PHOTOS

Budh-Guru Yuti 2024: 12 ವರ್ಷಗಳ ನಂತರ ಒಂದೇ ರಾಶಿಯಲ್ಲಿ ಎರಡು ಶುಭ ಗ್ರಹಗಳು, ಬೆಳಗಲಿದೆ ಈ ರಾಶಿಯವರ ಭಾಗ್ಯಜ್ಯೋತಿ

Budh-Guru Yuti 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ-ಗುರು ಬರೋಬ್ಬರಿ 12  ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಒಟ್ಟಿಗೆ ಕೂಡಲಿದ್ದಾರೆ. ಇದರ ಪರಿಣಾಮ ಎಲ...

Advertisement
1/8
ಬುಧ-ಗುರು ಸಂಚಾರ
ಬುಧ-ಗುರು ಸಂಚಾರ

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಬುಧ-ಗುರು ಎರಡೂ ಶುಭ ಗ್ರಹಗಳು ಒಟ್ಟಿಗೆ ಸೇರಲಿವೆ. 

2/8
ಬುಧ-ಗುರು ಯುತಿ
ಬುಧ-ಗುರು ಯುತಿ

ಪ್ರಸ್ತುತ ಬುಧ ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಮಾರ್ಚ್ 26 ರಂದು ಗುರು ಕೂಡ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. 

3/8
ಬುಧ-ಗುರು ಯುತಿ ಪ್ರಭಾವ
ಬುಧ-ಗುರು ಯುತಿ ಪ್ರಭಾವ

ಮೇಷ ರಾಶಿಯಲ್ಲಿ ಬುಧ-ಗುರು ಸಂಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ನಾಲ್ಕು ರಾಶಿಯವರಿಗೆ ಸುವರ್ಣಯುಗ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

4/8
ಮಿಥುನ ರಾಶಿ
 ಮಿಥುನ ರಾಶಿ

ಬುಧ-ಗುರು ಸಂಯೋಗವು ಮಿಥುನ ರಾಶಿಯವರಿಗೆ ಒಳ್ಳೆಯ ದಿನಗಳನ್ನು ತರಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗಲಿದ್ದು  ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ವ್ಯಾಪಾರಸ್ಥರು, ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಒಳ್ಳೆಯ ಸಮಯ. 

5/8
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಬುಧ-ಗುರು ಯುತಿಯ ಪರಿಣಾಮವಾಗಿ ಕರ್ಕಾಟಕ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಭಾರೀ ಪ್ರಯೋಜನವಾಗಲಿದೆ. ಉದ್ಯೋಗ ರಂಗದಲ್ಲಿ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗುವಿರಿ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದೆ. ದೊಡ್ಡ ವ್ಯವಹಾರಕ್ಕೆ ಕೈ ಹಾಕಲು ಯೋಚಿಸುತ್ತಿರುವವರಿಗೆ ಸುವರ್ಣ ಕಾಲ ಎಂತಲೇ ಹೇಳಬಹುದು. 

6/8
ಸಿಂಹ ರಾಶಿ
ಸಿಂಹ ರಾಶಿ

ಬುಧ-ಗುರು ಸಂಯೋಗವು ಸಿಂಹ ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. ಜೀವನದಲ್ಲಿ ಅದರಲ್ಲೂ ಕೌಟುಂಬಿಕ ಜೀವನದಲ್ಲಿ ಇಷ್ಟು ದಿನಗಳು ಎದುರಾಗಿದ್ದ ಸಂಕಷ್ಟಗಳು ದೂರವಾಗಲಿವೆ. 

7/8
ತುಲಾ ರಾಶಿ
ತುಲಾ ರಾಶಿ

ಬುಧ-ಗುರು ಸಂಯೋಗದ ಪರಿಣಾಮವಾಗಿ ತುಲಾ ರಾಶಿಯ ವಿವಾಹಿತರು ದಾಂಪತ್ಯ ಜೀವನದಲ್ಲಿ ಮಧುರತೆಯನ್ನು ಕಾಣುತ್ತಾರೆ. ವ್ಯಾಪಾರಸ್ಥರಿಗೆ ಅದರಲ್ಲೂ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರಿಗೆ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಭಾರೀ ಪ್ರಯೋಜನವಾಗಲಿದೆ. 

8/8
ಸೂಚನೆ
ಸೂಚನೆ

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More