಮಾಡುವಾಗ ಈ ಚಿಕ್ಕ ಎಚ್ಚರಿಕೆ ವಹಿಸಿ ಫ್ರಾಡ್ ನಿಂದ ತಪ್ಪಿಸಿಕೊಳ್ಳಿ





Read More