PHOTOS

ವಾರದಲ್ಲಿ 3 ಸೀತಾಫಲ ಹಣ್ಣ ತಿಂದರೆ ಸಾಕು… ಈ ಕಾಯಿಲೆಗಳಿಂದ ಸಿಗುತ್ತೆ ಶಾಶ್ವತ ಮುಕ್ತಿ

Health Benefits of Custard Apple: ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಣ್ಣುಗಳಲ್ಲಿ ಅನೇ...

Advertisement
1/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

ಸೀತಾಫಲ ಹಣ್ಣಿನಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ವಿಟಮಿನ್ ಬಿ6 ಮತ್ತು ಐರನ್ ಇತ್ಯಾದಿಗಳು ಹೇರಳವಾಗಿವೆ. ಈ ಹಣ್ಣನ್ನು ಹೃದಯ ಮತ್ತು ಮಧುಮೇಹ ಎರಡಕ್ಕೂ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲದೆ, ಈ ಹಣ್ಣನ್ನು ವಾರಕ್ಕೆ ಮೂರು ಬಾರಿ ಹಾಲಿನ ಜೊತೆ ಬೆರೆಸಿ ಕುಡಿದರೆ ಅದ್ಭುತ ಪ್ರಯೋಜನಗಳು ಸಿಗುತ್ತವೆ

2/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

ವೆಬ್‌ ಎಮ್‌’ಡಿ ಪ್ರಕಾರ, ಸೀತಾಫಲದಲ್ಲಿರುವ ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿದೆ. ಸೀತಾಫಲ ಹೃದಯ ಮತ್ತು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಪೂರೈಸಲು ಸೀತಾಫಲವನ್ನು ಸೇವಿಸಬಹುದು.

3/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

ಸೀತಾಫಲವು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಸೀತಾಫಲದಲ್ಲಿರುವ ಲುಟೀನ್ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಅನೇಕ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

4/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

ಸೀತಾಫಲವು ರಕ್ತದೊತ್ತಡಕ್ಕೆ ತುಂಬಾ ಪ್ರಯೋಜನಕಾರಿ. ಸೀತಾಫಲದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇದ್ದು, ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದ್ರೋಗವನ್ನು ತಡೆಗಟ್ಟಲು ಸಹ ಸಾಧ್ಯವಿದೆ.

5/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

ಸೀತಾಫಲವನ್ನು ತಿನ್ನುವುದು ಅಸ್ತಮಾ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯಿಂದ ಶ್ವಾಸಕೋಶದಲ್ಲಿನ ಊತ ನಿವಾರಣೆಯಾಗುವುದಲ್ಲದೆ ಅಲರ್ಜಿ ಸಮಸ್ಯೆಯೂ ಕಡಿಮೆಯಾಗುತ್ತದೆ.

6/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

ಸೀತಾಫಲದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.

7/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

ಸೀತಾಫಲವನ್ನು ವಿಟಮಿನ್ ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದನ್ನು ಹಾಲಿನ ಜೊತೆ ಬೆರೆಸಿ ಜ್ಯೂಸ್’ನಂತೆ ಮಾಡಿಕೊಂಡು ಸೇವಿಸಿದರೆ, ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ತುಂಬಾ ಸಹಾಯಕವಾಗಿದೆ.

8/8
ಸೀತಾಫಲ ಹಣ್ಣಿನ ಪ್ರಯೋಜನ
ಸೀತಾಫಲ ಹಣ್ಣಿನ ಪ್ರಯೋಜನ

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)





Read More