PHOTOS

ನಿಮಗೂ ಪದೇ ಪದೇ ಫೋನ್‌ನ ನೆಟ್‌ವರ್ಕ್ ಸಮಸ್ಯೆ ಬಾಧಿಸುತ್ತಿದೆಯೇ? ಇಲ್ಲಿವೆ ಸುಲಭ ಪರಿಹಾರ

Smartphone Network Disappearing Issue: ಕೆಲವು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಅದರಲ್ಲೂ, ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ನ...

Advertisement
1/5

ಎಷ್ಟೋ ಬಾರಿ ದಿಢೀರನೆ ನೆಟ್‌ವರ್ಕ್ ಮಾಯವಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಮನೆಯೊಳಗೆ ಕಾಲಿಡುತ್ತಿದ್ದಂತೆ ಫೋನ್ ನೆಟ್‌ವರ್ಕ್ ಕಣ್ಮರೆಯಾಗುತ್ತದೆ. ನಿಮ್ಮ ಮನೆಯಲ್ಲಿಯೂ ಈ ಸಮಸ್ಯೆ ಇದ್ದರೆ ಮನೆಯೊಳಗೆ ನೆಟ್‌ವರ್ಕ್ ಬೂಸ್ಟರ್ ಸಾಧನವನ್ನು ಬಳಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು  ₹ 1500 ರಿಂದ ₹ 4000 ಗಳಿಗೆ ನೆಟ್‌ವರ್ಕ್ ಬೂಸ್ಟರ್ ಸಾಧನ ಲಭ್ಯವಾಗುತ್ತದೆ. 

2/5
ನೀವು ವಾಸಿಸುವ ಕಟ್ಟಡ
ನೀವು ವಾಸಿಸುವ ಕಟ್ಟಡ

ಒಂದೊಮ್ಮೆ ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಅದರಲ್ಲೂ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರೆ ಸಾಧ್ಯವಾದಷ್ಟು ಮೂರು, ನಾಲ್ಕು ಅಥವಾ ಅದಕ್ಕಿಂತ ಎತ್ತರದ ಕಟ್ಟಡಗಳಲ್ಲಿ ಮನೆ ಮಾಡಿಕೊಳ್ಳಿ. ಆಗ ನೆಟ್‌ವರ್ಕ್ ಸಮಸ್ಯೆ ಎದುರಾಗುವುದಿಲ್ಲ. 

3/5
ಗಾಜಿನ ಕಿಟಕಿ
ಗಾಜಿನ ಕಿಟಕಿ

ಮನೆಯಲ್ಲಿ ನಿರ್ಮಿಸಲಾಗಿರುವ ಭಾರೀ ಕಿಟಕಿಗಳು ಕೂಡ ನೆಟ್‌ವರ್ಕ್ ಸಮಸ್ಯೆಯನ್ನು ಉಂಟು ಮಾಡಬಹುದು. ಹಾಗಾಗಿ, ಸಾಧ್ಯವಾದಷ್ಟು ಮನೆಯಲ್ಲಿ ಗಾಜಿನ ಕಿಟಕಿಗಳನ್ನಷ್ಟೇ ಬಳಸಿ. ಇದರಿಂದ ಮನೆಯಲ್ಲಿ ನೆಟ್‌ವರ್ಕ್ ಸಮಸ್ಯೆ ಕಡಿಮೆ ಆಗುತ್ತದೆ. 

4/5
ಫಾಲ್ಸ್ ಸೀಲಿಂಗ್
ಫಾಲ್ಸ್ ಸೀಲಿಂಗ್

ಕೆಲವೊಮ್ಮೆ ಮನೆಯಲ್ಲಿರುವ ಫಾಲ್ಸ್ ಸೀಲಿಂಗ್ ಕೂಡ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದರಿಂಗಾಗಿ ಮನೆಯಲ್ಲಿರುವಾಗ ನಿಮ್ಮ ಫೋನ್‌ಗೆ ಕರೆಗಳು ಬರುವುದಿಲ್ಲ. ಮಾತ್ರವಲ್ಲ, ಇಂಟರ್ನೆಟ್ ಬಳಸಲು ಕೂಡ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಫಾಲ್ಸ್ ಸೀಲಿಂಗ್ ಅನ್ನು ತೆಗೆದುಹಾಕಬೇಕು.

5/5
ಹಾಲ್‌ನಲ್ಲಿ ಕುಳಿತು ಫೋನ್ ಬಳಸಿ
ಹಾಲ್‌ನಲ್ಲಿ ಕುಳಿತು ಫೋನ್ ಬಳಸಿ

ಕೆಲವೆಡೆ ಮನೆಯ ಹಾಲ್‌ನಲ್ಲಿ ನೆಟ್‌ವರ್ಕ್ ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ, ರೂಂ, ಇಲ್ಲವೇ ಮನೆಯ ಇತರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸರಿಯಾರಿ ಸಿಗುವುದಿಲ್ಲ. ಹಾಗಿದ್ದಾಗ ನೀವು ಹಾಲ್‌ನಲ್ಲಿಯೇ ಕುಳಿತು ನಿಮ್ಮ ಫೋನ್ ಕೆಲಸಗಳನ್ನು ಮುಗಿಸಿಕೊಳ್ಳಿ.  





Read More