PHOTOS

ಚಾಮರಾಜನಗರದ ಗ್ರಾಮಕ್ಕೆ ಆನೆ ಲಗ್ಗೆ- ಬೈಕ್, ಮರ, ಮನೆ ಗೇಟ್ ಧ್ವಂಸ

                                   

...
Advertisement
1/5

ಆನೆಯೊಂದು ಗ್ರಾಮಕ್ಕೆ ನುಗ್ಗಿ ದಾಂಧಲೆ ಎಬ್ಬಿಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ. 

2/5

ಮಲೆಮಹದೇಶ್ವರ ಬೆಟ್ಟದ ತಪ್ಪಲಿನ‌ ಗ್ರಾಮ ಇದಾಗಿದ್ದು ಒಂಟಿ ಸಲಗವೊಂದು ರಾತ್ರಿ ಗ್ರಾಮಕ್ಕೆ ಲಗ್ಗೆ ಇಟ್ಟು ನಾಗಣ್ಣ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಗೇಟ್ ನ್ನು ತುಳಿದು ಹಾನಿ ಮಾಡಿದೆ. 

3/5

ಇನ್ನು , ಹಲಸಿನ ಮರವನ್ನು ಮುರಿದು ಹಾಕಿದ್ದು ಫಸಲು ಕೂಡ ಹಾನಿಯಾಗಿದೆ.‌ 

4/5

ಆನೆಯ ದಾಳಿ ಶಬ್ದ ಕೇಳುತ್ತಿದ್ದಂತೆ ಜಾಗೃತರಾಗುವ ಗ್ರಾಮಸ್ಥರು‌ ನಿತ್ಯ ರಾತ್ರಿ  ಕಾಡಿನತ್ತ ಓಡಿಸುತ್ತಿದ್ದಾರೆ. 

5/5

ನಿತ್ಯ ಆನೆಯ ಆತಂಕದಲ್ಲೇ ಗ್ರಾಮಸ್ಥರು  ಬದುಕುತ್ತಿದ್ದು ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ತಿಳಿದುಬಂದಿದೆ.





Read More