PHOTOS

ಕ್ರಿಕೆಟಿಗರನ್ನು ಮದುವೆಯಾದ ನಂತರ ನಟನೆಯಿಂದ ದೂರ ಉಳಿದ ಬಾಲಿವುಡ್’ನ ಖ್ಯಾತ ನಟಿಯರು

Actress Who Quit Acting After Marriage: ಬಾಲಿವುಡ್‌’ನ ಅನೇಕ ನಟಿಯರು ಸ್ಟಾರ್ ಕ್ರಿಕೆಟಿಗರನ್ನು ಮದುವೆಯಾಗಿದ್ದಾರೆ. ಆದರೆ ವಿವಾಹವಾದ ಬ...

Advertisement
1/5
ನತಾಶಾ ಸ್ಟ್ಯಾಂಕೋವಿಕ್
ನತಾಶಾ ಸ್ಟ್ಯಾಂಕೋವಿಕ್

ಈ ಪಟ್ಟಿಯ ಮೊದಲ ಹೆಸರು ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್. ರಿಜಿಸ್ಟರ್ ಮದುವೆಯಾದ ಬಳಿಕ ಇತ್ತೀಚೆಗೆ ಪ್ರಸಿದ್ಧ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಅವರ ಜೊತೆ ಮತ್ತೊಮ್ಮೆ ಹಿಂದೂ-ಕ್ರಿಶ್ಚಿಯನ್ ಧರ್ಮದ ಪೂರ್ಣ ಪದ್ಧತಿಯೊಂದಿಗೆ ವಿವಾಹವಾದರು. ನತಾಶಾ ತನ್ನ ಸಿನಿ ವೃತ್ತಿಜೀವನವನ್ನು 'ಸತ್ಯಾಗ್ರಹ' ಸಿನಿಮಾದೊಂದಿಗೆ ಪ್ರಾರಂಭಿಸಿದರು. ಆದರೆ ಹಾರ್ದಿಕ್‌ ಅವನನ್ನು ಮದುವೆಯಾದ ನಂತರ, ನತಾಶಾ ನಟನೆಗೆ ಗುಡ್ ಬೈ ಹೇಳಿದ್ದಾರೆ.

2/5
ಸಾಗರಿಕಾ ಘಾಟ್ಗೆ
ಸಾಗರಿಕಾ ಘಾಟ್ಗೆ

ಈ ಪಟ್ಟಿಯಲ್ಲಿ 'ಚಕ್ ದೆ ಇಂಡಿಯಾ' ಖ್ಯಾತಿಯ ನಟಿ ಸಾಗರಿಕಾ ಹೆಸರನ್ನು ಸಹ ಸೇರಿಸಲಾಗಿದೆ. ಸಾಗರಿಕಾ 2017 ರಲ್ಲಿ ಕ್ರಿಕೆಟಿಗ ಜಹೀರ್ ಖಾನ್ ಅವರನ್ನು ವಿವಾಹವಾದರು. ಮದುವೆಗೆ ಮುಂಚಿತವಾಗಿ ನಟಿ ಕೊನೆಯದಾಗಿ 'ಇಂಟಾ' ಚಿತ್ರದಲ್ಲಿ ಕಾಣಿಸಿಕೊಂಡರು. ಆ ಬಳಿಕ ಸಿನಿಮಾ ಕ್ಷೇತ್ರಕ್ಕೆ ಬೈ ಬೈ ಹೇಳಿದಂತಿದೆ

3/5
ಸಂಗೀತ ಬಿಜ್ಲಾನಿ
ಸಂಗೀತ ಬಿಜ್ಲಾನಿ

90ರ ದಶಕದ ನಟಿ ಸಂಗೀತ ಬಿಜ್ಲಾನಿ 1996 ರಲ್ಲಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಜೊತೆ ವಿವಾಹವಾದರು. ಅದೇ ವರ್ಷದಲ್ಲಿ ಬಿಡುಗಡೆಯಾದ 'ನಿರ್ಭಯಾ' ಚಿತ್ರದಲ್ಲಿ ನಟಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಆದರೆ, ಈ ಇಬ್ಬರೂ ಹೆಚ್ಚು ಕಾಲ ಜೊತೆಯಾಗಿರಲಿಲ್ಲ. ಮದುವೆಯಾದ ಕೆಲವು ವರ್ಷಗಳ ನಂತರ ಅವರಿಬ್ಬರು ದೂರವಾದರು.  

4/5
ಗೀತಾ ಬಸ್ರಾ
ಗೀತಾ ಬಸ್ರಾ

ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿ ಗೀತಾ ಬಸ್ರಾ, ಹರ್ಭಜನ್ ಸಿಂಗ್ ಅವರೊಂದಿಗೆ ಪ್ರೇಮ ವಿವಾಹವಾಗಿದ್ದಾರೆ. ಈ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಿದಂತಿದೆ.

5/5
ಹೇಜಲ್ ಕೀಚ್
ಹೇಜಲ್ ಕೀಚ್

ಕರೀನಾ ಕಪೂರ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ 'ಬಾಡಿಗಾರ್ಡ್' ಚಿತ್ರದಲ್ಲಿ ಕೆಲಸ ಮಾಡಿದ ಹೇಜಲ್ ಕೀಚ್, ಸ್ಟಾರ್ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ವಿವಾಹವಾದರು. ಮದುವೆಯ ನಂತರ ಯಾವುದೇ ಚಿತ್ರದಲ್ಲಿ ಹೇಜಲ್ ಕೀಚ್ ಕಾಣಿಸಿಕೊಂಡಿಲ್ಲ.





Read More