PHOTOS

Bhadra Yoga: ಬುಧ ಸಂಚಾರದಿಂದ ಭದ್ರ ಯೋಗ, ಮೂರು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

Bhadra Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ, ಹಣ, ಸಂಪತ್ತು, ಬುದ್ಧಿಕಾರಕ ಎಂದು ಕರೆಯಲ್ಪಡುವ ಬುಧನು ಇತ್ತೀಚೆಗಷ್ಟೇ ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ ಅತ...

Advertisement
1/7
ಬುಧ ರಾಶಿ ಪರಿವರ್ತನೆ
ಬುಧ ರಾಶಿ ಪರಿವರ್ತನೆ

ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಅಕ್ಟೋಬರ್ 01, 2023 ರಂದು ರಾಶಿ ಪರಿವರ್ತನೆ ಹೊಂದುವ ಮೂಲಕ ಕನ್ಯಾ ರಾಶಿಗೆ ಪ್ರವೇಶಿಸಿದ್ದಾರೆ. 

2/7
ಬುಧ ಈ ರಾಶಿಯಲ್ಲಿದ್ದಾಗ ಭದ್ರ ಯೋಗ
ಬುಧ ಈ ರಾಶಿಯಲ್ಲಿದ್ದಾಗ ಭದ್ರ ಯೋಗ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧನು ತನ್ನದೇ ಆದ ರಾಶಿಗಳಿಗೆ ಎಂದರೆ ಮಿಥುನ ರಾಶಿ ಮತ್ತು ಕನ್ಯಾ ರಾಶಿಗೆ ಪ್ರವೇಶಿಸಿದಾಗ ಭದ್ರ ರಾಜಯೋಗವು ನಿರ್ಮಾಣವಾಗುತ್ತದೆ. 

3/7
ಭದ್ರ ಯೋಗ
ಭದ್ರ ಯೋಗ

ಇದೀಗ ಸ್ವ ರಾಶಿಯಲ್ಲಿ ಎಂದರೆ ಕನ್ಯಾ ರಾಶಿಯಲ್ಲಿ ಬುಧನ ಪ್ರವೇಶದೊಂದಿಗೆ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಭದ್ರ ರಾಜಯೋಗ ನಿರ್ಮಾಣವಾಗಿದೆ. 

4/7
ಭದ್ರ ಯೋಗದ ಪರಿಣಾಮ
ಭದ್ರ ಯೋಗದ ಪರಿಣಾಮ

ಭದ್ರ ಯೋಗದ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅತ್ಯಂತ ಮಂಗಳಕರ ಸಮಯ ಎಂದು ಬಣ್ಣಿಸಲಾಗುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ... 

5/7
ಮಿಥುನ ರಾಶಿ
ಮಿಥುನ ರಾಶಿ

ಬುಧ ರಾಶಿ ಪರಿವರ್ತನೆಯಿಂದ ನಿರ್ಮಾಣವಾಗಿರುವ ಭದ್ರ ಯೋಗವು ಮಿಥುನ ರಾಶಿಯವರಿಗೆ ಅವರ ಪ್ರತಿ ಕೆಲಸದಲ್ಲಿಯೂ ಕೈಹಿಡಿಯಲಿದೆ. ವೃತ್ತಿ ವ್ಯವಹಾರಗಳು ಅಂದುಕೊಂಡಂತೆ ನಡೆಯಲಿದ್ದು, ಬಂಪರ್ ಲಾಭಗಳಿಸುವ ಅವಕಾಶಗಳಿವೆ. ಈ ಯೋಗವು ನಿಮ್ಮ ವೃತ್ತಿಜೀವನಕ್ಕೆ ಬಹಳ ಫಲಪ್ರದವಾಗಿದೆ ಎಂದು ಸಾಬೀತುಪಡಿಸುತ್ತದೆ.

6/7
ಕನ್ಯಾ ರಾಶಿ
ಕನ್ಯಾ ರಾಶಿ

ಸ್ವ ರಾಶಿಯಲ್ಲಿ ನಿರ್ಮಾಣಗೊಳ್ಳಲಿರುವ ಭದ್ರ ಯೋಗವು ಕನ್ಯಾ ರಾಶಿಯ ಜನರ ವಿಶ್ಲೇಷಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯಗಳು ಸುಧಾರಿಸುತ್ತವೆ. ಇದು ನಿಮಗೆ ನಿಮ್ಮ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಂಯದಲ್ಲಿ ನೀವು ಹಲವು ಪ್ರಮುಖ ಕೆಲಸಗಳಲ್ಲಿ ಯಶಸ್ಸನ್ನು ನಿಮ್ಮದಾಗಿಸುವಿರಿ. 

7/7
ಧನು ರಾಶಿ
ಧನು ರಾಶಿ

ಶುಭಕರ ಭದ್ರ ಯೋಗದ ರಚನೆಯಿಂದ ಧನು ರಾಶಿಯ ಜನರು ಧನಾತ್ಮಕ ಫಲಗಳನ್ನು ಅನುಭವಿಸಲಿದ್ದಾರೆ. ಈ ಸಮಯದಲ್ಲಿ ನಟರು, ಕಲಾವಿದರು, ಕ್ರೀಡಾಪಟುಗಳು ಮತ್ತು ಉದ್ಯಮಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವುದರ ಜೊತೆಗೆ ಬಂಪರ್ ಧನ ಲಾಭವನ್ನು ಸಹ ನಿರೀಕ್ಷಿಸಬಹುದು. ಕೆಲಸ ಬದಲಾಯಿಸಲು ಯೋಚಿಸುವವರಿಗೆ ಇದು ಒಳ್ಳೆಯ ಸಮಯ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  





Read More