PHOTOS

Astrology: ಈ ರಾಶಿಯವರು ಉತ್ತಮ ಸ್ನೇಹಿತರಷ್ಟೇ ಅಲ್ಲ, ದ್ವೇಷಕಾರುವುದರಲ್ಲೂ ನಿಸ್ಸೀಮರು!

                            

...
Advertisement
1/5
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿಯ ಜನರು ಸ್ವಲ್ಪ ಸೊಕ್ಕಿನವರು ಮತ್ತು ಇತರರಿಗಿಂತ ತಮ್ಮನ್ನು ತಾವು ಶ್ರೇಷ್ಠರೆಂದು ಪರಿಗಣಿಸುತ್ತಾರೆ. ಹಾಗಾಗಿಯೇ ಇವರು ಕಡಿಮೆ ಸ್ನೇಹಿತರನ್ನು ಹೊಂದಿರುತ್ತಾರೆ. ಆದಾಗ್ಯೂ, ಅವರಿಂದ ಏನಾದರೂ ಕೆಟ್ಟದ್ದನ್ನು ಅನುಭವಿಸಿದರೆ, ಅವರು ತಮ್ಮ ಆತ್ಮೀಯ ಸ್ನೇಹಿತರನ್ನೂ ಸಹ ಶತ್ರು ಎಂದು ಪರಿಗಣಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಈ ರಾಶಿಯ ಒಡೆಯ ಮಂಗಳ ಗ್ರಹವಾದ್ದರಿಂದ ಅವರಲ್ಲಿ ಕೋಪ ಜಾಸ್ತಿ ಇರುತ್ತದೆ.  

2/5
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿಯ ಜನರು ಉತ್ತಮ ಸ್ನೇಹಿತರೆಂದು ಸಾಬೀತುಪಡಿಸುತ್ತಾರೆ. ಅವರು ತುಂಬಾ ಹರ್ಷಚಿತ್ತದಿಂದ ಮತ್ತು ಪ್ರಾಮಾಣಿಕರಾಗಿರುತ್ತಾರೆ. ಆದರೆ ಅವರಿಗೆ ಸ್ವಲ್ಪ ಕಿರುಕುಳ ನೀಡಿದರೆ, ಸೇಡು ತೀರಿಸಿಕೊಳ್ಳಲು ಅವರು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆಗ ಅವರ ಕೋಪದಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ.

3/5
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿಯ ಜನರು ಯಾರನ್ನೂ ಸಾರಾಸಗಟಾಗಿ ಶತ್ರುವನ್ನಾಗಿ ಮಾಡದಿದ್ದರೂ, ಯಾರಾದರೂ ತಮ್ಮ ಭಾವನೆಗಳೊಂದಿಗೆ ಆಟವಾಡಿದರೆ, ಅವರು ಅವನನ್ನು ಬಿಡುವುದಿಲ್ಲ. ಇವರು ಯಾರನ್ನಾದರೂ ತಮ್ಮ ಶತ್ರು ಎಂದು ಪರಿಗಣಿಸಿದರೆ ತಮ್ಮ ಕೊನೆಯ ಉಸಿರಿನವರೆಗೂ ಅವರೊಂದಿಗೆ ದ್ವೇಷಕಾರುತ್ತಾರೆ. ಈ ಜನರು ಕೋಪದಲ್ಲಿ ಏನು ಬೇಕಾದರೂ ಮಾಡುತ್ತಾರೆ.

4/5
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರನ್ನು ಉತ್ತಮ ಸ್ನೇಹಿತರು ಎಂದು ಹೇಳಲಾಗುತ್ತದೆ. ಇವರು ಸುಳ್ಳನ್ನು ಇಷ್ಟಪಡುವುದಿಲ್ಲ. ಯಾರಾದರೂ ತಮಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿದರೆ ಅವರು ಯಾವುದೇ ಕಾರಣಕ್ಕೂ ಅಂತಹವರನ್ನು ಕ್ಷಮಿಸುವುದಿಲ್ಲ.

5/5
ಧನು ರಾಶಿ
ಧನು ರಾಶಿ

ಧನು ರಾಶಿಯ ಜನರು ತಮ್ಮ ವೃತ್ತಿ ಮತ್ತು ಕೆಲಸದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಆದರೆ ಇವರನ್ನು ಕೆಣಕಿದವರನ್ನು ಸುಮ್ಮನೆ ಬಿಡುವುದಿಲ್ಲ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More