PHOTOS

ಈ ನಾಲ್ಕು ರಾಶಿಯವರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ!

Astrology: ಕೆಲವೊಮ್ಮೆ ಯಾವುದಾದರೊಂದು ಕಾರಣಕ್ಕೆ ಹೇಳುವ ಸಣ್ಣ-ಪುಟ್ಟ ಸುಳ್ಳುಗಳ ಹಿಂದಿನ ಉದ್ದೇಶ ಒಳ್ಳೆಯದೇ ಆಗಿರಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ, ದ್...

Advertisement
1/5
ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಈ ನಾಲ್ಕು ರಾಶಿಯವರು
ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಈ ನಾಲ್ಕು ರಾಶಿಯವರು

ಜ್ಯೋತಿಷ್ಯದ ಪ್ರಕಾರ, ನಾಲ್ಕು ರಾಶಿಯವರು ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ ಎನ್ನಲಾಗುತ್ತದೆ. ವಿಶೇಷವೆಂದರೆ, ಬೇರೆಯವರು ಇವರ ಮಾತಿನ ಮೋಡಿಗೆ ಬೇಗನೆ ಇವರ ಬಲೆಗೆ ಬೀಳುತ್ತಾರಂತೆ... ಅಂತಹ ರಾಶಿಚಕ್ರಗಳು ಯಾವುವು ತಿಳಿಯೋಣ... 

2/5
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,  ಈ ರಾಶಿಯವರು ವಿನಾಕಾರಣ ಸುಳ್ಳು ಹೇಳುವ ಅಭ್ಯಾಸ ಹೊಂದಿರುತ್ತಾರೆ. ಇವರು ಎಷ್ಟರ ಮಟ್ಟಿಗೆ ಸುಳ್ಳು ಹೇಳುತ್ತಾರೆಂದರೆ, ಯಾರಿಗೂ ಅಷ್ಟು ಸುಲಭವಾಗಿ ಇವರ ಸುಳ್ಳು ಅರ್ಥವಾಗುವುದೇ ಇಲ್ಲ. ಇವರು ತಮ್ಮ ಮಾತಿನ ಮೋಡಿಯಲ್ಲಿ ಎಂತಹವರನ್ನೇ ಆದರೂ ಬಹಳ ಸುಲಭವಾಗಿ ಬಲೆಗೆ ಬೀಲಿಸುತ್ತಾರೆ.

3/5
ಸಿಂಹ ರಾಶಿ
 ಸಿಂಹ ರಾಶಿ

ಸಿಂಹ ರಾಶಿ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಿಂಹ ರಾಶಿಯವರು ಅವರಿರುವುದಕ್ಕಿಂತ ಭಿನ್ನ ಎಂದು ತೋರಿಸಿಕೊಳ್ಳಲು ಇಷ್ಟಪಡುತ್ತಾರೆ. ಇದಕ್ಕಾಗಿ ಅವರು ಎಂತಹ ದೊಡ್ಡ ಸುಳ್ಳನ್ನು ಕೂಡ ಹೇಳಲು ಹಿಂಜರಿಯುವುದಿಲ್ಲ ಎನ್ನಲಾಗುತ್ತದೆ. ಆದಾಗ್ಯೂ, ಇವರು ಸುಳ್ಳು ಹೇಳುವುದರಲ್ಲಿ ಅಷ್ಟು ಪರಿಣಿತರಲ್ಲದ ಕಾರಣ ಕೆಲವೊಮ್ಮೆ ಸಿಕ್ಕಿ ಬೀಳುತ್ತಾರೆ.

4/5
ತುಲಾ ರಾಶಿ
 ತುಲಾ ರಾಶಿ

ತುಲಾ ರಾಶಿ:  ಬಹಳ ಉದಾರ ಮನೋಭಾವದವರಾದ ತುಲಾ ರಾಶಿಯವರು ತಮ್ಮ ಮಾತುಗಳಿಂದ ಇತರರಿಗೆ ನೋವಾಗುತ್ತದೆ ಎಂದು ತಿಳಿದರೆ ಅಂತಹ ಸಂದರ್ಭದಲ್ಲಿ ಸುಳ್ಳು ಹೇಳುತ್ತಾರೆ. ಇವರು ತಮಗಾಗಿ ಸುಳ್ಳು ಹೇಳುವುದಕ್ಕಿಂತ ಇತರರಿಗಾಗಿ ಸುಳ್ಳು ಹೇಳುತ್ತಾರೆ.

5/5
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ: ಈ ರಾಶಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು.  ಸುಳ್ಳು ಹೇಳುವುದರಲ್ಲಿ ನಿಪುಣರಾಗಿರುವ ಇವರು ಸುಳ್ಳನ್ನು ಸತ್ಯವೆಂದು ಬಿಂಬಿಸುವುದರಲ್ಲೂ ಪರಿಣತಿಯನ್ನು ಹೊಂದಿರುತ್ತಾರೆ. ಆದರೆ, ಇವರು ಯಾವುದಾದರೂ ಬಲವಾದ ಕಾರಣವಿದ್ದಾಗಲಷ್ಟೇ ಸುಳ್ಳು ಹೇಳುತ್ತಾರೆ.

ಸೂಚನೆ: ಈ ಫೋಟೋ ಗ್ಯಾಲರಿಯಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 





Read More