PHOTOS

ದೇವ-ದೇವತೆಗಳ ಗುರು ಬೃಹಸ್ಪತಿಯ ರಾಶಿಯಲ್ಲಿ 'ಬುದ್ಧಾದಿತ್ಯ ರಾಜಯೋಗ' ಈ ಮೂರು ರಾಶಿಗಳಿಗೆ ಅಪಾರ ಧನ ಲಾಭ!

picious Rajyog In pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ದೇವ ಗುರು ಬೃಹಸ್ಪತಿಯ ರಾಶಿಯಾಗಿರುವ ಮೀನ ರಾಶಿಯಲ್ಲಿ ಬುದ್ಧಾದಿತ್ಯ ...

Advertisement
1/3

ಮಿಥುನ ರಾಶಿ: ಮೀನ ರಾಶಿಯಲ್ಲಿ ನಿರ್ಮಾಣಗೊಂಡಿರುವ ಈ ಬುದ್ಧಾದಿತ್ಯ ರಾಜಯೋಗ ನಿಮ್ಮ ವೃತ್ತಿ ಜೀವನ ಹಾಗೂ ವ್ಯಾಪಾರಕ್ಕೆ ಸಾಕಷ್ಟು ಅನುಕೂಲಕರವಾಗಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಕರ್ಮ ಭಾವದ ಮೇಲೆ ರೂಪುಗೊಂಡಿದೆ. ಹೀಗಾಗಿ, ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಜೊತೆಗೆ ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೇ, ಬೇರೊಂದು ಬಿಸ್ನೆಸ್ ಟೆಕ್ ಓವರ್ ಮಾಡುವುದರ ಬಗ್ಗೆ ಯೋಚಿಸಬಹುದು ಅಥವಾ ಹೊಸ ಡೀಲ್ ಮಾಡಿಕೊಳ್ಳಬಹುದು ಸಮಯ ಅನುಕೂಲಕರವಾಗಿದೆ. ಈ ಒಪ್ಪಂದ ನಿಮಗೆ ನಿಮ್ಮ ಭವಿಷ್ಯದಲ್ಲಿ ಅತ್ಯಂತ ಶುಭ ಪರಿಣಾಮಗಳನ್ನು ನೀಡಲಿದೆ. ನೌಕರವರ್ಗದ ಜನರಿಗೆ ಮಾಚ್ ತಿಂಗಳ ಆಸುಪಾಸಿನಲ್ಲಿ ಇಂಕ್ರಿಮೆಂಟ್-ಪ್ರಮೋಷನ್ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.  

2/3

ಕನ್ಯಾ ರಾಶಿ: ಬೃಹಸ್ಪತಿಯ ರಾಶಿಯಲ್ಲಿ ನಿರ್ಮಾಣಗೊಂಡಿರುವ ಈ ಬುದಾದಿತ್ಯ ರಾಜಯೋಗ. ನಿಮ್ಮ ಪಾಲಿಗೆ ಶುಭ ಫಲಪ್ರದಾಯಿ ಸಿದ್ಧವಾಗಲಿದೆ. ಏಕೆಂದರೆ ಈ  ಯೋಗ ನಿಮ್ಮ ಜಾತಕದ ಸಪ್ತಮೇಷ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದನ್ನು ವೈವಾಹಿಕ ಜೀವನ ಹಾಗೂ ಪಾರ್ಟ್ನರ್ಶಿಪ್ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರಲಿದೆ. ಅಲ್ಲದೆ ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ಗೆಳೆತನ ಹಾಗೂ ಕೌಟುಂಬಿಕ ಜೀವನದಲ್ಲಿ ಶುಭ ಫಲಿತಾಂಶಗಳು ಸಿಗುವ ಎಲ್ಲಾ ಸಾಧ್ಯತೆಗಳಿವೆ. ಆರ್ಥಿಕ ವ್ಯವಹಾರ ಹಾಗೂ ವ್ಯಾಪಾರದಲ್ಲಿ ಲಾಭ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಪಾರ್ಟ್ನರ್ಶಿಪ್ ನಲ್ಲಿ ಯಾವುದಾದರೊಂದು ಹೊಸ ವ್ಯವಹಾರವನ್ನು ನೀವು ಪ್ರಾರಂಭಿಸಲು ಬಯಸುತ್ತಿದ್ದರೆ ಈ ಸಮಯ ಅತ್ಯಂತ ಅದ್ಭುತ ಹಾಗೂ ಯಶಸ್ಸಿನ ಸಮಯವಾಗಿದೆ. ಅವಿವಾಹಿತ ಜನರಿಗೆ ವಿವಾಹ ಯೋಗ ನಿರ್ಮಾಣಗೊಳ್ಳುತ್ತಿವೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)   

3/3

ಧನು ರಾಶಿ: ಬುದ್ಧಾದಿತ್ಯ ರಾಜಯೋಗ ಧನು ಜಾತಕದ ಸ್ಥಳೀಯರಿಗೆ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ರಾಶಿಯ ಧನ ಭಾವದ ಮೇಲೆ ರೂಪುಗೊಂಡಿದೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ಇದೆ. ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೆ, ನಿಮಗೆ ಉತ್ತಮ ಆರ್ಡರ್ಗಳು ಸಿಗಲಿವೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವ ಕಂಡುಬರಲಿದೆ. ಇದರಿಂದ ಜನರು ನಿಮ್ಮ ಮೇಲೆ ಇಂಪ್ರೆಸ್ ಆಗಲಿದ್ದಾರೆ. ಆಸ್ತಿ ಪಾಸ್ತಿ, ವಾಹನ ಖರೀದಿಯ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಆದರೆ, ನೀವು ಸಾಕಷ್ಟು ಯೋಚಿಸಿ ನಿರ್ದಾರ ಕೈಗೊಳ್ಳಬೇಕು. ಮನೆಯಲ್ಲಿ ಗುರು ಹಿರಿಯರ ಸಲಹೆ ಪಡೆದು ನಿರ್ಧಾರ ಕೈಗೊಂಡರೆ ಉತ್ತಮ, ತರಾತುರಿ ಬೇಡ.   





Read More