PHOTOS

50 ವರ್ಷಗಳ ಬಳಿಕ ಈ ರಾಶಿಗೆ ಕೂಡಿಬಂತು ರಾಜಯೋಗ: ಎಲ್ಲದರಲ್ಲೂ ಯಶಸ್ಸು ಸಿಗುವ ಕಾಲ! ಸಂಪತ್ತು, ಕೀರ್ತಿ, ಪ್ರತಿಷ್ಠೆ ಒಟ್ಟಾಗಿ ಲಭಿಸುವುದು ಖಚಿತ

Chaturgrahi yoga: ಪ್ರತಿಯೊಂದು ಗ್ರಹಗಳು ಸಹ ಕಾಲಕ್ಕೆ ಅನುಗುಣವಾಗಿ ತನ್ನ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ಈ ಸಂದರ್ಭಗಳಲ್ಲಿ ಶುಭ ಅಥ...

Advertisement
1/8
ಚತುರ್ಗ್ರಹಿ ಯೋಗ
ಚತುರ್ಗ್ರಹಿ ಯೋಗ

ಪ್ರತಿಯೊಂದು ಗ್ರಹಗಳು ಸಹ ಕಾಲಕ್ಕೆ ಅನುಗುಣವಾಗಿ ತನ್ನ ಸ್ಥಾನ ಬದಲಾವಣೆ ಮಾಡುತ್ತಿರುತ್ತವೆ. ಈ ಸಂದರ್ಭಗಳಲ್ಲಿ ಶುಭ ಅಥವಾ ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಇನ್ನು ಕೆಲವು ಗ್ರಹಗಳ ಅಪರೂಪದ ಸಂಯೋಜನೆಯಿಂದ ಆ ಯೋಗಗಳಲ್ಲಿ ಕೆಲವು ಹಲವು ವರ್ಷಗಳ ನಂತರ ರೂಪುಗೊಳ್ಳುತ್ತವೆ. ಅಂತಹ ಯೋಗಗಳ ಪರಿಣಾಮವು ಎಲ್ಲಾ ರಾಶಿಗಳಲ್ಲಿ ಕಂಡುಬರುತ್ತದೆ. ಈ ರೀತಿಯಾಗಿ ಆಗಸ್ಟ್ʼನಲ್ಲಿ ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗವು ರೂಪುಗೊಳ್ಳುತ್ತದೆ. ಈ ಯೋಗವು ಬುಧ, ಚಂದ್ರ, ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ರೂಪುಗೊಂಡಿದೆ.

2/8
ಚತುರ್ಗ್ರಹಿ ಯೋಗ
ಚತುರ್ಗ್ರಹಿ ಯೋಗ

ಆಗಸ್ಟ್‌ʼನಲ್ಲಿ ಸಿಂಹ ರಾಶಿಯಲ್ಲಿ ಬುಧ, ಚಂದ್ರ, ಶುಕ್ರ ಮತ್ತು ಸೂರ್ಯನ ಸಂಯೋಜನೆಯಿಂದ ಚತುರ್ಗ್ರಹ ಯೋಗವು ರೂಪುಗೊಳ್ಳುತ್ತದೆ. ಈ ಮಂಗಳಕರ ಯೋಗದ ಪ್ರಭಾವವು ಎಲ್ಲಾ ರಾಶಿಗಳಲ್ಲಿ ಕಂಡುಬಂದರೂ, ಕೆಲವು ರಾಶಿಗಳ ಜನರು ತುಂಬಾ ಅದೃಷ್ಟಶಾಲಿಯಾಗುತ್ತಾರೆ.

