PHOTOS

Photo Gallery: ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ ಭೇಟಿ ಹೇಗಿತ್ತು..?

PM Modi ISRO Visit: ಬಾಹ್ಯಾಕಾಶದಲ್ಲಿ ಇಸ್ರೋ ಪರಾಕ್ರಮ ಮೆರೆಇದ್ದು, ಚಂದ್ರನ ದಕ್ಷಿಣ ಧ್ರುವ ತಲುಪಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭ...

Advertisement
1/5
ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ
ಬೆಂಗಳೂರಿನ ಇಸ್ರೋ ಕಚೇರಿಗೆ ಪ್ರಧಾನಿ ಮೋದಿ

ಶನಿವಾರ ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿಯವರು ಪೀಣ್ಯದಲ್ಲಿರುವ ಇಸ್ರೋ ಕೇಂದ್ರ ಕಚೇರಿಗೆ ತೆರಳಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ಇಸ್ರೋದ  ಮಹತ್ತರ ಸಾಧನೆಯ ಬಗ್ಗೆ ಮನಸಾರೆ ಹಾಡಿಹೊಗಳಿದ ಪ್ರಧಾನಿ ಮೋದಿ ಚಂದ್ರಯಾನ-3ರ ಯಶಸ್ಸಿನಿಂದ ಖುಷಿಯ ಅಲೆಯಲ್ಲಿ ತೇಲಾಡಿದರು.

2/5
ಪ್ರಧಾನಿ ಮೋದಿ ರೋಡ್ ಶೋ
ಪ್ರಧಾನಿ ಮೋದಿ ರೋಡ್ ಶೋ

ಇಸ್ರೋ ಕೇಂದ್ರ ಕಚೇರಿಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು. ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಬೆಂಗಳೂರಿನ ಜನರು ಪ್ರಧಾನಿ ಮೋದಿಗೆ ಜೈಕಾರ ಹಾಕಿದರು. ತ್ರಿವರ್ಣ ಧ್ವಜಗಳನ್ನು ಹಿಡಿದು ಇಸ್ರೋದ ಸಾಧನೆಗೆ ಬಹುಪರಾಕ್ ಹೇಳಿದರು.

3/5
ಪ್ರಧಾನಿ ಮೋದಿ ರೋಡ್ ಶೋನಲ್ಲಿ ಬಿಜೆಪಿ ನಾಯಕರು
ಪ್ರಧಾನಿ ಮೋದಿ ರೋಡ್ ಶೋನಲ್ಲಿ ಬಿಜೆಪಿ ನಾಯಕರು

ಪ್ರಧಾನಿ ಮೋದಿ ರೋಡ್ ಶೋ ವೇಳೆ ಬಿಜೆಪಿ ನಾಯಕರು ಸಹ ಭಾಗವಹಿಸಿದ್ದರು. ಮಾಜಿ ಸಚಿವರಾದ ಆರ್.ಅಶೊಕ್, ಮುನಿರತ್ನ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಸಾಮಾನ್ಯ ಜನರಂತೆ ರಸ್ತೆಬದಿ ನಿಂತು ಮೋದಿಯವರ ರೋಡ್ ಶೋ ವೀಕ್ಷಿಸಿದರು.

4/5
ಗಮನ ಸೆಳೆದ ವೀರಭದ್ರ ಕುಣಿತ
ಗಮನ ಸೆಳೆದ ವೀರಭದ್ರ ಕುಣಿತ

ಪ್ರಧಾನಿ ಮೋದಿಯವರ ರೋಡ್‍ ಶೋ ಸಂದರ್ಭದಲ್ಲಿ ಜನಪದ ಧಾರ್ಮಿಕ ವೀರನೃತ್ಯವಾದ ವೀರಭದ್ರ ಕುಣಿತವು ಜನರ ಗಮನ ಸೆಳೆಯಿತು.

5/5
ಮೋದಿಗೆ ಜೈಕಾರ ಹಾಕಿದ ಜನರು
ಮೋದಿಗೆ ಜೈಕಾರ ಹಾಕಿದ ಜನರು

ಪ್ರಧಾನಿ ಮೋದಿಯವರ ರೋಡ್ ಶೋ ವೀಕ್ಷಿಸಲು ಅಪಾರ ಪ್ರಮಾಣದ ಜನರು ನೆರೆದಿದ್ದರು. ರಸ್ತೆಬದಿ ನಿಂತುಕೊಂಡಿದ್ದ ಬೆಂಗಳೂರಿನ ಜನರು ಮೋದಿಗೆ ಜೈಕಾರ ಹಾಕಿದರು.





Read More