PHOTOS

ಅಂಬಾನಿ ಮದುವೆಗೆ ವಿದೇಶದಿಂದ ಬಂದ ಬೋಲ್ಡ್‌ ಸಿಸ್ಟರ್ಸ್‌..! ಇವರ ಹಿನ್ನಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!

ಿಲಯನ್ಸ್ ಗ್ರೂಪ್ ಮುಖ್ಯಸ್ತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ವಿವಾಹ ಕಾರ್ಯಕ್ರಮ ಅದ್ದೂರಿ...

Advertisement
1/5

ರಿಲಯನ್ಸ್ ಗ್ರೂಪ್ ಮುಖ್ಯಸ್ತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಮೂರು ದಿನಗಳ ಉತ್ಸವದಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಜಾಗತಿಕ ತಾರೆಗಳಾದ, ಅಮೇರಿಕನ್ ರಿಯಾಲಿಟಿ ಟಿವಿ ಸೆಲೆಬ್ರಿಟಿಗಳಾದ ಕಿಮ್ ಕಾರ್ಡಶಿಯಾನ್ ಮತ್ತು ಖ್ಲೋಯ್ ಕಾರ್ಡಶಿಯಾನ್ ಕೂಡ ಈ ಆಚರಣೆಗಳಲ್ಲಿ ಭಾಗವಹಿಸಿದ್ದಾರೆ.   

2/5

ಅನಂತ್ ಮತ್ತು ರಾಧಿಕಾ ಅವರ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ಕಿಮ್ ಕರ್ದಾಶಿಯಾನ್ ಮತ್ತು ಅವರ ಸಹೋದರಿ ಖ್ಲೋ ಕರ್ದಾಶಿಯಾನ್ ಮುಂಬೈಗೆ ಆಗಮಿಸಿದ್ದರು. ಇವರ ಜೊತೆಗೆ ಪ್ರೊಡಕ್ಷನ್ ಯೂನಿಟ್ ಕೂಡ ಮದುವೆ ಸಂಭ್ರಮದ ಚಿತ್ರೀಕರಣಕ್ಕೆ ಬಂದಿತ್ತು. ಅನಂತ್ ಅವರ ವಿವಾಹ ಸಮಾರಂಭದ ತುಣುಕುಗಳು ಸಹೋದರಿಯರ ಜನಪ್ರಿಯ ಕಾರ್ಯಕ್ರಮ 'ದಿ ಕಾರ್ಡಶಿಯನ್ಸ್' ರಿಯಾಲಿಟಿ ಶೋನಲ್ಲಿ ಪ್ರಸಾರವಾಗಲಿದೆ. ಹುಲು ಒಟಿಟಿಯ ಮುಂದಿನ ಸೀಸನ್‌ನಲ್ಲಿ ಈ ಮದುವೆಯ ತುನುಕುಗಳು ಹೈಲೈಟ್ ಆಗಲಿದೆ ಎಂಬ ವರದಿಗಳಿವೆ.  

3/5

ಕಿಮ್ ಕಾರ್ಡಶಿಯಾನ್ ಇತ್ತೀಚೆಗೆ ತನ್ನ ಸಹೋದರಿ ಖ್ಲೋ ಜೊತೆಗಿನ ಫೋಟೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಭಾರತಕ್ಕೆ ಬಂದಿಳಿದಿದ್ದು, ವಿಡಿಯೋ ಚಿತ್ರೀಕರಣ ಮಾಡಿ ಅಲ್ಲಿನ ವಿಷಯಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾಳೆ. ಇದರೊಂದಿಗೆ 'ದಿ ಕಾರ್ಡಶಿಯನ್ಸ್' ಶೋನಲ್ಲಿ ಅನಂತ್ ಮದುವೆ ಸಂಭ್ರಮದ ಝಲಕ್ ತೋರಿಸುವ ಸಾಧ್ಯತೆ ಇದೆಯಂತೆ.  

4/5

ರಿಯಾಲಿಟಿ ಶೋ ತಾರೆ ಕಿಮ್ ಕಾರ್ಡಶಿಯಾನ್ ಶುಕ್ರವಾರ ಮುಂಜಾನೆ ಭಾರತಕ್ಕೆ ಆಗಮಿಸಿದ್ದಾರೆ. ತಾಜ್ ಮಹಲ್ ಹೋಟೆಲ್‌ನಲ್ಲಿ ಸಹೋದರಿಯರಿಗೆ ಭವ್ಯ ಸ್ವಾಗತ ದೊರೆಯಿತು. ಮುಂಬೈನ ತಾಜ್‌ಮಹಲ್‌ ಹೋಟೆಲ್‌ ಸಿಬ್ಬಂದಿ ಕಿಮ್‌ಗೆ ಹೂವಿನ ಹಾರ ಮತ್ತು ಹಣೆಗೆ ಕುಂಕುಮ ಇಟ್ಟು ಸ್ವಾಗತಿಸಿದರು. ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಿಮ್ ಕೆಂಪು ಬಣ್ಣದ ಲೆಹೆಂಗಾದಲ್ಲಿ ಅತ್ಯಾಕರ್ಷಕವಾಗಿ ಕಾಣುತ್ತಿದ್ದರು. ಖ್ಲೋ ಗೋಲ್ಡನ್ ಸೀರೆಯಲ್ಲಿ ಬೆರಗುಗೊಳಿಸಿದಳು. ಇಬ್ಬರೂ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

5/5

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣ್ಯರು ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ, ಅವರ ಪತಿ, ಅಮೇರಿಕನ್ ಗಾಯಕ ನಿಕ್ ಜೋನಾಸ್, WWE ಸೂಪರ್‌ಸ್ಟಾರ್ ಜಾನ್ ಸೆನಾ, ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೋ ಮತ್ತು ಇತರ ಸೆಲೆಬ್ರಿಟಿಗಳು ಭಾಗವಹಿಸಿದ್ದರು.  





Read More