 

3/8
ಚತುರ್ಗ್ರಹಿ ಯೋಗ
ಚತುರ್ಗ್ರಹಿ ಯೋಗ

ಜುಲೈ 19 ರಂದು ಸಿಂಹ ರಾಶಿಗೆ ಪ್ರವೇಶಿಸಿರುವ ಬುಧ ಆಗಸ್ಟ್ 22 ರವರೆಗೆ ಈ ರಾಶಿಯ ಮೂಲಕ ಪ್ರಯಾಣಿಸುತ್ತಾನೆ. ನಂತರ ಆಗಸ್ಟ್ 16 ರಂದು ಸೂರ್ಯನು ಸಿಂಹ ರಾಶಿಗೆ ಸಾಗುತ್ತಾನೆ. ಶುಕ್ರವು ಜುಲೈ 31 ರಿಂದ ಆಗಸ್ಟ್ 25 ರವರೆಗೆ ಸಿಂಹ ರಾಶಿಯಲ್ಲಿ ಗೋಚರವಾಗಲಿದೆ.

 

4/8
ಚತುರ್ಗ್ರಹಿ ಯೋಗ
ಚತುರ್ಗ್ರಹಿ ಯೋಗ

ಇಂತಹ ಪರಿಸ್ಥಿತಿಯಲ್ಲಿ ಆಗಸ್ಟ್ 16ರ ನಂತರ ಸಿಂಹರಾಶಿಯಲ್ಲಿರುವ ಸೂರ್ಯ, ಶುಕ್ರ, ಬುಧ, ಮತ್ತು ಚಂದ್ರ ಗ್ರಹಗಳು ಚತುರ್ಗ್ರಹ ಯೋಗವನ್ನು ರೂಪಿಸುತ್ತವೆ. 50 ವರ್ಷಗಳ ನಂತರ ಈ ಅಪರೂಪದ ಯೋಗ ಸಿಂಹ ರಾಶಿಯಲ್ಲಿ ಸೃಷ್ಟಿಯಾಗಿದೆ.

 

5/8
ಸಿಂಹ
ಸಿಂಹ

ಚತುರ್ಗ್ರಹ ಯೋಗವು ಸಿಂಹ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳನ್ನು ಪಡೆಯಬಹುದು. ಕೆಲಸದಲ್ಲಿ ಬಡ್ತಿಯೊಂದಿಗೆ ಬ್ಯಾಂಕ್‌ ಬ್ಯಾಲೆನ್ಸ್‌ ಹೆಚ್ಚಾಗಲಿದೆ. ವಿವಾಹ ಯೋಗ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂತಸ ಹೆಚ್ಚಾಗಲಿದೆ. ಆರೋಗ್ಯವೂ ಉತ್ತಮವಾಗಿರುತ್ತದೆ.

 

6/8
ವೃಶ್ಚಿಕ
ವೃಶ್ಚಿಕ

ಚತುರ್ಗ್ರಹ ಯೋಗದಿಂದಾಗಿ ವೃಶ್ಚಿಕ ರಾಶಿಯವರು ಕೆಲಸದಲ್ಲಿ ಮಹತ್ತರವಾದ ಸಾಧನೆ ಮಾಡುವರು. ವ್ಯಾಪಾರದಲ್ಲಿ ಸುಧಾರಣೆ ಕಂಡುಬರಲಿದೆ. ಹಣ ಗಳಿಸಲು ನಿಮಗೆ ಅನೇಕ ಸುವರ್ಣಾವಕಾಶಗಳು ಸಿಗುತ್ತವೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.

7/8
ಧನು ರಾಶಿ
ಧನು ರಾಶಿ

ಚತುರ್ಗ್ರಹ ಯೋಗವು ಧನು ರಾಶಿಯವರಿಗೆ ಕಚೇರಿಯಲ್ಲಿ ಬಡ್ತಿ ಅಥವಾ ಕೆಲವು ಅಮೂಲ್ಯ ಉಡುಗೊರೆಗಳನ್ನು ನೀಡುತ್ತದೆ. ಮನೆಯಲ್ಲಿ ಕೆಲವು ಧಾರ್ಮಿಕ ಕಾರ್ಯಗಳು ನಡೆಯಬಹುದು. ಷೇರು ಮಾರುಕಟ್ಟೆ, ಲಾಟರಿ ಇತ್ಯಾದಿಗಳಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಪಡೆಯಬಹುದು.

 

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಮೀಡಿಯಾ ಖಚಿತಪಡಿಸಿಲ್ಲ.

 





Read More