PHOTOS

Business Idea: ನಿಮ್ಮ ಮನೆಯ ಮೇಲ್ಚಾವಣಿಯಿಂದಲೇ ಈ 4 ಬಿಸ್ನೆಸ್ ಆರಂಭಿಸಿ, ಕೈತುಂಬಾ ಸಂಪಾದನೆ ಮಾಡಿ

ng>ನೀವು ಸಹ ನಿಮ್ಮ ಸ್ವಂತ ಉದ್ಯಮವನ್ನು ಆರಂಭಿಸಲು ಯೋಜನೆ ರೂಪಿಸುತಿದ್ದು, ನಿಮ್ಮ ಬಳಿ ಕಡಿಮೆ ಬಂಡವಾಳವಿದ್ದರೆ,  ನಿಮ್ಮ ಉದ್ಯಮವನ್ನು ನೀವು ನಿಮ್ಮ ಮನೆ...

Advertisement
1/5

ವಿಶ್ವಾದ್ಯಂತ ಹೆಚ್ಚುತ್ತಿರುವ ಮಾಲಿನ್ಯದ ಕಾರಣ ಸೌರಶಕ್ತಿಯ ಬಗ್ಗೆ ಅರಿವು ಹೆಚ್ಚಾಗ ತೊಡಗಿದೆ.. ಸರ್ಕಾರಗಳೂ ಕೂಡ ಈಕುರಿತು ಪ್ರಚಾರ ನಡೆಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕಟ್ಟಡದ ಮೇಲ್ಛಾವಣಿಯ ಮೇಲೆ ನೀವು ಸೌರ ಸ್ಥಾವರವನ್ನು ಸ್ಥಾಪಿಸುವ ಮೂಲಕ ನೀವು ಡಬಲ್ ಪ್ರಯೋಜನವನ್ನು ಪಡೆಯಬಹುದು. ಇದರೊಂದಿಗೆ, ವಿದ್ಯುತ್ ಬಿಲ್ ಕೂಡ ಉಳಿತಾಯವಾಗುತ್ತದೆ ಮತ್ತು ನೀವು ಉತ್ತಮ ಹಣವನ್ನು ಗಳಿಕೆ ಮಾಡುವಿರಿ. ಇದಕ್ಕಾಗಿ, ನೀವು ಪ್ರದೇಶದ ವಿದ್ಯುತ್ ಮಂಡಳಿಗೆ ಸಂಪರ್ಕಿಸಬೇಕು, ಅವರು ಸೋಲಾರ್ ಪ್ಯಾನೆಲ್ನಿಂದ ಉತ್ಪತ್ತಿಯಾಗುವ ವಿದ್ಯುತ್ಗಾಗಿ ಮನೆಯಲ್ಲಿ ಮೀಟರ್ ಅನ್ನು ಅಳವಡಿಸುತ್ತಾರೆ. ದೆಹಲಿಯಲ್ಲಿ, ಪ್ರತಿ ಯೂನಿಟ್‌ಗೆ 5.30 ರೂ ಆಧಾರದ ಮೇಲೆ ಡಿಸ್ಕಾಮ್ ಹಣ ಪಾವತಿ ಮಾಡುತ್ತದೆ. ಸೋಲಾರ್ ಪ್ಲಾಂಟ್‌ಗೆ ನೀವು ಪ್ರತಿ ಕಿಲೋವ್ಯಾಟ್‌ಗೆ ಕೇವಲ 70 ರಿಂದ 80 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ ಮತ್ತು ಅದರ ಮೂಲಕ ನೀವು 25 ವರ್ಷಗಳವರೆಗೆ ಆದಾಯವನ್ನು ಪಡೆಯಬಹುದು.

