PHOTOS

Budh Gochar: ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ

bsp;                     &n...

Advertisement
1/7
ಬುಧ ರಾಶಿ ಪರಿವರ್ತನೆ
ಬುಧ ರಾಶಿ ಪರಿವರ್ತನೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಮೂರನೇ ಮತ್ತು ಆರನೇ ಮನೆಯನ್ನು ಆಳುತ್ತಾನೆ. ಇಷ್ಟು ದಿನ ತನ್ನದೇ ಆದ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿದ್ದ ಬುಧನು ಈ ಸಮಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಸ್ಥಳೀಯರಿಗೆ ವೃತ್ತಿ ವ್ಯವಹಾರದಲ್ಲಿ ಭಾರೀ ಯಶಸ್ಸನ್ನು ನೀಡುತ್ತಿದ್ದನು. ಇದೀಗ ಬುಧನು ಕನ್ಯಾ ರಾಶಿಯನ್ನು ತೊರೆದು ಸಿಂಹ ರಾಶಿಗೆ ಪ್ರವೇಶಿಸಿದ್ದಾನೆ.   

2/7
ಸಿಂಹ ರಾಶಿಯಲ್ಲಿ ಬುಧನ ಸಂಚಾರ
ಸಿಂಹ ರಾಶಿಯಲ್ಲಿ ಬುಧನ ಸಂಚಾರ

ಗ್ರಹಗಳ ರಾಜಕುಮಾರ ಬುಧನು  ನಿನ್ನೆಯಷ್ಟೇ ಅಂದರೆ ಜುಲೈ 25, 2023 ರಂದು ಬೆಳಿಗ್ಗೆ 4:26 ಕ್ಕೆ ಸಿಂಹ ರಾಶಿಯನ್ನು ಪ್ರವೇಶಿಸಿದ್ದಾನೆ. ಸಿಂಹ ರಾಶಿಯಲ್ಲಿ ಬುಧನ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಮೇಲೆ ಶುಭ ಅಶುಭ ಪರಿಣಾಮಗಳನ್ನು ಬಿರುತ್ತದೆ.   

3/7
ಬುಧನ ಸಂಚಾರದಿಂದ ಮೂರು ರಾಶಿಯವರಿಗೆ ಅದೃಷ್ಟ
ಬುಧನ ಸಂಚಾರದಿಂದ ಮೂರು ರಾಶಿಯವರಿಗೆ ಅದೃಷ್ಟ

ಆದಾಗ್ಯೂ, ಸಿಂಹ ರಾಶಿಯಲ್ಲಿ ಬುಧನ ಸಂಚಾರದಿಂದ ಮೂರು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಅವರ ಜೀವಾದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ... 

4/7
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿಯವರಿಗೆ ಬುಧನ ರಾಶಿ ಪರಿವರ್ತನೆಯಿಂದ ತುಂಬಾ ಪ್ರಯೋಜನವಾಗಲಿದೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಸ್ವಯಂ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಿ. ಉದ್ಯೋಗಸ್ಥರಿಗೆ ಬಡ್ತಿ ಯೋಗವಿದೆ. ಇದಲ್ಲದೆ, ಆಸ್ತಿ, ವಾಹನ ಖರೀದಿ ಯೋಗವೂ ಇದೆ. 

5/7
ಸಿಂಹ ರಾಶಿ
ಸಿಂಹ ರಾಶಿ

ಬುಧನ ರಾಶಿ ಬದಲಾವಣೆಯು ಸೂರ್ಯನ ರಾಶಿಚಕ್ರ ಚಿಹ್ನೆಯಾದ ಸಿಂಹ ರಾಶಿಯವರ ಜೀವನದಲ್ಲೂ ಒಳ್ಳೆಯ ದಿನಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ವೃತ್ತಿ ಬದುಕಿನಲ್ಲಿ ಯಶಸ್ಸು, ನಾಯಕತ್ವದ ಸಾಮರ್ಥ್ಯ ತೋರಿಸಲು ಒಳ್ಳೆಯ ಅವಕಾಶಗಳು ಲಭ್ಯವಿದೆ. ಉದ್ಯೋಗ ಸಂಬಂಧಿತ ಪ್ರಯಾಣ ಸಾಧ್ಯತೆ ಇದ್ದು, ಪ್ರಯಾಣವೂ ಲಾಭದಾಯಕವಾಗಿರುತ್ತದೆ. 

6/7
ಧನು ರಾಶಿ
ಧನು ರಾಶಿ

ಬುಧ ರಾಶಿ ಪರಿವರ್ತನೆಯು ಧನು ರಾಶಿಯವರಿಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ವಿದೇಶ ಪ್ರಯಾಣ ಯೋಗವನ್ನೂ ನೀಡುತ್ತಿದ್ದಾನೆ. ನೀವು ಬೇರೆ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇದು ಅತ್ಯುತ್ತಮ ಸಮಯ. ವ್ಯಾಪಾರಸ್ಥರಿಗೆ ಬಂಪರ್ ಲಾಭವಾಗಲಿದೆ. ಇದರಿಂದಾಗಿ ಹಣಕಾಸಿನ ಲಾಭವೂ ಹೆಚ್ಚಾಗಲಿದ್ದು, ನಿಮ್ಮ ಜೀವನದಲ್ಲಿ ತಲೆದೂರಿರುವ ಹಣಕಾಸಿನ ಮುಗ್ಗಟ್ಟಿನಿಂದ ಮುಕ್ತಿಯನ್ನು ಪಡೆಯುವಿರಿ. ಒಟ್ಟಾರೆಯಾಗಿ ಇದು ನಿಮ್ಮ ಅದೃಷ್ಟದ ಸಮಯ ಎಂತಲೇ ಹೇಳಬಹುದು. 

7/7

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More