PHOTOS

ಬಿಗ್ ಬಾಸ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ !ಈ ವಾರ ಒಟ್ಟು ಮೂರು ಎಲಿಮಿನೇಶನ್ ! ದೊಡ್ಮನೆಯಿಂದ ಹೊರಬರುತ್ತಿರುವ ಸ್ಪರ್ಧಿಗಳು ಇವರೇ !

ಇನ್ನು 11 ದಿನಗಳಲ್ಲಿ ಮುಕ್ತಾಯವಾಗಲಿದೆ.ಜನವರಿ 27, ಮತ್ತು 28ರಂದು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿ...

Advertisement
1/7
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್ ಕನ್ನಡ

ಬಿಗ್ ಬಾಸ್ ಕನ್ನಡ ಇನ್ನೇನು ಮುಕ್ತಾಯದ ಹಂತ ತಲುಪಿದೆ. ಇನ್ನು 11 ದಿನಗಳಲ್ಲಿ ಫಿನಾಲೆ ನಡೆಯಲಿದೆ. ಜನವರಿ 27, ಮತ್ತು 28ರಂದು ಫಿನಾಲೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

2/7
ಫಿನಾಲೆ
ಫಿನಾಲೆ

ಫಿನಾಲೆ ತಲುವುದು ಐದು ಸ್ಪರ್ಧಿಗಳು. ಪ್ರತಿ ಬಾರಿ ಟಾಪ್ 5ಯಲ್ಲಿ ಬರುವ ಐದು ಸ್ಪರ್ಧಿಗಳು ಫಿನಾಲೆ ವಾರದಲ್ಲಿ ಉಳಿದುಕೊಳ್ಳುತ್ತಾರೆ.    

3/7
ಮನೆಯಲ್ಲಿದ್ದಾರೆ 8 ಮಂದಿ ಸ್ಪರ್ಧಿಗಳು
ಮನೆಯಲ್ಲಿದ್ದಾರೆ 8 ಮಂದಿ ಸ್ಪರ್ಧಿಗಳು

ಆದರೆ ಈ ಬಾರಿ ಮನೆಯಲ್ಲಿ ಇನ್ನು 8 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಳೆದ ವಾರ ಕೂಡಾ ಎಲಿಮಿನೇಶನ್ ಇರದ ಕಾರಣ ಮನೆಯೊಳಗೆ ಇನ್ನೂ 8 ಮಂದಿ ಉಳಿದುಕೊಂಡಿದ್ದಾರೆ. 

4/7
ಮಿಡ್ ವೀಕ್ ಎಲಿಮಿನೇಶನ್
ಮಿಡ್ ವೀಕ್ ಎಲಿಮಿನೇಶನ್

ಕಿಚ್ಚ ಸುದೀಪ ವಾರಾಂತ್ಯದಲ್ಲಿ ನೀಡಿರುವ ಸುಳಿವಿನ ಪ್ರಕಾರ ಈ ವಾರ ಮಿಡ್ ವೀಕ್ ಎಲಿಮಿನೇಶನ್ ಇರುವುದು ಪಕ್ಕಾ. ಈ ಹಿಂದಿನ ಸೀಸನ್ ನಲ್ಲಿ ಕೂಡಾ ಮಿಡ್ ವೀಕ್ ಎಲಿಮಿನೇಶನ್ ನಡೆದಿದೆ. ಆದರೆ ಈ ಬಾರಿ ಮಿಡ್ ವೀಕ್ ನಲ್ಲಿ ಒಬ್ಬರಲ್ಲ ಇಬ್ಬರು ಮನೆಯಿಂದ ಹೊರ ನಡೆಯುತ್ತಾರೆ ಎಂದು ಹೇಳಲಾಗುತ್ತಿದೆ.   

5/7
ವಾರಾಂತ್ಯದಲ್ಲಿ ಇಬ್ಬರು ಹೊರಕ್ಕೆ
ವಾರಾಂತ್ಯದಲ್ಲಿ ಇಬ್ಬರು ಹೊರಕ್ಕೆ

ಹೀಗೆ ಇಬ್ಬರು ವಾರದ ಮಧ್ಯದಲ್ಲಿ ಮನೆಯಿಂದ ಹೊರ ಬಂದರೆ ಮತ್ತೆ ಆರು ಮಂದಿ ಉಳಿದುಕೊಳ್ಳುತ್ತಾರೆ. ಇವರಲ್ಲಿ ಒಬ್ಬರು ವಾರಾಂತ್ಯದಲ್ಲಿ  ಮನೆಯಿಂದ ಎಲಿಮಿನೆಟ್ ಆಗುತ್ತಾರೆ. ಆಗ ಐದು ಮಂದಿ ಫಿನಾಲೆ ವಾರ ತಲುಪುತ್ತಾರೆ. 

6/7
ಮೂವರು ಮನೆಯಿಂದ ಹೊರಕ್ಕೆ
ಮೂವರು ಮನೆಯಿಂದ ಹೊರಕ್ಕೆ

ಇನ್ನು ಎಲಿಮಿನೆಟ್ ಆಗುವವರು ಯಾರು ಎಂದು ನೋಡುವುದಾದರೆ ನಮ್ರತಾ ಗೌಡ, ತುಕಾಲಿ ಸಂತು ಮತ್ತು ತನಿಷಾ ಹೆಸರು ಕೇಳಿ ಬರುತ್ತಿದೆ. ಉಳಿದ ಸ್ಪರ್ಧಿಗಳನ್ನು ಹೋಲಿಸಿ ನೋಡಿದರೆ ಇವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗುವ ಬೆಂಬಲ ಕೂಡಾ ಕಡಿಮೆ ಎಂದು ಹೇಳಲಾಗುತ್ತಿದೆ.

7/7
ಟಾಪ್ ಫೈವ್
ಟಾಪ್ ಫೈವ್

ಉಳಿದಂತೆ ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿರುವ ಕಾರ್ತಿಕ್, ವಿನಯ್ ಗೌಡ, ಸಂಗೀತಾ ಶೃಂಗೇರಿ,  ಡ್ರೋನ್ ಪ್ರತಾಪ್, ವರ್ತೂರು ಸಂತೋಷ್ ಟಾಪ್ ಫೈವ್ ಸ್ಪರ್ಧಿಗಳಾಗಿ ಫೈನಲ್ ತಲುಪುತ್ತಾರೆ ಎನ್ನಲಾಗಿದೆ. 





Read More