2/5

ನಮ್ಮ ದೇಶದಲ್ಲಿ ಟೆರೆಸ್ ಫಾರ್ಮಿಂಗ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆ. ಇದಕ್ಕಾಗಿ ನೀವು ನಿಮ್ಮ ಕಟ್ಟಡದ ಛಾವಣಿಯ ಮೇಲೆ ಹಸಿರುಮನೆ ನಿರ್ಮಿಸಬೇಕು. ಅಲ್ಲಿ, ತರಕಾರಿ ಗಿಡಗಳನ್ನು ಪಾಲಿಬ್ಯಾಗ್‌ಗಳಲ್ಲಿ ನೆಡಬಹುದು ಮತ್ತು ಡ್ರಿಪ್ ಇರಿಗೆಶನ್ ಪದ್ಧತಿಯನ್ನು ಮಾಡಬಹುದು. ತಾಪಮಾನ ಮತ್ತು ತೇವಾಂಶವನ್ನು ನಿಯಂತ್ರಿಸಲು, ನೀವು ಅದರ ಉಪಕರಣಗಳನ್ನು ಸ್ಥಾಪಿಸಬೇಕು. ಪಾಲಿಬ್ಯಾಗ್‌ಗೆ ಮಣ್ಣು ಮತ್ತು ಕೋಕೋಪೀಟ್ ತುಂಬಿಸಬೇಕು. ಇದಕ್ಕಾಗಿ ನೀವು ಸಾವಯವ ಗೊಬ್ಬರಗಳನ್ನು ಸಹ ಬಳಸಬಹುದು. ಮಾರ್ಕೆಟಿಂಗ್ ಕುರಿತು ಹೇಳುವುದಾದರೆ, ನಿಮ್ಮ ಅಕ್ಕ ಪಕ್ಕದಲ್ಲಿ ವಾಸಿಸುವ ಜನರಿಗೆ ಈ ಕುರಿತು ನೀವು ಮಾಹಿತಿ ನೀಡಿ, ಜನರು ತಾಜಾ ತರಕಾರಿಗಳನ್ನು ಖರೀದಿಸಲು ನಿಮ್ಮನ್ನು ತಲುಪಲು ಪ್ರಾರಂಭಿಸುತ್ತಾರೆ. ಅಥವಾ ವ್ಯಾಪಾರ ಬೆಳೆದ ನಂತರ, ಅವರ ಮನೆಗಳಿಗೆ ತರಕಾರಿಗಳನ್ನು ಒದಗಿಸಲು ನೀವು ಡೆಲಿವರಿ ಬಾಯ್ ಅನ್ನು ಸಹ ನೇಮಿಸಿಕೊಳ್ಳಬಹುದು.

3/5

ನಿಮ್ಮ ಕಟ್ಟಡದ ಮೇಲ್ಛಾವಣಿಯು ಖಾಲಿಯಾಗಿದ್ದು, ಅದನ್ನು ನೀವು ಬಳಸುತ್ತಿಲ್ಲ ಎಂದಾದಲ್ಲಿ, ನೀವು ಅದನ್ನು ಮೊಬೈಲ್ ಕಂಪನಿಗಳಿಗೆ ಬಾಡಿಗೆಗೆ ನೀಡಬಹುದು. ಇದರಿಂದ ನಿಮ್ಮ ಗಳಿಕೆಯೂ ಚೆನ್ನಾಗಿರುತ್ತದೆ. ನಿಮ್ಮ ಮೇಲ್ಛಾವಣಿಯ ಮೇಲೆ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಮೂಲಕ ಕಂಪನಿಗಳು ಪ್ರತಿ ತಿಂಗಳು ನಿಮಗೆ ಉತ್ತಮ ಬಾಡಿಗೆಯನ್ನು ಪಾವತಿಸುತ್ತವೆ. ಆದಾಗ್ಯೂ, ಇದಕ್ಕಾಗಿ, ನೀವು ನಿಮ್ಮ ಸುತ್ತಮುತ್ತಲಿನ ಜನರಿಂದ 'ನಿರಾಕ್ಷೇಪಣಾ ಪ್ರಮಾಣಪತ್ರ' ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಸ್ಥಳೀಯ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಕೂಡ ನೀವು ಅನುಮತಿಯನ್ನು ಪಡೆದುಕೊಳ್ಳಬೇಕು.

