PHOTOS

ಬುದ್ಧ ಪೂರ್ಣಿಮಾ 2024: ಬುದ್ಧ ಪೂರ್ಣಿಮೆ ಯಾವಾಗ? ಸ್ನಾನ, ದಾನ & ಪೂಜಾ ಸಮಯ ತಿಳಿಯಿರಿ

Buddha Purnima 2024: ಬುದ್ಧ ಪೂರ್ಣಿಮೆಯಂದು ಬೆಳಗ್ಗೆ ಬೇಗನೆ ಸ್ನಾನ ಮಾಡಿ. ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಇದಾದ ನಂ...

Advertisement
1/5
ಬುದ್ಧ ಪೂರ್ಣಿಮೆ ಯಾವಾಗ?
ಬುದ್ಧ ಪೂರ್ಣಿಮೆ ಯಾವಾಗ?

ಈ ಬಾರಿ ಬುದ್ಧ ಪೂರ್ಣಿಮೆ ಯಾವಾಗ ಎಂಬ ಗೊಂದಲ ಉಂಟಾಗಿದೆ. ಪಂಚಾಂಗದ ಪ್ರಕಾರ, ವೈಶಾಖ ಪೂರ್ಣಿಮಾ ತಿಥಿಯು ಮೇ 22ರಂದು ಸಂಜೆ 6:47ಕ್ಕೆ ಪ್ರಾರಂಭವಾಗುತ್ತದೆ. ಮೇ 23ರಂದು ಸಂಜೆ 7:22ಕ್ಕೆ ಕೊನೆಗೊಳ್ಳುತ್ತದೆ. ಈ ರೀತಿಯಲ್ಲಿ ಉದಯತಿಥಿಯ ಪ್ರಕಾರ ವೈಶಾಖ ಪೂರ್ಣಿಮೆ ಮತ್ತು ಬುದ್ಧ ಪೂರ್ಣಿಮೆಯನ್ನು ಮೇ 23ರ ಗುರುವಾರದಂದು ಆಚರಿಸಲಾಗುತ್ತದೆ. 

2/5
ಪೂರ್ಣಿಮಾ ಸ್ನಾನದ ಸಮಯ
ಪೂರ್ಣಿಮಾ ಸ್ನಾನದ ಸಮಯ

ಈ ವರ್ಷ ವೈಶಾಖ ಪೂರ್ಣಿಮೆ ಅಥವಾ ಬುದ್ಧ ಪೂರ್ಣಿಮೆಯಂದು ಸ್ನಾನ ಮತ್ತು ದಾನದ ಸಮಯವು ಮೇ 23ರಂದು ಬೆಳಗ್ಗೆ 4.4ರಿಂದ 5.26ರವರೆಗೆ ಇರುತ್ತದೆ. ಬುದ್ಧ ಪೂರ್ಣಿಮೆಯ ದಿನದಂದು ಪೂಜೆಯ ಸಮಯ ಬೆಗ್ಗೆ 10.35ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. 

3/5
ಬುದ್ಧ ಪೂರ್ಣಿಮಾ ಶುಭ ಯೋಗ
ಬುದ್ಧ ಪೂರ್ಣಿಮಾ ಶುಭ ಯೋಗ

ಈ ವರ್ಷ ಬುದ್ಧ ಪೂರ್ಣಿಮೆಯಂದು ಸರ್ವಾರ್ಥ ಸಿದ್ಧಿ ಯೋಗ ಮತ್ತು ಶಿವಯೋಗ ರೂಪುಗೊಳ್ಳುತ್ತಿದೆ. ಈ ದಿನ ಗ್ರಹಗಳು ಮತ್ತು ನಕ್ಷತ್ರಗಳು ಒಟ್ಟಾಗಿ ಅನೇಕ ಅದ್ಭುತ ಯೋಗಗಳನ್ನು ರಚಿಸುತ್ತಿವೆ. ಮೇ 23ರಂದು ಶುಕ್ರ-ಸೂರ್ಯ ಸಂಯೋಗದಿಂದ ಶುಕ್ರಾದಿತ್ಯ ಯೋಗ, ರಾಜಭಂಗ ಯೋಗ. ಇದಲ್ಲದೇ ಗುರು ಶುಕ್ರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗವೂ ನಿರ್ಮಾಣವಾಗುತ್ತಿದೆ. 

4/5
ಮಂಗಳಕರ ಯೋಗ
ಮಂಗಳಕರ ಯೋಗ

ಈ ಮಂಗಳಕರ ಯೋಗಗಳಲ್ಲಿ ಸ್ನಾನ ಮಾಡುವುದು, ದಾನ ಮಾಡುವುದು ಮತ್ತು ಭಗವಾನ್ ವಿಷ್ಣು ಮತ್ತು ಭಗವಾನ್ ಬುದ್ಧನನ್ನು ಪೂಜಿಸುವುದು ಬಹಳ ಪ್ರಯೋಜನಕಾರಿಯಾಗಿದೆ. ನಿಮಗೆ ಗಂಗಾ ಸ್ನಾನ ಮಾಡಲು ಸಾಧ್ಯವಾಗದಿದ್ದರೆ ಗಂಗಾ ನೀರನ್ನು ಬೆರೆಸಿ ಮನೆಯಲ್ಲಿ ಸ್ನಾನ ಮಾಡಿ. 

5/5
ಬುದ್ಧ ಪೂರ್ಣಿಮಾ ಸ್ನಾನ-ದಾನ ಪೂಜೆ
ಬುದ್ಧ ಪೂರ್ಣಿಮಾ ಸ್ನಾನ-ದಾನ ಪೂಜೆ

ಬುದ್ಧ ಪೂರ್ಣಿಮೆಯಂದು ಬೆಳಗ್ಗೆ ಬೇಗನೆ ಸ್ನಾನ ಮಾಡಿ. ನಂತರ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಇದಾದ ನಂತರ ವಿಧಿವಿಧಾನಗಳ ಪ್ರಕಾರ ವಿಷ್ಣುವನ್ನು ಪೂಜಿಸಿ. ಪೂಜೆಯ ನಂತರ ದಾನ ಮಾಡಲು ಮರೆಯದಿರಿ. ಅಲ್ಲದೆ ಈ ದಿನ ಅರಳಿ ಮರಕ್ಕೆ ನೀರನ್ನು ಅರ್ಪಿಸಬೇಕು. 

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.)





Read More