4/5

ನಿಮ್ಮ ಕಟ್ಟಡವು ನೀವು ವಾಸಿಸುವ ನಗರದ ವಿಶೇಷ ಸ್ಥಳದಲ್ಲಿದ್ದರೆ ಅಥವಾ ದೂರದಿಂದ ಅಥವಾ ಯಾವುದೇ ಮುಖ್ಯ ರಸ್ತೆಯಲ್ಲಿ ಸುಲಭವಾಗಿ ಗೋಚರಿಸುತ್ತಿದ್ದರೆ, ನಿಮ್ಮ ಛಾವಣಿಯ ಮೇಲೆ ಹೋರ್ಡಿಂಗ್‌ಗಳನ್ನು ಸ್ಥಾಪಿಸುವ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು. ಪ್ರತಿ ನಗರದಲ್ಲಿ ಇಂತಹ ಅನೇಕ ಜಾಹೀರಾತು ಎಜೆನ್ಸಿಗಳಿದ್ದು, ಅವುಗಳು ಹೊರಾಂಗಣ ಜಾಹೀರಾತು ಕೆಲಸವನ್ನು ಮಾಡುತ್ತವೆ. ನೀವು ಬಯಸಿದರೆ, ನೀವು ಅಂತಹ ಏಜೆನ್ಸಿಯನ್ನು ಸಂಪರ್ಕಿಸಬಹುದು, ಅವರು ಎಲ್ಲಾ ರೀತಿಯ ಕ್ಲಿಯರೆನ್ಸ್ ತೆಗೆದುಕೊಂಡ ನಂತರ ನಿಮ್ಮ ಛಾವಣಿಯ ಮೇಲೆ ಹೋರ್ಡಿಂಗ್ಗಳನ್ನು ಹಾಕುತ್ತಾರೆ. ಆದರೆ, ಹೋರ್ಡಿಂಗ್ ಹಾಕುವ ಮುನ್ನ ಏಜೆನ್ಸಿ ಕ್ಲಿಯರೆನ್ಸ್ ಹೊಂದಿದೆಯೇ ಅಥವಾ ಇಲ್ಲ  ಎಂಬುದನ್ನು ನೀವು ತಿಳಿದುಕೊಳ್ಳುವುದು ಇಲ್ಲಿ ತುಂಬಾ ಮುಖ್ಯವಾದ ಸಂಗತಿಯಾಗಿದೆ, ಇಲ್ಲದಿದ್ದರೆ ನಿಮ್ಮ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬಹುದು.

5/5

ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮ ಬಳಿ ಸಾಕಷ್ಟು ಬಂಡವಾಳವಿಲ್ಲದಿದ್ದರೆ, ಈಗ ನೀವು ಚಿಂತಿಸಬೇಕಾಗಿಲ್ಲ. ಅಂತಹ ಅನೇಕ ಬ್ಯಾಂಕುಗಳು ಆಯ್ದ ವ್ಯವಹಾರಕ್ಕಾಗಿ ನಿಮಗೆ ಬ್ಯಾಂಕಿಂಗ್ ಸಾಲ ಸೌಲಭ್ಯ ಒದಗಿಸುತ್ತವೆ. ಮಾರುಕಟ್ಟೆಯಲ್ಲಿ ಮೇಲ್ಛಾವಣಿ ವ್ಯಾಪಾರವನ್ನು ನೀಡುವ ಅನೇಕ ಏಜೆನ್ಸಿಗಳು ಸಹ ಹುಟ್ಟಿಕೊಂಡಿವೆ. ಅವುಗಳ ಸಹಾಯವನ್ನು ಪಡೆದು ನೀವು ಕೂಡ ಸೌರ ಉದ್ಯಮದಿಂದ ಟೆಲಿಕಾಂ ಉದ್ಯಮ, ಕೃಷಿ ಉದ್ಯಮ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಾಲವನ್ನು ಪಡೆದುಕೊಳ್ಳಬಹುದು.





Read More